ನಾವು ಭಾತೃತ್ವ ಸಹೋದರತ್ವದಿಂದ ಜೀವನ ನಡೆಸುತ್ತಿದ್ದು ಎಂದೋ ನಡೆದ ಒಂದು ಸಣ್ಣ ಅಹಿತಕರ ಘಟನೆಯಿಂದ ಇದುವರೆಗೂ ಅದರ ಕರಾಳತೆ ಅನುಭವಿಸುತ್ತಿದ್ದು ಸರಿಯಲ್ಲ ಎಂದು ಮಹಿಳಾ ಮುಖಂಡೆ ಶೈಲಜಾ ಸ್ಥಾವರಮಠ ಹೇಳಿದರು.
ಸಿಂದಗಿ : ಪಟ್ಟಣದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಿಂದಗಿ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿಸಭೆ ಕುರಿತು ಮಾತನಾಡಿದ ಅವರು ದಶಕಗಳ ಹಿಂದೆ ನಡೆದ ಘಟನೆಯಿಂದ ಇದುವರೆಗೂ ತಲೆ ತಗ್ಗಿಸುವಂತಾಗಿದೆ. ನಾವು ಹಿಂದೂ ಮುಸ್ಲಿಂ ಎಂಬ ಭೇದ- ಭಾವ ಇಲ್ಲದೆ ಜೀವನ ನಡೆಸುತ್ತಿದೆವೆ. ಯಾರೋ ಕಿಡಗೇಡಿಗಳು ಮಾಡಿದ ತಪ್ಪಿನಿಂದಾಗಿ ಕಾನೂನು ತೊಡಕು ಪ್ರಾರಂಭವಾಗಿವೆ ಅದನ್ನು ಮರೆತು ಇಂದು ಒಂದಾಗಿದ್ದರು ಕಾನೂನಿನ ನಿರ್ಭಂದನೆಗಳು ನಮ್ಮನ್ನು ಹಿಂದೂ ಮುಸ್ಲಿಂರನ್ನಾಗಿ ಬೇರೆ ಪಡಿಸುತ್ತಿದೆ. ನಮ್ಮಗೆ ರಸ್ತೆಗೆ ನಿರ್ಭಂದ ಹೇರದೆ ನಮ್ಮಗೆ ಹಬ್ಬಗಳು ಆಚರಿಸಲು ಅನುವು ಮಾಡಿಕೋಡಿ ಎಂದರು.
ನಂತರ ಮಾತನಾಡಿದ ಇಂಡಿ ಉಪವಿಭಾಗದ ಡಿ.ವಾಯ್.ಎಸ್.ಪಿ ಹೆಚ್.ಎಸ್.ಜಗದೀಶ ಸಹಾಯ ಸಹಕಾರ ಅನ್ಯೂನ್ಯತೆಯ ಹಬ್ಬವಾಗಬೇಕು. ಪರಿಸರ ಸ್ನೇಹಿ ಭಕ್ತಿ ಪ್ರಧಾನವಾಗಿ ಎಲ್ಲಿಯೂ ಕಳಂಕ ಬರದಂತೆ ಆಚರಿಸಿ ಹಬ್ಬದ ಸಡಗರ ಮನೆ ಮನೆ ಮಾತಾಗಬೇಕು ಕಿಡಗೇಡಿಗಳ ಮೇಲೆ ನಮ್ಮ ಕಣ್ಣು ಇರುತ್ತದೆ ಎಂದರು.
ನಂತರ ಅಧ್ಯಕ್ಷತೆ ವಹಿಸಿದ ಜಿಲ್ಲಾ ವರಿಷ್ಠಾಧಿಕಾರಿ ಹೃಶಿಕೇಶ ಸೋನವಾನೆ ಮಾತನಾಡಿ ಹಬ್ಬಗಳಲ್ಲಿ ಅಧಿಕಾರಿಗಳ ಪಾತ್ರವೆಂದರೆ ನಿಮ್ಮಗೆ ರಕ್ಷಣೆ ಕೊಡುವುದು ನಮ್ಮಗೆ ನಿಮ್ಮ ಸಹಕಾರ ಅತಿಮುಖ್ಯವಾದದ್ದು ಇಲ್ಲಿನ ವೃತ್ತ ನೀರಿಕ್ಷಕ ಡಿ.ಹುಲಗಪ್ಪ ಈ ಮೋದಲು ಕಾರ್ಯನಿ್ವಹಿಸಿದ ಅನುಭವವಿದೆ ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಎಂಬ ಭರವಸೆ ಇದೆ ಅದರಂತೆ ಕಾನೂನು ನಿಯಮಗಳು ಪಾಲಿಸುವುದು ನಮ್ಮೇಲ್ಲರ ಕರ್ತವ್ಯ. ಇನ್ನೋಬ್ಬರಿಗೆ ತೊಂದರೆ ಆಗದಂತೆ ಗಣೇಶ ಉತ್ಸವ ಅತೀ ವಿಜೃಂಬಣೆಯಿಂದ ಆಚರಿಸಿ ಎಂದರು.
ತಾಲೂಕಾ ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ, ನಗರ ಸುಧಾರಣಾ ವೇದಿಕೆ ಅಧ್ಯಕ್ಷ ಅಶೋಕ ಅಲ್ಲಾಪುರ, ಹಿರಿಯ ಶಿವನಗೌಡ ಬಿರಾದಾರ, ಎಂ.ಎ.ಖತೀಬ ಮಾತನಾಡಿದರು. ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಹಲವು ಗಣೇಶ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ವೃತ್ತ ನೀರಿಕ್ಷಕ ಡಿ.ಹುಲಗಪ್ಪ ಸ್ವಾಗತಿಸಿದರು ಪಿ.ಎಸ್.ಐ ಭೀಮಪ್ಪ ರಬಕವಿ ವಂದಿಸಿದರೆ ಸಿದ್ದನಗೌಡ ದೊಡಮನಿ ನಿರೂಪಿಸಿದರು.

