Home News ನಿರಂತರ ಮಳೆಗೆ ಕುಸಿದುಬಿದ್ದ ಮೇಲ್ಛಾವಣಿ ಕುಟುಂಬ ಬೀದಿಗೆ

ನಿರಂತರ ಮಳೆಗೆ ಕುಸಿದುಬಿದ್ದ ಮೇಲ್ಛಾವಣಿ ಕುಟುಂಬ ಬೀದಿಗೆ

by vegadhut@gmail.com.
0 comments

ಕುಸಿದ  ಮೇಲ್ಛಾವಣಿಯಿಂದ  ಕುಟುಂಬ  ಕಂಗಾಲು ಆಶ್ರಯಕ್ಕಾಗಿ  ಪರದಾಡುತ್ತಿರುವ  ಕುಟುಂಬದ ಸದಸ್ಯರು ನೇರವಾಗುವವರಾರು 

ಸಿಂದಗಿ : ಕಳೆದ ಒಂದು ವಾರದಿಂದ ಪಟ್ಟಣ ಮತ್ತು ಸುತ್ತಮುತ್ತ ಬಿಟ್ಟು ಬಿಡದೆ ಬರುತ್ತಿರುವ ಮಳೆ ಗುರುವಾರವೂ ಮುಂದುವರಿದಿದೆ. ಮಳೆಯ ಜೊತೆಯಲ್ಲಿ ಥಂಡಿ ಗಾಳಿ ಕೂಡ ಬೀಸುತ್ತಿದೆ. ತಾಲೂಕಿನ ಮದರಿ ಗ್ರಾಮದ ಸಿದ್ದಪ್ಪ ಗುರಪ್ಪ ಸುತಾರ ಅವರ ಮನೆಯ ಮೇಲಿನ ಗೋಡೆ ಮಳೆಯಿಂದಾಗಿ ಬಿದ್ದುಹೋಗಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

    ಸಿದ್ದಪ್ಪ ಸುತಾರ ಅವರ ಮನೆಯಲ್ಲಿ ಒಟ್ಟು  ಆರು ಜನರು ವಾಸವಾಗಿದ್ದಾರೆ. ಮಂಗಳವಾರ ಮಧ್ಯರಾತ್ರಿಯಲ್ಲಿ ಘಟನೆ ನಡೆದಿದ್ದು, ಅವರು ಮನೆಯ ಹೊರ ಭಾಗದಲ್ಲಿರುವ ಜಾಗದಲ್ಲಿ ಮಲಗಿದ್ದರಿಂದ ಯಾವುದೇ ಅಪಾಯವಾಗಿಲ್ಲ.

banner

  ಇದರಿಂದ ಮಳೆಯ ನೀರೆಲ್ಲ ಒಂದೇ ಕಡೆ ನಿಲ್ಲುವುದರಿಂದ ಮನೆಯ ಗೋಡೆ ನೀರಿನಿಂದಾಗಿ ಕುಸಿಯಲು ಕಾರಣವಾಗಿದೆ. ಈ ಸಂಬಂಧ ಸಿದ್ದಪ್ಪ ಅವರ ಮಗ ಸದಾನಂದ ಅವರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮತ್ತು ಅಧ್ಯಕ್ಷರಿಗೆ ಮಾಹಿತಿ ನೀಡಿದ್ದು, ಸರಕಾರದ ವತಿಯಿಂದ ಸೂಕ್ತ ಪರಿಹಾರ ಕೊಡಿಸುವಂತೆ ಅಧಿಕಾರಗಳಿಗೆ ಮತ್ತು ಶಾಸಕರಿಗೆ ಮನವಿ ಮಾಡಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news