Home News ನಾಳೆಯಿಂದ ಎರಡು ದಿನ ವಿಶ್ವ ವಿದ್ಯಾಲಯದ ಕುಸ್ತಿ ಪಂದ್ಯಾವಳಿ

ನಾಳೆಯಿಂದ ಎರಡು ದಿನ ವಿಶ್ವ ವಿದ್ಯಾಲಯದ ಕುಸ್ತಿ ಪಂದ್ಯಾವಳಿ

by vegadhut@gmail.com.
0 comments

ಸಿಂದಗಿ : ನಗರದ ಸಾತವೀರೇಶ್ವರ ಸಬಾ ಭವನದಲ್ಲಿ ಡಿ. 12 ಮತ್ತು 13 ರಂದು ಅಂತರ್ ಕಾಲೇಜು ಮಟ್ಟದ್ ಏಕವಲಯ ಕುಸ್ತಿ ಪಂದ್ಯಾವಳಿ ಹಾಗೂ ಆಯ್ಕೆಯ ಪ್ರಕ್ರಿಯೆ ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾ ಕೂಟದ ಸಂಘಟನಾ ಕಾರ್ಯದರ್ಶಿ, ದೈಹಿಕ ನಿರ್ದೇಶಕ ರವಿ ಗೋಲಾ ಮಾತನಾಡಿದರು.
ಪಟ್ಟಣದ ಸಾತವೀರೇಶ್ವರ ಸಬಾಭವನದಲ್ಲಿ ಡಿ. ೧೨ ಮತ್ತು ೧೩ ರಂದು ಅಂತರ್ ಕಾಲೇಜು ಮಟ್ಟದ್ ಏಕವಲಯ ಕುಸ್ತಿ ಪಂದ್ಯಾವಳಿ ಹಾಗೂ ಆಯ್ಕೆಯ ಪ್ರಕ್ರಿಯೆ ಜರುಗಲಿದೆ ಎಂದು ಕ್ರೀಡಾ ಕೂಟದ ಸಂಘಟನಾ ಕಾರ್ಯದರ್ಶಿ, ದೈಹಿಕ ನಿರ್ದೇಶಕ ರವಿ ಗೋಲಾ ತಿಳಿಸಿದರು.ನಗರದ ಜಿ.ಪಿ.ಪೋರವಾಲ್  ಮಹಾವಿದ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ರಾಣಿ ಚನ್ಮಮ್ಮ ವಿಶ್ವವಿದ್ಯಾಲಯ ಸಹಯೋಗದಲ್ಲಿ ಜಿ.ಪಿ.ಪೋರವಾಲ್ ಕಲಾ, ವಾಣಿಜ್ಯ ಮತ್ತು ವಿ.ವಿ.ಸಾಲೀಮಠ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಬಾಗಲಕೋಟ, ಚಿಕ್ಕೋಡಿ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳು ಸೇರಿ ನಾಲ್ಕು ವಲಯಗಳಲ್ಲಿ ಜರುಗಿದ ಕುಸ್ತಿ ಪಂದ್ಯಾವಳಿಯಲ್ಲಿ ಆಯ್ಕೆಯಾದ ಪುರುಷ ಮತ್ತು ಮಹಿಳೆಯರ ಏಕವಲಯ ಕುಸ್ತಿ ಪಂದ್ಯಾವಳಿ ನಡೆಯಲಿದೆ. 55 ಕೆ.ಜಿ ಯಿಂದ ೧೨೦ ಕೆ.ಜಿ ವರೆಗೂ ಹೊಂದಿರುವ 150 ಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಭಾಗವಹಿಸಿವ ನಿರೇಕ್ಷಿಯಿದೆ ಎಂದು ಹೇಳಿದರು.

 

banner

12ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ. ಜಮಖಂಡಿಯ ಕೊಣ್ಣೂರ ಹೋರಗಿನ ಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯರ ಸಮ್ಮುಖ ವಹಿಸುವರು. ಮುಖ್ಯ ಅತಿಥಿಗಳಾಗಿ ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಅತಿಥಿಗಳಾಗಿ ಸಂಸ್ಥೆಯ ಸಹ-ಕಾರ್ಯದರ್ಶಿ ಅಶೋಕ ವಾರದ, ಖಜಾಂಚಿ ಗಂಗಾಧರ ಜೋಗುರ, ಗುತ್ತಿಗೆದಾರ ಶಿವಾನಂದ ರೆಬಿನಾಳ ಇರಲಿದ್ದಾರೆ. 13 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಟಿಎಸ್‌ಪಿ ಮಂಡಳಿಯ ಅಧ್ಯಕ್ಷ ಅಶೋಕ ಮನಗೂಳಿ, ಸಂಸ್ಥೆಯ ಕಾರ್ಯದರ್ಶಿ ನೇಹರು ಪೋರವಾಲ್, ನಿರ್ದೇಶಕ ಆರ್.ಬಿ.ಬೂದಿಹಾಳ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಪ್ರಾಚಾರ್ಯ ಡಿ.ಎಮ್.ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿವೆ ಅದನ್ನು ಉಳಿಸಿ ಬೆಳಸಿಕೊಂಡು ಹೋಗುವ ಕಾರ್ಯ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಇಂದು ಈ ಮಾಹಾವಿದ್ಯಾಲಯ ಹಮ್ಮಿಕೊಂಡು ಮತ್ತೆ ಯುವ ಪೀಳಿಗೆಯಲ್ಲಿ ಅರಿವು ಮೂಡಿಸುವಂತಾಗುತ್ತದೆ ಮತ್ತು ಇದು ಸಂತಸದ ಸಂಗತಿ ಎಂದರು.
ಈ ವೇಳೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶರಣಬಸವ ಜೋಗುರ, ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಮ್.ಪೂಜಾರಿ, ಜಮಖಾನ ಕಾರ್ಯದರ್ಶಿ ಎಮ್.ಜೆ.ಸಂಕಪಾಲ್, ಐಕ್ಯೂಎಸಿ ಸಂಯೋಜಕಿ ಎಸ್.ಎಸ್. ಮುತ್ತಿನಪೆಂಡಿಮಠ, ಬಸವರಾಜ ಗುರುಶೆಟ್ಟಿ, ಗವಿಸಿದ್ದಪ್ಪ ಕೊಪ್ಪಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news