ಸಿಂದಗಿ : ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧಿಜಿ ಅವರ ಪುಣ್ಯ ಸ್ಮರಣೆ ಅಂಗವಾಗಿ ಸ್ವಚ್ಛತಾ ಅಭಿಯಾನ ನಡೆಸಲಾಯಿತ್ತು.
ಹಿರಿಯ ಸಿವಿಲ್ ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಧೀಶರಾದ ನಾಗೇಶ್ ಮೋಗೆರ ಮಾತನಾಡಿ ಕಾನೂನು ಸೇವಾ ಸಮಿತಿ ಸಿಂದಗಿ, ವಕೀಲರ ಸಂಘ ಸಿಂದಗಿ, ಹಾಗೂ ಪುರಸಭೆ ಸಿಬ್ಬಂದಿಗಳ ಸಹಯೋಗದೊಂದಿಗೆ ನಾವು ಇಂದು ಪ್ರಾರಂಭ ಮಾಡಿದ್ದೇವೆ ನಿಮ್ಮ ಕಾರ್ಯಗಳು ನಿರಂತರವಾಗಿ ನಡೆಯಲ್ಲಿ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಲೆಂದು ಹೇಳಿದರು.
ಸಿವಿಲ್ ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಧೀಶ ಸಿಂದಗಿ ಮಹಾಂತೇಶ ಭೂಸಾಗೋಳ, ಹೇಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಧೀಶ ಹರೀಶ್ ಜಾಧವ ಅವರು ನ್ಯಾಯಾಲಯದ ಮುಂದಿರುವ ಸ್ವಚ್ಚತ್ತೆಯ ಬಗ್ಗೆ ಕಾಳಜಿ ವಹಿಸಿ ಸ್ವಚ್ಛ ಮಾಡಿಸುತ್ತಿರುವುದು ಗಮನ ಸೆಳೆಯಿತ್ತು.

ವಕೀಲ ಸಂಘದ ಅಧ್ಯಕ್ಷರಾದ ಎಸ್.ಬಿ.ದೊಡಮನಿ ಅವರು ಹಿರಿಯ ನ್ಯಾಯದೀಶರಾದ ನಾಗೇಶ ಮೋಗೆರ ಅವರೊಂದಿಗೆ ನ್ಯಾಯಾಲಯದ ಮೂಲ ಸಮಸ್ಯೆಗಳಲ್ಲೊಂದಾದ ವಾಹನ ನಿಲುಗಡೆಗೆ ಪಾರ್ಕಿಂಗ ವ್ಯವಸ್ಥೆ ಬಗ್ಗೆ ಮುಖ್ಯಾಧಿಕಾರಿ ರಾಜೇಶ್ವರಿ ತುಂಗಳ ಇವರಿಗೆ ವಿವರಿಸಿದರು. ಸ್ಪಂದಿಸಿದ ಮುಖ್ಯಾಧಿಕಾರಿ ಬೇಗನೆ ಮಾಡಿಸಿ ಕೊಡುವುದಾಗಿ ಹೇಳಿದರು.

ಸ್ವಚ್ಚತ್ತಾ ಅಭಿಯಾನದಲ್ಲಿ ನಜೀರ್ ವಾಲಿಕಾರ ಶರಸ್ತೇದಾರರು ನ್ಯಾಯಾಲಯ ಸಿಂದಗಿ, ವಕೀಲರಾದ ದಾನಪ್ಪಗೌಡ ಚನಗೊಂಡ ಕುಲಕರ್ಣಿ ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗ ಮತ್ತು ಪುರಸಭೆ ಕಾರ್ಯಾಲಯದ ಆರೋಗ್ಯ ಅಧಿಕಾರಿಗಳಾದ ಎನ್.ಎಚ್. ಉಸ್ತಾದ ಮತ್ತು ಇಂದೂಮತಿ ಮಣ್ಣೂರ ಹಾಗೂ ಪೌರಕಾರ್ಮಿಕರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
