ಕೋಲ್ಹಾರ : ವಿಜಯಪುರ ಜಿಲ್ಲೆಯ ಆರ್.ಐ.ಡಿ.ಎಪ್ 25 ಟ್ರಂಚ್ ಯೋಜನೆಯಲ್ಲಿ ಕೋಲ್ಹಾರ ಪಟ್ಟಣದಲ್ಲಿ ರೂ.43.00 ಲಕ್ಷಗಳ ಅನದಾನದಲ್ಲಿ ಪಶುಆಸ್ಪತ್ರೆ ಸಭಾ ಭವನ ಕಟ್ಟಡದ ಉಧ್ಘಾಟನೆ ಹಾಗೂ ಪಶು ಸಂಜೀವಿನಿ ವಾಹನ ಲೋಕಾರ್ಪಣೆ ಸಮಾರಂಭದಲ್ಲಿ ಉಧ್ಘಾಟಕರಾಗಿ ಶ್ರೀ ಶಿವಾನಂದ ಪಾಟೀಲ ಶಾಸಕರು ಬವಸನ ಬಾಗೇವಾಡಿ ಮತಕ್ಷೇತ್ರ ಹಾಗೂ ರಾಹುಲ ಶಿಂಧೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ವಿಜಯಪುರ ಆಗಮಿಸಿದ್ದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ.ಪೂ ಜಗದ್ಗುರು ಶ್ರೀ ಯೋಗಿ ಕಲ್ಲಿನಾಥ ಮಹಾ ಸ್ವಾಮಿಗಳು ಶ್ರೀ ದಿಗಂಬರೇಶ್ವರ ಸಂಸ್ಥಾನಮಠ, ಕೊರ್ತಿ ಕೋಲ್ಹಾರ ವಿಜಯಪುರ ರವರು ವಹಿಸಿದ್ದರು.
ಈ ಸಂದರ್ಭದಲ್ಲಿ ಡಾ|| ಅಶೋಕ ಎಸ್ ಘೋಣಸಗಿ ಉಪನಿರ್ದೇಶಕರು (ಆಡಳಿತ) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವಿಜಯಪುರ, ಡಾ|| ಶಿವಕುಮಾರ ಎಸ್ ಹೋಳಪ್ಪಗೋಳ, ಉಪನಿರ್ದೇಶಕರು (ಪಾಲಿಕ್ಲಿನಿಕ್) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ವಿಜಯಪುರ, ಕೊಲ್ಹಾರ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ. ಫರೀದಾಬಾನು ಪಠಾಣ, ಡಾ|| ಎಮ್.ಎನ್ ಪಾಟೀಲ ಮುಖ್ಯ ಪಶುವೈದ್ಯಾಧಿಕಾರಿಗಳು(ಆಡಳಿತ) ಪಶು ಆಸ್ಪತ್ರೆ ಕೋಲ್ಹಾರ, ಶ್ರೀ ಎಮ್ ಎಮ್ ಅಂಗಡಗೇರಿ ಹಿರಿಯ ಪಶುವೈದ್ಯಕೀಯ ಪರೀಕ್ಷಕರು ಪಶು ಆಸ್ಪತ್ರೆ ಕೋಲ್ಹಾರ, ಶ್ರೀ ಕಲ್ಲು ದೇಸಾಯಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಹಾಗೂ ಕೋಲ್ಹಾರ ಹಾಗೂ ಸುತ್ತ ಮುತ್ತಲಿನ ರೈತ ಬಾಂದವರು ಹಾಜರಿದ್ದರು.