ಸಿಂದಗಿ : ಪಟ್ಟಣದ ಎಮ್.ಸಿ.ಮನಗೂಳಿ ಪ್ರತಿಷ್ಠಾನದಿಂದ ವ್ಹಿ ಆರ್ ಎಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ವಿಜಯ ಸಂಕೇಶ್ವರ ಅವರ ಬದುಕಿನ ಪ್ರೇರಣೆಗೆ ಪೂರಿತವಾದ ವಿಜಯಾನಂದ ಚಲನಚಿತ್ರದ ವಿಕ್ಷಣೆಗೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲೆಂದು ಉಚಿತವಾಗಿ ಎಮ್.ಸಿ.ಮನಗೂಳಿ ಪ್ರತಿಷ್ಠಾನ ಹಮ್ಮಿಕೊಂಡಿದೆ.

ದಿನಾಂಕ 13 ,ಮತ್ತು 14 ಡಿಸೆಂಬರ್ ದಂದು ಬೆಳಗ್ಗೆ 11.00’ ಗಂಟೆಗೆ ವಿನಾಯಕ ಚಿತ್ರಮಂದಿರದಲ್ಲಿ ಅವಕಾಶ ಮಾಡಿಕೊಟ್ಟಿದ್ದು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಬರುವಾಗ ತಮ್ಮ ಶಾಲೆಯ ಅಥವಾ ಕಾಲೇಜಿನ ಗುರುತಿನ ಕಾರ್ಡ ತರಬೇಕು ಎಂದು ಪ್ರತಿಷ್ಠಾನದ ಅಧ್ಯಕ್ಷ ಅಶೋಕ ಮನಗೂಳಿ ಮತ್ತು ಪ್ರತಿಷ್ಠಾನದ ನಿರ್ದೇಶಕ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.