
ಸಿಂದಗಿ: ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ನಡೆಸುತ್ತಿರುವ ಭಾರತ ಜೋಡೋ ಯಾತ್ರೆ ಇಂದು ರಾಯಚೂರ ಕ್ಷೇತ್ರವನ್ನು ಪ್ರವೇಶ ಮಾಡಿದೆ ಆ ಹಿನ್ನಲೆಯಲ್ಲಿ ಪಾದಯಾತ್ರೆ ಹಾಗೂ ಸಮಾವೇಶದಲ್ಲಿ ಭಾಗಿಯಾಗಲು ಸಿಂದಗಿ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಶುಕ್ರವಾರ ಸುಮಾರು ನೂರಾರು ಕೈ ಕಾರ್ಯಕರ್ತರೊಂದಿಗೆ ರಾಯಚೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಪ್ರಯಾಣಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ನಾಯಕ ರಾಹುಲ ಗಾಂಧಿ ಅವರು ಮಾಡುತ್ತಿರುವ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಸುಮಾರು 3500 ಕ್ಕೂ ಹೆಚ್ಚು ಕಿಲೋ ಮೀಟರನ ಭಾರತ ಜೋಡೋ ಪಾದಯಾತ್ರೆ ಹೋದಲೇಲ್ಲ ಅಭೂತ ಪೂರ್ವ ಸ್ಪಂದನೆ ಮತ್ತು ಸ್ವಾಗತ ಸಿಕ್ಕಿದೆ. ಈ ಪಾದಯಾತ್ರೆಗೆ ಮುಂಬರುವ ಭಾರತ ದೇಶದ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ತಿರುವ ಸಿಗಲಿದೆ. ರಾಹುಲ ಗಾಂಧಿ ಅವರು ಜನಸಾಮಾನ್ಯರು ಹಾಗೂ ಅವರ ಸಮಸ್ಯೆ, ಸಂಕಷ್ಟ, ಸಾಮಾಜಿಕ ಸಾಮರಸ್ಯದ ಬಗ್ಗೆ ಧ್ವನಿಯಾಗಿದ್ದಾರೆ. ಆರ್ಥಿಕ ಸಾಮಾಜಿಕ ಅಸಮಾನತೆ ವಿಚಾರವಾಗಿ ಈ ಯಾತ್ರೆ ಮಾಡಲಾಗುತ್ತಿದೆ ಸಿಂದಗಿ ಮತಕ್ಷೇತ್ರದಿಂದ ಅವರಿಗೆ ಬೆಂಬಲ ನೀಡಲು ನೂರಾರು ಕಾರ್ಯಕರ್ತರೊಂದಿಗೆ ಆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇವೆ ಎಂದರು.
ಈ ಸಂಧರ್ಭದಲ್ಲಿ ಆಲಮೇಲದ ಕೈ ಮುಖಂಡ ರಮೇಶ ಭಂಟನೂರ ಮಾತನಾಡಿ, ಭಾರತ ಜೋಡೋ ಯಾತ್ರೆಯಲ್ಲಿ ನಿರೀಕ್ಷೆ ಮೀರಿ ಲಕ್ಷಾಂತರ ಜನ ಈ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಸಿಂದಗಿ ಮತಕ್ಷೇತ್ರದಿಂದ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ನಾವೇಲ್ಲ ಭಾಗವಹಿಸುತ್ತಿರುವದು ನಮಗೇಲ್ಲ ಸಂತಸತಂದಿದೆ ಎಂದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಉಮೇಶ ಜೋಗೂರ, ಸುರೇಶ ಪೂಜಾರಿ, ಸಂತೋಷ ಹರನಾಳ, ಮುತ್ತು ಮುಂಡೇವಾಡಗಿ, ಚನ್ನು ಪಟ್ಟಣಶೆಟ್ಟಿ, ರಮೇಶ ಹೂಗಾರ, ರವಿರಾಜ ದೇವರಮನಿ, ಖಾದರ ಬಂಕಲಗಿ, ಪರುಶುರಾಮ ಕಾಂಬಳೆ, ಬಸವನಗೌಡ ಪಾಟೀಲ ಖಾನಾಪೂರ, ಶಿವಾನಂದ ಕೋಟರಗಸ್ತಿ, ಸಲೀಂ ಜುಮನಾಳ, ದಾವಲಪ್ಪ ಸೋನ್ನದ, ಶಂಕರಗೌಡ ಪಾಟೀಲ ಯಂಕAಚಿ, ನೂರಅಹ್ಮದ ಅತ್ತಾರ, ಇರ್ಫಾನ ಬಾಗವಾನ, ಬಶೀರ ಮರ್ತೂರ, ಜಯಶ್ರೀ ಹದನೂರ, ಶರಣಮ್ಮ ನಾಯಕ, ಮಲ್ಲಿಕಾರ್ಜುನ ಶಂಬೇವಾಡ, ಹಮೇಶ ಮನಗೂಳಿ, ಷಣ್ಮುಖ ಹಿರೇಮಠ, ಭೀಮನಗೌಡ ಬಿರಾದಾರ ಗೋಲಗೇರಿ ಸೇರಿದಂತೆ ಅನೇಕರು ಇದ್ದರು.

