
ಸಿಂದಗಿ : ಕಾಂಗ್ರೇಸ್ ಪ್ರಜಾಧ್ವನಿ ಕಾರ್ಯಕ್ರಮದ ಹಿನ್ನಲ್ಲೆ ಮಾಜಿ ಶಾಸಕ ಶರಣಪ್ಪ ಸುಣಗಾರ ಸ್ವಗೃಹದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ನಾಳೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೇಸ್ ಪಕ್ಷದ ಪ್ರಜಾಧ್ವನಿ ಯಾತ್ರೆಗೆ ಆಗಮಿಸುತ್ತಿರುವ ಹಿನ್ನಲ್ಲೆ ನಾಳೆ ಸುಮಾರು 35 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಡಾ. ಜಿ.ಪರಮೇಶ್ವರ, ಹೆಚ್.ಸಿ.ಮಹಾದೇವಪ್ಪ, ಶಾಸಕ ಜಮೀರ ಅಹ್ಮದ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ, ಜೇವರ್ಗಿ ಶಾಸಕ ಅಜೇಯ ಸಿಂಗ್, ವಿ.ಪ. ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ, ಪ್ರಕಾಶ ರಾಠೋಡ, ಕಾರ್ಯದರ್ಶಿಗಳಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ ಹಾಗೂ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಮುಖಂಡರು ಆಗಮಿಸುವರು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.
ಪ್ರಜಾಧ್ವನಿ ಯಾತ್ರೆ ಮುಂದಿನ ಚುನಾವಣೆಯ ಕಾಂಗ್ರೇಸ್ ಪಕ್ಷದ ಪ್ರಣಾಳಿಕೆ ತೆಗೆದುಕೊಂಡು ಬಿಜೆಪಿಯ ದುರಾಡಳಿತ ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಹಮ್ಮಿಕೋಳಲಾಗುತ್ತಿದೆ. ಇಂದಿನ ಕಾಂಗ್ರೇಸ್ ಪಕ್ಷ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಪೂರೈಕೆ, ಗೃಹ ಲಕ್ಷ್ಮೀ ಯೋಜನೆ ಅಡಿ ವರ್ಷಕ್ಕೆ 24000 ಸಾವಿರ ರೂ ಗಳ ಯೋಜನೆ, ಸಿಲೆಂಡರ್ ಬೆಲೆ 500 ರೂ ಗಳಿಗೆ ಇಳಿಕೆ, ರಯತರಿಗೆ 10ಗಂಟೆ ಪುಕಟೆ ವಿದ್ಯುತ್, 2 ಲಕ್ಷ ಕೋಟಿ ರೂ ನೀರಾವರಿ ಯೋಜನೆಗೆ, 500 ಕೋಟಿ ರೋ ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ, ಶಾಧಿ ಬಾಗ್ಯ ಪುನರಆರಂಭ ಇಂತಹ ಭರವಸೆಯೊಂದಿಗೆ 2023 ರಲ್ಲಿ ಕಾಂಗ್ರೇಸ್ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದರು.
40 ಪರ್ಸೆಂಟ್ ಇದ್ದ ಸರಕಾರ ಚುನಾವಣೆ ಸಮೀಪಿಸುತ್ತದಂತೆ 50 ಪರ್ಸೆಂಟಗೆ ಏರಿಕೆಯಾಗಿದೆ. ಬಿಜೆಪಿ ಸರಕಾರದಲ್ಲಿ ಸಂವಿಧಾನ ಗಾಳಿಗೆ ತೂರಲಾಗಿದೆ ವಾಮ ಮಾರ್ಗದಿಂದ ಸರಕಾರ ಕೆಲಸ ಮಾಡುತ್ತಿದೆ. ಇಂದು ಸರಕಾರ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಎಸ್.ಟಿ ಪ್ರಮಾಣಪತ್ರ ನೀಡಿರುವುದು ಇನ್ನು ಪರ್ಯಾಯ 49 ಉಪಜಾತಿಗಳಿಗೆ ಪ್ರಮಾಣಪತ್ರ ನಿಡಬೇಕು ಅವರು ಎಸ್.ಟಿ. ಪ್ರಮಾಣಪತ್ರ ನಿಡಿದೇವೆ ಎಂಬ ಹೇಳಿಕೆ ನಾನು ತಳ್ಳಿ ಹಾಕುತ್ತೇನೆ ಎಂದು ಶರಣಪ್ಪ ಸುಣಗಾರ ಹೇಳಿದರು.
ನಂತರ ಮಾತನಾಡಿದ ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿ ರಾಕೇಶ ಕಲ್ಲೂರ ಮಾತನಾಡಿ ಉಪ ಚುನಾವಣೆಯಲ್ಲಿ ನೀಡಿರುವ ಪ್ರಣಾಳಿಕೆಯ ಭರವಸೆಗಳು ಪೂರೈಸಲು ವಿಫಲವಾಗಿದೆ ಎಂದರು ವಿಠಲ ಕೋಳ್ಳುರ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ವಿನಂತಿಸಿ ಹೇಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಲು ಕೋರಿದರು.
ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಥಳಿಯ ಶಾಸಕರು ಎಸ್.ಟಿ ಪ್ರಮಾಣಪತ್ರ ನೀಡಿದೇವೆ ಎಂದು ಹೇಳುತ್ತಾ ತಿರಗುತ್ತಿದ್ದಾರೆ ಅದರಲ್ಲಿ ಅವರ ಪಾತ್ರವೇನು ? ಸಮುದಾಯದವರೊಂದಿಗೆ ಒಂದು ನಿಯೋಗ ಹೋಗಲಿಲ್ಲ, ಕಲಾಪಗಳಲ್ಲಿ ಒಂದು ದಿನವು ಚರ್ಚೆ ಮಾಡಲಿಲ್ಲ, ಆದರು ಅವರು ಚುನಾವಣೆಗಾಗಿ ಎಸ್.ಟಿ.ಪ್ರಮಾಣಪತ್ರ ನಿಡಿದೇವೆ ಎಂದು ಹೇಳುತ್ತಿದ್ದಾರೆ. -ಅಶೋಕ ಮನಗೂಳಿ
ಪೂರ್ಣ ವಿಡಿಯೋ ನೊಡಲು ಪೇಸ್ ಬುಕ್ ಲಿಂಕ್ ಗೆ ಹೋಗಿ : https://fb.watch/iBTaVrPOxv/
ಪೂರ್ಣ ವಿಡಿಯೋ ನೊಡಲು ಯುಟ್ಯೂಬ್ ಲಿಂಕ್ ಗೆ ಹೋಗಿ : https://youtu.be/OYtOA0eQxJ4
