ಸಿಂದಗಿ: ಜೆಡಿಎಸ್ ಪಕ್ಷದ ತತ್ವ ಸಿದ್ದಾಂತ ಹಾಗೂ ರೈತರಿಗೆ ನೀಡಿದ ಸೌಲಭ್ಯಗಳನ್ನು ಹರಿದು ಬರುಬೇಕು ಎಚ್.ಡಿ.ಕುಮಾರಸ್ವಾಮಿಯವರ ಕೈ ಬಲಬಡಿಸಬೇಕು ಎಂದು ಆಲಹಳ್ಳಿ ಗ್ರಾಮದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ತಾಲೂಕಿನ ಆಲಹಳ್ಳಿ ಗ್ರಾಮದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 18 ತಿಂಗಳು ಜೆಡಿಎಸ್ ಪಕ್ಷದ ಸಮ್ಮಿಶ್ರ ಸರಕಾರದ ಕಾಲಾವಧಿಯಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ನೀಡಿರುವ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಗೆಲ್ಲಿಸುವ ನಿಟ್ಟಿನಲ್ಲಿ ವಿವಿಧ ಪಕ್ಷಗಳಿಂದ ಜನರು ಸೇರ್ಪಡೆಯಾಗುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಶಿವಾನಂದ ಪಟೀಲ ಸೋಮಜಾಳ ಹೇಳಿದರು.
ಈ ಸಂದರ್ಭದಲ್ಲಿ ಮಡಿವಾಳ ಪಾಟೀಲ, ಯಲ್ಲಾಲಿಂಗ ಪಾಟೀಲ, ಶರಣಗೌಡ ಉಡುಗಿ, ಸಿದ್ದು ಶಾಬಾದಿ, ಈರಣ್ಣ ಬೊಮ್ಮನಹಳ್ಳಿ, ಭೀಮು ಸಾತಲಗಾಂವ, ಚೀದು ಮಾರ್ಸನಹಳ್ಳಿ, ವುದಾಲಸಾಬ ಭೈರವಾಡಗಿ, ನಾನಾಗೌಡ ಬಿರಾದಾರ, ಜೆಟಪ್ಪ ಪೂಜಾರಿ, ಮಲ್ಲು ಬೊಮ್ಮನಹಳ್ಳಿ, ಯಶವಂತ್ರಾಯಗೌಡ ಸಾತಲಗಾಂವ, ಭೀಮು ಪಾಟೀಲ, ದತ್ತು ತಳವಾರ, ಸಿದ್ದು ಸ್ವಾಡಗಿ, ಈರಣ್ಣ ಚಾವರಗಿ, ರೇವಣ್ಣಸಿದ್ದ ಪಾಟೀಲ, ಶರಣು ಅಲಹಳ್ಳಿ, ಯಲ್ಲು ಅಲಹಳ್ಳಿ, ಮಹಾದೇವಪ್ಪ ಪೂಜಾರಿ, ಹಣಮಂತ ತಳವಾರ, ಕಾಳು ಶಾಬಾದಿ, ಶ್ರೀಶೈಲ ಕನ್ನೋಳ್ಳಿ ಸೇರಿದಂತೆ ವಿವಿದ ಪಕ್ಷಗಳ ಕಾರ್ಯಕರ್ತರು ಹಾಗೂ ಊರಿನ ಪ್ರಮುಖರು ಜೆಡಿಎಸ್ ಪಕ್ಷ ಸೆರ್ಪಡೆಯಾದರು.
