ಪಟ್ಟಣದ ಹಲವು ವಿದ್ಯಾಮಂದಿರದಲ್ಲಿ ಸಾಮೂಹಿಕ ರಕ್ಷಾ ಬಂಧನ ಆಚರಣೆ ಮಾಡಲಾಯಿತು.
ಸಿಂದಗಿ: ಸಹೋದರ, ಸಹೋದರಿಯರ ಭಾಂಧವ್ಯದ ಸಂಕೇತವೇ ರಕ್ಷಾಬಂಧನ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾಮಂದಿರದಲ್ಲಿ ಬುಧವಾರದಂದು ಹಮ್ಮಿಕೊಂಡ ರಕ್ಷಾಬಂಧನ, ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕೋರುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಭಾರತದ ಸಂಸ್ಕೃತ ಉಳಿವಿನಲ್ಲಿ ಕನ್ನಡ ಮಾಧ್ಯಮ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ ಈ ನಿಟ್ಟಿನಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಎಂದು ಹೇಳಿದರು.
ಶಿಕ್ಷಣ ಸಂಸ್ಥೆಗೆ 51 ಸಾವಿರ ರೂ ದೇಣಿಗೆ ನೀಡಿ ನನ್ನ ಅಧಿಕಾರ ಅವಧಿಯಲ್ಲಿ ಈ ಸಂಸ್ಥೆಯ ಪರವಾದ ಕಾರ್ಯವನ್ನು ಮಾಡುವೆ ಎಂದು ಭರವಸೆ ನೀಡಿದರು.
ಮಾತನಾಡಿದ ತಾಲೂಕು ದಂಡಾಧಿಕಾರಿ ಪ್ರದೀಪ ಹಿರೇಮಠ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಲು ಸಮನ್ವಯ ಶಿಕ್ಷಣದ ಜತೆಗೆ ಸಂಸ್ಕಾರ ಮುಖ್ಯ ಅದು ಶಾಲೆಯಲ್ಲಿ ಕಾಣಬುಹುದಾಗಿದೆ ಎಂದು ಹೇಳಿದರು.
ವೃತ್ತ ನೀರಿಕ್ಷಕ ಡಿ.ಹುಲುಗಪ್ಪ ಮಾತನಾಡಿ ಮಕ್ಕಳು ವಿದ್ಯಾರ್ಥಿ ದೆಸೆಯಲ್ಲಿಯೇ ಗುರಿಯನ್ನು ಹೊಂದಿರಬೇಕು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಕಠಿಣ ಪರಿಶ್ರಮ ಪಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸಹಾಯಧನವಾಗಿ 5 ಸಾವಿರ ರೂ ಕಾಣಿಕೆ ನೀಡಿದರು.
ಸಂಸ್ಥೆಯ ಅಧ್ಯಕ್ಷರಾದ ಶಿವಾನಂದ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿನಿಯರು ಸಾಮೂಹಿಕವಾಗಿ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದರು.
ಈ ವೇಳೆ ಪ್ರಧಾನ ಕಾರ್ಯದರ್ಶಿ ಸತೀಶ ಹಿರೇಮಠ ಭೋದಕ ಹಾಗೂ ಭೋದಕೇತರ ಸಿಬ್ಬಂದಿ ಹಾಜರಿದ್ದರು.
ಜಗದೀಶ ಪಾಟೀಲ ಸ್ವಾಗತಿಸಿದರು. ಎಸ್.ಎ.ರಾಠೋಡ ನಿರೂಪಿಸಿದರು.
ವಿದ್ಯಾನಿಕೇತನ ಶಾಲೆಯಲ್ಲಿ ರಕ್ಷಾ ಬಂದನ
ಪಟ್ಟಣದ ಖಾಸಗಿ ಸಂಸ್ಥೆಗಳಲ್ಲೊಂದಾದ ವಿದ್ಯಾನಿಕೇತನ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಾಮೂಹಿಕ ರಕ್ಷಾ ಬಂದನ ಆಚರಿಸಿದರು.
ರಕ್ಷಾ ಬಂಧನದ ಕುರಿತು ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಆರ್.ಡಿ.ಕುಲಕರ್ಣಿ ಅವರು ಈ ಹಬ್ಬ ಸಹೋದರತ್ವದ ಮಹತ್ವ ಸಾರುವ ಹಬ್ಬವಾಗಿದೆ ಸಹೋದರರು ತಮ್ಮ ಅಕ್ಕ-ತಂಗಿಯರಿಂದ ಕೈಗೆ ಕಟ್ಟುವ ದಾರ ರಕ್ಷಾ ಕವಚದ ಸಂಕೇತವಾಗಿರುತ್ತದೆ ಎಂಬ ನಂಬಿಕೆಯಿದೆ. ಸಂಸ್ಥೆಯಲ್ಲಿ ಪುಟ್ಟ ಮಕ್ಕಳು ಸಾಮೂಹಿಕವಾಗಿ ರಕ್ಷಾಬಂಧನದಲ್ಲಿ ಪಾಲ್ಗೊಂಡು ತಮ್ಮ ಸಹೋದರತ್ವದ ಸಂಬಂಧಗಳು ಗಟ್ಟಿಯಾಗಿ ಉಳಿಯಲಿ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ ಮುಖ್ಯೋಪಾಧ್ಯಾಯಿನಿ ಎಮ್.ಪಿ.ಬುಕ್ಕಾ ಹಾಗೂ ಬೋದಕ-ಬೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

