ಪತ್ರಕರ್ತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹಳ್ಳಿಯ ಪ್ರಮುಖ ಸಮಸ್ಯೆಗಳಿಗೆ ಮಹಿಳೆಯರು ಚಿಂತಿಸಿದ್ದು ಅವರ ಬಹು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಸಿಂದಗಿ : ನಗರದ ಸಂಗಮ ಸಂಸ್ಥೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕಲ್ಲಹಳ್ಳಿ ಹಾಗೂ ಬಬಲೇಶ್ವರ ಗ್ರಾಮದ ಮಹಿಳೆಯರು ತಮ್ಮ ಗ್ರಾಮದ ಸಮಸ್ಯೆ ಬಗ್ಗೆ ಚರ್ಚೆಯಲ್ಲಿ ಕಲಹಳ್ಳಿ ಗ್ರಾಮದ ಶಾಂತಾಬಾಯಿ ಪೂಜಾರಿ ಮಾತನಾಡಿ ಅಂಗನವಾಡಿ ಮಕ್ಕಳು ಬಯಲಲ್ಲಿ ಕುಳಿತು ಕಲಿಯುತ್ತಿದ್ದಾರೆ. ವಿಷಯದ ಕುರಿತು ಹೋರಾಟ ಮಾಡಿದರು ಪ್ರಯೋಜನ ಇಲ್ಲ ಸರಕಾರಿ ಬಸ್ಸ್ ಗಳು ನಿಲುವುದಿಲ್ಲ ಸಂಚಾರದ ಕೊರತೆ ಇದೆ. ಮಾದರಿ ಆಗಬೇಕಾದ ಶಾಲೆಯಲ್ಲಿಯೆ ಮಕ್ಕಳಿಗಾಗಿ ಶೌಚಾಲಯ ಇಲ್ಲದೆ ಇರುವುದು ದುರಂತ. ಅಷ್ಟೇ ಅಲ್ಲದೆ ನಾವು ನರೇಗಾ ಯೋಜನೆಯಲ್ಲಿ ಕೂಲಿ ಮಾಡುವವರು ಕೆರೆಯ ಕೆಲಸ ಮೂರುವಾರಗಳ ಕಾಲ ಮಾಡಿದರು ಕೂಲಿ ನೀಡುತ್ತಿಲ್ಲ ಪುರಸಭೆ ಹಾಗೂ ಪಂಚಾಯಿತಿಗೆ ಅಲ್ಲೇದಾಡಿ ಸಾಕಾಗಿದೆ.
ನಂತರ ಮಾತನಾಡಿದ ಬಬಲೇಶ್ವರ ಗ್ರಾಮದ ಕಾಯಕ ಬಂದು ಮಡಿವಾಳಪ್ಪ ಯಡ್ರಾಮಿ ನರೇಗಾ ಯೋಜನೆಯಲ್ಲಿ ಕೆಲಸ ಕೇಳಿದರೆ ಕೇವಲ ಒಂದು ವಾರದ ಕೆಲಸ ಮಾತ್ರ ನೀಡುತ್ತಾರೆ ಆದರೆ ಅದಕ್ಕೆ ಕೂಲಿಯೇ ಪಾವತಿಸುವುದಿಲ್ಲ ಇಂಗಿನ ಗುಂಡಿಗಳ ನಿರ್ಮಾಣ ಮಾಡಿದೇವೆ ಆದರೆ ಇದುವರೆಗೆ ಬಿಲ್ಲ್ ಗಳಿಲ್ಲ ಪ್ರಮುಖವಾಗಿ ಎಸ್.ಸಿ. ಕಾಲೋನಿ ಅಭಿವೃದ್ಧಿಯಿಂದ ವಂಚಿತವಾಗಿದೆ.
ಅನಸುಬಾಯಿ ಪೂಜಾರಿ ತಮ್ಮ ಅಭಿಪ್ರಾಯ ಹಂಚಿಕೊಂಡು ರೋಡಿಗೆ ಹಚ್ಚಿ ಮನೆ ಕಟ್ಟಿಕೊಂಡಾರ ರೋಡಿನ್ಯಾಗ ತಿರುಗಾಡುದು ಆಗಲರೀ ವಯಸ್ಸಾದವರಿಗಿ ಬಾಳ ಸಮಸ್ಯೆ ಆಗತ್ತಾದರೀ, ದಾರು (ಸರಾಯಿ) ಅಂಗಡಿ ಚಾಲು ಅಆವರೀ ಪೋಲೀಸರಿಗಿ ಎರಡು ಸಲ ಹೋಗಿ ಹೇಳಿವ್ರಿ ಆದರು ಬಂದ ಆಗಿಲ್ಲರೀ ಪೋಲೀಸರು ರೋಕ್ಕಾ ತಗೊಂಡು ಸುಮ್ಮ ಕುತ್ತಿರಬೇಕರಿ ಎಂದರು.
ಸುಶೀಲಾಬಾಯಿ ದೊಡಮನಿ ಮಾತನಾಡಿ ಸಿ.ಸಿ.ರಸ್ತೆ ಇಲ್ಲ ಅಂಗನವಾಡಿಯಲ್ಲಿದ್ದ ಆಹಾರ ಪದಾರ್ಥಗಳು ಹಾಳಾಗಿವೆ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದರು ಬಿಲ್ಲಗಳು ಪಾವತಿ ಆಗುತ್ತಿಲ್ಲ. ಒಂದು ಕೆಲಸಕ್ಕೆ ಬೇಕಾದಷ್ಟು ಕಾರ್ಮಿಕರನ್ನು ನೇಮಕ ಮಾಡುತ್ತಿಲ್ಲ ಎಂದರು.
ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಂಗಮ ಸಂಸ್ಥೆಯ ಪಾಧರ ಸಂತೋಷ ಮಾತನಾಡಿ 32 ಹಳ್ಳಿಗಳಲ್ಲಿ ಸಂಗಮ ಸಂಸ್ಥೆಯಿಂದ ಮಹಿಳೆಯರ ಸಮೂಹ ಹೊಂದಿದೆ ನರೇಗಾ ಯೋಜನೆಯಲ್ಲಿ ಕಲಹಳ್ಳಿ ಮತ್ತು ಬಬಲೇಶ್ವರ ಗ್ರಾಮಗಳಿಗೆ ಅನ್ಯಾವಾಗುತ್ತಿದೆ. ಇಂದು ಅನ್ಯಾಯ ಕೋಳಗಾದವರಿಗೆ ಪ್ರಮುಖ ವಾಹಿನಿಗೆ ತರುವ ಕೆಲಸ ಸಂಗಮ ಸಂಸ್ಥೆ ಮಾಡತ್ತಾ ಬಂದಿದ್ದು ಇಂದು ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದ ಮುಖಾಂತರ ಅವರಿಗೆ ನ್ಯಾಯ ಸಿಗಬಹುದು ಎಂಬ ಭರವಸೆ ಇದೆ ಎಂದರು. ಇದೆ ಸಂಧರ್ಭದಲ್ಲಿ ಮಲ್ಲಮ್ಮ ನಾಟೀಕಾರ, ನಾಗಮ್ಮ ಪೂಜಾರಿ, ಅಕ್ಕಮ್ಮ ಪೂಜಾರಿ, ರತ್ನಾಬಾಯಿ ಹೊಸಮನಿ, ರೇಣುಕಾ ಹೊಸಮನಿ ಸೇರಿದಂತೆ ಕಲಹಳ್ಳಿ ಹಾಗೂ ಬಬಲೇಶ್ವರ ಗ್ರಾಮದ ಮಹಿಳೆಯರು ಇದ್ದರು ಪತ್ರಿಕಾ ವರದಿಗಾರರಾದ ಶಾಂತು ಹಿರೇಮಠ, ರವಿ ಮಲ್ಲೇದ, ರಮೇಶ ಪೂಜಾರಿ, ಸೇರಿದಂತೆ ಹಲವರು ಚರ್ಚೆಯಲ್ಲಿ ಭಾಗಿಯಾದರು.
