ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಶಿಕ್ಷಕರ ದಿನೋತ್ಸವ ಸಮಿತಿ, ಸಿಂದಗಿ ವತಿಯಿಂದ ಶಿಕ್ಷಕರ ದಿನೋತ್ಸವ ಕಾರ್ಯಕ್ರಮ ಹಮ್ಮಿಕೋಳಲಾಗಿತ್ತು. ಕಾರ್ಯಕ್ರಮವು ಶಿಕ್ಷಕಿ ಜಿ.ವ್ಹಿ.ಅಳ್ಳಗಿ ಇವರು ಪ್ರಾರ್ಥನೆ ಗೀತೆ ಹಾಗೂ ನಾಡಗೀತೆ ಹಾಡಿದರೆ ರೈತ ಗೀತೆಯನ್ನು ಶಿಕ್ಷಕ ಜಗದೀಶ ಶಿಂಗೆ ಹಾಡುವುದರ ಮುಖಾಂತಾರ ಕಾರ್ಯಕ್ರಮ ಪ್ರಾರಂಭಿಸಿದರು.
ರಾಷ್ಟ್ರದ ಶೈಕ್ಷಣಿಕ ಅಭಿವೃದ್ಧಿ ನೋಡಿ ಇಂದು ದೇಶವನ್ನು ಅಳೆಯುವ ಕಾಲ ಇದಾಗಿದೆ, ಮಾನವ ಸಂಪನ್ಮೂಲವನ್ನು ಅಭೀವೃದ್ಧಿಪಡಿಸುವ ಕೆಲಸ ಶಿಕ್ಷಕರು ಮಾಡುತ್ತಿದ್ದಾರೆ ಕಾರ್ಯಕ್ರಮಕ್ಕೆ ಒಟ್ಟಾಗಿ ಕೆಲಸ ನಿರ್ವಹಿಸಿದ್ದು ಸಂತಸ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಹರನಾಳ ಇವರು ಪ್ರಾಸ್ತಾವಿಕ ನುಡಿಯನ್ನಾಡಿದರು.

ಶಾಸಕ ರಮೇಶ ಭೂಸನೂರ ಮಾತನಾಡುತ್ತಿರುವುದು.