ಪಾಚೆಫ್ ಸ್ಟ್ರೂಮ್ : ದಕ್ಷಿಣ ಆಪ್ರೀಕಾ ದಲ್ಲಿ ನಡೆದ U-19 ಮಹಿಳಾ ಕ್ರಿಕೇಟ್ ನಲ್ಲಿ ಭಾರತ ತಂಡ ಅಭೂತಪೂರ್ವ ಗೆಲವು ಸಾದಿಸಿದೆ. ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡ ತಂಡದ ನಾಯಕಿ ಶಪಾಲಿ ವರ್ಮಾ ಪ್ರಥಮ ಓವರ್ ನಿಂದಲೆ ಭಾರತದ ಬಾಲರ್ ಟೈಟಾಸ ಸಧು ಅವರ ಬಿಗುವಿನ ಬಾಲಿಂಗ್ ದಾಳಿಯಿಂದ ಇಂಗ್ಲೇಂಡ್ ತಂಡ ಅಲ್ಪ ಮೊತ್ತಕ್ಕೆ ಕುಸಿಯಿತ್ತು. ಟೈಟಾಸ ಸಧು 4 ಓವರ ಎಸೆದು ಕೇವಲ 6 ರನ್ ನೀಡಿ ಪ್ರಮುಖ ಎರಡು ವಿಕೇಟ್ ಪಡೆದರು.

ವಿಕೇಟ್ ಪಡೆದಾಗ ಸಂಭ್ರಮಿಸುತ್ತಿರುವ ಟೈಟಾಸ ಸಧು
ಬಿಗುವಿನ ಬಾಲಿಂಗ್ ಮುದುವರೆಸಿದ ಭಾರತ ತಂಡದ ಬಾಲರಗಳು ಅರ್ಚನಾ ದೇವಿ ಮತ್ತು ಪ್ರಶವಿ ಚೋಪ್ರಾ ತಲಾ ಎರಡು ವಿಕೇಟ್ ಪಡೆದರೆ ಮನತ್ತ ಕಶ್ಯಪ್, ಶಪಾಲಿ ವರ್ಮಾ, ಸೋನಮ್ ಯಾದವ್ ತಲಾ ಒಂದು ವಿಕೇಟ್ ಪಡೆದರು. ಇಂಗ್ಲೇಂಡ್ ನ ರೈನ ಮಾಕಡೋನಾಲ್ಡ್ ಅವರ 19 ರನ್ ನೊಂದಿಗೆ 17.1 ಓವರ್ ನಲ್ಲಿ 68 ರನ್ ಸೇರಿಸಿ ಸಾಧಾರಣ ಮೋತ್ತ ಭಾರತಕ್ಕೆ ಗುರಿಯಾಗಿ ನೀಡಿತ್ತು.
ಬ್ಯಾಟಿಂಗ್ ಪ್ರಾರಂಬಿಸಿದ ಭಾರತದ ಆರಂಬಿಕ ಜೋಡಿ ತಂಡದ ನಾಯಕಿ ಶಪಾಲಿ ವರ್ಮಾ ಶ್ವೇತಾ ಶೇರಾವತ್ ಮೊದಲ ವಿಕೇಟ್ 16 ರನ್ ಜೊತೆಯಾಟ ಮುಂದುವರಸಿದಾಗ 15 ರನ್ನ ಕಲೆ ಹಾಕಿದ ನಾಯಕಿ ಶಪಾಲಿ ವರ್ಮಾ ಹನ್ನಾಃ ಬಕೆರ ಎಸದ ಎಸೆತದಲ್ಲಿ ಔಟ್ಆಗಿ ಪೇವಿಲಿಯನ್ ಸೇರಿದರೆ, ಶ್ವೇತಾ ಶೇರಾವತ್ 5 ರನ್ ಗಳಿಸಿ ತಂಡದ ಮೊತ್ತ 20 ರನ್ ಇದ್ದಾಗ ಇಬ್ಬರು ಆರಂಬಿಕರು ವಿಕೇಟ್ ಒಪ್ಪಿಸಿದರು.

ನಂತರ ಜೊತೆಯಾದ ಸೌಮ್ಯ ತಿವಾರಿ ಮತ್ತು ಗೋಂಗಡಿ ತ್ರಿಶಾ 44 ರನ್ ಗಳ ಜೊತೆಯಾಟ ವಾಡಿದರು ಅದರಿಂದ 14 ಓವರ್ ಗಳಲ್ಲಿ 69 ರನ್ ಗಳಿಸಿ 7 ವಿಕೇಟ್ ಗಳ ಬರ್ಜರಿ ಗೆಲುವಿನೊಂದಿಗೆ ಚೊಚ್ಚಲ ವಿಶ್ವಕಪ್ ತನ್ನದಾಗಿಸಿಕೊಂಡಿತ್ತು.

ಗೆದ್ದ ಮಹಿಳಾ ತಂಡಕ್ಕೆ ಭಾರತ ತಂಡ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಶುಭ ಕೋರಿತು.
A special message from Lucknow for India's ICC Under-19 Women's T20 World Cup-winning team ???? ????#TeamIndia | #U19T20WorldCup pic.twitter.com/g804UTh3WB
— BCCI (@BCCI) January 29, 2023
ಪಂದ್ಯ ವಿಕ್ಷಣೆ ಮಾಡುಲು ಬಂದಿರುವ ನೀರಜ್ ಚೋಪ್ರಾ ಶುಭಾಶಯ ಕೋರಿ ವೀಡಿಯೋ ಹಂಚಿಕೊಂಡಿದ್ದಾರೆ.
Enjoyed watching this moment from the stands. Congratulations Team India @BCCIWomen on making history #INDvENG #U19T20WorldCup pic.twitter.com/xyKIbQ4AxW
— Neeraj Chopra (@Neeraj_chopra1) January 29, 2023
