Home Uncategorized ಆನೆಕಾಲು ಮಾತ್ರೆ ಸೇವಿಸಿ ಶಾಲಾ ಮಕ್ಕಳು ಅಸ್ವಸ್ತ | ಮಾತ್ರೆ ಬಗ್ಗೆ ತಪ್ಪು ತಿಳುವಳಿಕೆ ಬೇಡ ವೈದ್ಯ ಖಾನ್

ಆನೆಕಾಲು ಮಾತ್ರೆ ಸೇವಿಸಿ ಶಾಲಾ ಮಕ್ಕಳು ಅಸ್ವಸ್ತ | ಮಾತ್ರೆ ಬಗ್ಗೆ ತಪ್ಪು ತಿಳುವಳಿಕೆ ಬೇಡ ವೈದ್ಯ ಖಾನ್

by vegadhut@gmail.com.
0 comments

ಸಿಂದಗಿ : ತಾಲೂಕಿನ ಕಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಡಿಇಸಿ ಮಾತ್ರೆಗಳನ್ನು ಸೇವಿಸಿ ತಾಲೂಕ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ಶಾಲೆಯಲ್ಲಿ ನೀಡಲಾದ ಡಿಇಸಿ (ಆನೆಕಾಲು)  ಮಾತ್ರೆಗಳನ್ನು ಸೇವಿಸಿ ಹೊಟ್ಟೆ ನೋವು, ವಾಕರಿಕೆ, ತಲೆಸುತ್ತಿನ ಲಕ್ಷಣಗಳಿಂದ ಬಳಲುತ್ತಿದ್ದ ಶ್ರಾವಣಿ ಮಾದರ(8), ಅಕ್ಷತಾ ಮಾಲಗತ್ತಿ(11), ಜ್ಯೋತಿ ಪೂಜಾರಿ(11), ಬಿಂದು ವಾಲಿಕಾರ(7), ಭಾಗ್ಯಶ್ರೀ ಪ್ಯಾರಸಾಬಾದಿ(11), ರೇಖಾ ಹಳಕೂರ(10), ಪ್ರಿಯಾಂಕಾ ಪೂಜಾರಿ(11), ಅಕ್ಷತಾ ಬಿರಾದಾರ(9) ಹಾಗೂ ಸಿಂದಗಿ ಪಟ್ಟಣದ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಚಂದ್ರಿಕಾ ಪಾಟೀಲ(14) ಸಾರ್ವನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಲಹಳ್ಳಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರದ ಸಮಯದಲ್ಲಿ ಶಾಲೆಯ 150 ವಿದ್ಯಾರ್ಥಿಗಳಿಗೆ ಮಾತ್ರೆ ನೀಡಲಾಗಿತ್ತು. ಅರ್ಧಗಂಟೆ ನಂತರದಲ್ಲಿ ಮಾತ್ರೆ ಸೇವಿಸಿದ್ದ 8 ವಿದ್ಯಾರ್ಥಿನಿಯರಲ್ಲಿ ಹೊಟ್ಟೆ ಸಂಕಟ ಸೇರಿದಂತೆ ವಿವಿಧ ಸಮಸ್ಯೆಗಳು ಕಂಡುಬಂದಿವೆ. ತಕ್ಷಣವೇ ವಿದ್ಯಾರ್ಥಿಗಳಿಗೆ ಓಆರ್‌ಎಸ್ ನೀಡಿ ಉಪಚಾರ ಮಾಡಲಾಗಿತ್ತು. ಸಂಜೆ 5 ಗಂಟೆ ನಂತರದಲ್ಲಿ ಹೊಟ್ಟೆ ನೋವು, ತಲೆ ಸುತ್ತು, ವಾಂತಿ ಲಕ್ಷಣಗಳು ಉಲ್ಬಣಗೊಂಡ ಕಾರಣ ಶಾಲೆಯ ಶಿಕ್ಷಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

banner

ಅಪೂರ್ಣ ಊಟ ಮಾಡಿ ಮಾತ್ರೆ ಸೇವಿಸುವುದರಿಂದ  ಈ ರೀತಿಯ ಸಮಸ್ಯೆಗಳು ಆಗುತ್ತವೆ.  ಪೋಷಕರಿಗೆ ಆತಂಕ ಬೇಡ ಆನೆಕಾಲು ಮಾತ್ರೆ ಮುಂದಿನ ಅನಾಹುತ ತಪ್ಪಿಸಲು ಮುನ್ನೇಚರಿಕಾ ಕ್ರಮಕ್ಕಾಗಿ ನೀಡಲಾಗುತ್ತದೆ. ಮಾತ್ರೆಯ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ.

– ಪಾಜೀಲ್ ಅಲಿ ಖಾನ್ ಕರ್ತವ್ಯ ನಿರತ ವೈದ್ಯರು  ಸಾರ್ವಜನಿಕ ಆಸ್ಪತ್ರೆ ಸಿಂದಗಿ

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news