Home News ಶಿಕ್ಷಕರ, ಶಿಕ್ಷಣ ಸಂಸ್ಥೆಯ ಸಮಸ್ಸೆಯಿದ್ದರೆ ಬಗೆಹರಿಸಲು ಸದಾ ಸಿದ್ದ ; ಪ್ರಕಾಶ ಹುಕೇರಿ

ಶಿಕ್ಷಕರ, ಶಿಕ್ಷಣ ಸಂಸ್ಥೆಯ ಸಮಸ್ಸೆಯಿದ್ದರೆ ಬಗೆಹರಿಸಲು ಸದಾ ಸಿದ್ದ ; ಪ್ರಕಾಶ ಹುಕೇರಿ

by vegadhut@gmail.com.
0 comments

ಸಿಂದಗಿ: ನನ್ನ ಮಾತು ಕಡಿಮೆ ಕೆಲಸ ಜಾಸ್ತಿ ಗೆಲ್ಲುವ ತನಕ ಅಷ್ಟೆ ಪಕ್ಷ ಆಯ್ಕೆಯಾದ ಮೇಲೆ ಕಾಯಕ ಮಾತ್ರ ಪಕ್ಷಾತೀತ ಎಂದು ವಿ.ಪ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.
ಪಟ್ಟಣದ ಹೆಚ್.ಜಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ವತಿಯಿಂದ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದ ಹಿನ್ನಲೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದರು. ಈ ವೇಳೆ ಮಾತನಾಡಿದ ಅವರು ಶಿಕ್ಷಕರ ಕ್ಷೇತ್ರದಲ್ಲಿ ಹಲವಾರು ಜ್ವಲಂತ ಸಮಸ್ಸೆಗಳಿವೆ ಈ ಕ್ಷೇತ್ರದಿಂದ ಆಯ್ಕೆಯಾದ ನಾವೆಲ್ಲ ಸದಸ್ಯರುಗಳು ಸಭೆ ನಡೆಸಿ ಮುಖ್ಯಮಂತ್ರಿಗಳ ಗಮನ ಸೆಳೆದು ಸಮಸ್ಸೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಈಗಾಗಲೇ ನೂರಾರು ಮನವಿಗಳು ಬಂದಿವೆ ಅದನ್ನು ಗಮನಿಸಿ ಸೂಕ್ತ ಪರಿಹಾರ ಒದಗಿಸುವೆ ಒಟ್ಟು ಜೀವಮಾನದಲ್ಲಿ ೮ ಬಾರಿ ಗೆಲವು ಕಂಡಿದ್ದೇನೆ. ೭ ಬಾರಿ ವಿಧಾನ ಸಭೆಗೆ ಆಯ್ಕೆಯಾಗಿ ೮ ನೇ ಬಾರಿ ವಿ.ಪರಿಷತ್‌ಗೆ ಪ್ರವೇಶ ಮಾಡಿದ್ದೇನೆ. ಶಿಕ್ಷಕರ, ಶಿಕ್ಷಣ ಸಂಸ್ಥೆಗಳ ಯಾವುದೇ ಸಮಸ್ಸೆಯಿದ್ದರೂ ಪರಿಹರಿಸಲು ನಾನು ಸದಾ ಸಿದ್ದ ಹಿಡಿದ ಕಾರ್ಯ ಇತ್ಯರ್ಥವಾಗುವವರೆಗೆ ಬಿಡುವುದಿಲ್ಲ ಮತದಾನ ಮಾಡಿ ನನ್ನನ್ನು ಆಯ್ಕೆ ಮಾಡಿದ ಶಿಕ್ಷಕರು ಸೈ ಎನ್ನವ ರೀತಿ ಕೆಲಸ ಮಾಡುವೆ ಎಂದರು.

ಈ ವೇಳೆ ತಾ.ಶಿ.ಪ್ರ.ಮಂಡಳಿಯ ಅಧ್ಯಕ್ಷರಾದ ಅಶೋಕ ಮನಗೂಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಮಲ್ಲಣ್ಣ ಸಾಲಿ, ಕಾಂಗ್ರೆಸ್ ಮುಖಂಡ ಯೋಗಪ್ಪಗೌಡ ಪಾಟೀಲ, ಸಂಸ್ಥೆಯ ನಿರ್ದೇಶಕರಾದ ಶಿವಪ್ಪಗೌಡ ಬಿರಾದಾರ ಶಿರೂಗೌಡ ದೇವರಮನಿ(ಪವಾಡಿ), ಬಿ.ಜಿ.ನೆಲ್ಲಗಿ, ಶಂಕರಗೌಡ ಪಾಟೀಲ, ವಿಶ್ವನಾಥ ಬಿರಾದಾರ ಸೇರಿದಂತೆ ಸಂಸ್ಥೆ ಮತ್ತು ಅಂಗ ಸಂಸ್ಥೆಯ ವಿಧ್ಯಾರ್ಥಿಗಳು ಭೋದಕ ಮತ್ತು ಭೋದಕೇತರ ಸಿಬ್ಬಂದಿ ಇದ್ದರು.
ಪ್ರಾಂಶುಪಾಲರಾದ ಎ.ಆರ್.ಹೆಗ್ಗಣದೊಡ್ಡಿ ಸ್ವಾಗತಿಸಿದರು. ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿ ವಂದಿಸಿದರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news