ನಾಗ್ಪುರ : ಆಸ್ಟ್ರೇಲಿಯಾ ತಂಡ ಭಾರತಕ್ಕೆ ಪ್ರವಾಸ ಬಂದಿದ್ದು ನಾಲ್ಕು ಟೇಸ್ಟ ಹಾಗೂ ಮೂರು ಏಕದಿನ ಪಂದ್ಯಗಳು ಆಡಲಿದೆ. ಮೊದಲ ಟೇಸ್ಟನಲ್ಲಿ ಭಾರತದ ಪರವಾಗಿ ಸೂರ್ಯಕುಮಾರ ಯಾದವ ಹಾಗೂ ಕೆ.ಎಸ್. ಭರತ್ ಪಾದಾರ್ಪಣೆ ಮಾಡಿದರು. ಸೂರ್ಯಕುಮಾರ ಯಾದವ್ ಅವರಿಗೆ ರವಿ ಶಾಸ್ತ್ರೀ ಹಾಗೂ ಭರತ್ ಅವರಿಗೆ ಚೆತೇಶ್ವರ ಪೂಜಾರ ಕ್ಯಾಪ್ ನೀಡಿದರು ವಿಧರ್ಭ ಕ್ರಿಕೇಟ್ ಕ್ರಿಡಾಂಗಣದಲ್ಲಿ ಮೊದಲ ಟೇಸ್ಟ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.

ಬಾರತದ ಬಿಗುವಿನದಾಳಿಗೆ ಇನ್ನಿಂಗ್ಸ್ ನ ಎರಡನೇ ಓವರನ ಮೊದಲ ಎಸೆತದಲ್ಲಿ ಉಸ್ಮಾನ ಖವಾಜಾ 01 ರನ್ ಗಳಿಸಿದಾಗ ಸಿರಾಜ ಅವರು ಎಸೆದ ಎಸೆತದಲ್ಲಿ ಎಲ್.ಬಿ.ಡಬ್ಯೂ ಬಲೆಗೆ ಬಿದ್ದರೆ, ಮಹ್ಮದ ಶಮಿ ಇವರಿಗೆ ಕ್ಲೀನ್ ಬೌಲ್ಡ ಆಗಿ ಡೇವಿಡ್ ವಾರ್ನರ ಪೇವಿಲಿಯನ್ ಸೇರಿದರು.
ಮೂರನೇ ಕ್ರಮಾಂಕದಲ್ಲಿ ಬಾಲಿಂಗ್ ಜವಾಬ್ದಾರಿ ರವೀಂದ್ರ ಜಡೇಜಾರಿಗೆ ನೀಡಿದ ತಂಡದ ನಾಯಕ ರೋಹಿತ್ ಲೆಕ್ಕಾಚಾರ ಭಾರತ ತಂಡಕ್ಕೆ ವರವಾಯಿತು. ರವೀಂದ್ರ ಜಡೇಜಾ ಒಟ್ಟು 22 ಓವರ್ ಗಳಲ್ಲಿ 47 ರನ್ ನೀಡಿ ಪ್ರಮುಖ 5 ವಿಕೇಟ್ ಪಡೆದರು.
That ???????????????????????? when @imjadeja let one through Steve Smith's defence! ????????
Follow the match ▶️ https://t.co/SwTGoyHfZx #TeamIndia | #INDvAUS | @mastercardindia pic.twitter.com/Lj5j7pHZi3
— BCCI (@BCCI) February 9, 2023
15.5 ಒವರ್ ಎಸೆದ ರವಿಚಂದ್ರನ್ ಅಶ್ವೀನ್ 42 ರನ್ ನೀಡಿ 3 ವಿಕೇಟ್ ಪಡೆದರು ಆಸ್ಟ್ರೇಲಿಯಾ ವಿಕೇಟ್ ಕೀಪರ್ ಅಲೇಕ್ಷ್ ಕ್ಯಾರಿ ವಿಕೇಟ್ ಪಡೆದು 450 ವಿಕೇಟ್ ಪಡೆದ ಭಾರತದ ಎರಡನೇ ಆಟಗಾರ ಎನಿಸಿಕೊಂಡರು. ಭಾರತದ ಪರವಾಗಿ ಕರ್ನಾಟಕದ ಸ್ಪಿನರ್ ಅನೀಲ್ ಕುಂಬ್ಳೆ 450 ವಿಕೇಟ್ ಮೊದಲು ಪಡೆದಿದ್ದರು.

ಒಟ್ಟು 177 ರನ್ ಗಳಿಸಿ ಆಲೌಟ್ ಆಯಿತ್ತು ಆಸ್ಟ್ರೇಲಿಯಾ ಪರ ಲಬುಶೇನ್ 49 ರನ್ ಗಳಿಸಿರುವುದು ಗರಿಷ್ಠ ರನ್.
ಮೊದಲ ಿನ್ನಿಂಗ್ಸ ಆರಂಬಿಸಿದ ಭಾರತದ ರೋಹಿತ ಶರ್ಮಾ ಹಾಗೂ ಕೆ.ಎಲ್.ರಾಹುಲ ಉತ್ತಮ ಮುನ್ನಡೆ ನೀಡಿದರು 76 ರನ್ಗಳ ಜೊತೆಯಾಟ ಆಡಿದರು. 20 ರನ್ ಗಳಿಸಿದ ಕೆ.ಎಲ್.ರಾಹುಲ್ ಟುಡ್ ಮುರ್ಪಿ ಅವರು ಎಸೆದ ಎಸೆತದಲ್ಲಿ ಅವರಿಗೆ ಕ್ಯಾಚ್ ನೀಡಿ ಮೊದಲ ವಿಕೇಟ್ ಒಪ್ಪಿಸಿದರು. 56 ರನ್ ಗಳಿಸಿ ರೋಹಿತ್ ಹಾಗೂ ನೈಟ್ ವಾಚ್ ಮೇನ್ ಆಗಿ ಆಗಮಿಸಿದ ರವಿಚಂದ್ರನ್ ಅಶ್ವಿನ್ ಎರಡನೇ ದಿನಕ್ಕೆ ಬ್ಯಾಟಿಂಗ್ ಮುಂದುವರೆಸುವರು.
