
ಪಟ್ಟಣದಲ್ಲಿ ಕೆಲವೆ ನಿಮಿಷಗಳ ಕಾಲ ಸುರಿದ ಬಿರುಸಿನ ಮಳೆಗೆ ಸಿಂದಗಿ ಪಟ್ಟಣ ಬಹುತೇಕ ಕಾಲೋನಿಗಳು ಜಲಾವೃತಗೊಂಡಿವೆ.
ಸಿಂದಗಿ : ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಸಂಗಮ ಬಾರ ಎದುರಿಗೆ ಹೋಗುವ ಸೊಂಪುರ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಜನ ಸಾಮಾನ್ಯರು ಜೀವ ಕೈಯಲ್ಲಿ ಹಿಡಿದು ತಿರುಗುವಂತಾಗಿದೆ. ಈ ರಸ್ತೆ ನೂತನ ಅಧ್ಯಕ್ಷರಾದ ಶಾಂತವೀರ ಬಿರಾದಾರ ಅವರ ಮನೆಗೆ ಹೋಗುವ ರಸ್ತೆಯು ಹೌದು.
ಈ ಹಿಂದೆ ಬಿರುಸಿನ ಮಳೆಗೆ ಸಿಂದಗಿ ಪಟ್ಟಣ ತುತ್ತಾಗಿದ್ದ ಸಂದರ್ಭದಲ್ಲಿ ಶಾಸಕ ಅಶೋಕ ಮನಗೂಳಿ ತಡರಾತ್ರಿ ಉಪ ವಿಭಾಗಾಧಿಕಾರಿ ಅಬೀದ ಗದ್ಯಾಳ ಅವರೊಂದಿಗೆ ಬೇಟಿ ನೀಡಿ ಅಲ್ಲಿನ ಲೋಪಗಳ ಬಗ್ಗೆ ಗಮನ ಹರಿಸಿ ಜನ ಮನ್ನಣೆ ಗಳಿಸಿದ್ದರು. ಆದರೆ ಶಾಸಕರು ಬಂದು ಹೋದ ನಂತರ ಕೇವಲ ಗರಸು ಹಾಕಿ ತಾತ್ಕಾಲಿಕ ಪರಿಹಾರ ಒದಗಿಸಿ ಅಧಿಕಾರಿಗಳು ಸುಮ್ಮನಾಗಿದ್ದರು. ಶಾಶ್ವತ ಪರಿಹಾರ ಸಿಗದು ರಸ್ತೆಗೆ ಈ ಬಾರಿಯಾದರು ಶಾಶ್ಪವತ ಪರಿಹಾರ ಸಿಗುತ್ತಾ ಕಾದು ನೋಡಬೇಕಾಗಿದೆ.
