Home News ಯುವಾ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ನಾನೇ ಭಾರತ ಕಾರ್ಯಕ್ರಮ | ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ

ಯುವಾ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ನಾನೇ ಭಾರತ ಕಾರ್ಯಕ್ರಮ | ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ

by vegadhut@gmail.com.
0 comments

ಸಿಂದಗಿ : ಪ್ರಪಂಚವೆಲ್ಲ ಒಂದೇ ಮನೆ ಎಂಬ ಸೂತ್ರದ ಮೂಲಕ ಭಾರತ ವಿಶ್ವದ ಬಹುತೇಕ ಶ್ರೀಮಂತ ಹಾಗೂ ಮುಂದುವರೆದ ರಾಷ್ಟçಗಳಿಗಿಂತಲೂ ಭಿನ್ನವಾಗಿ ವಸುದೈವ ಕುಟುಂಬಕ ಎಂಬ ಮಂತ್ರ ಪಾಲಿಸುತ್ತ ವಿಶ್ವದ ಹಿರಿತನಕ್ಕೆ ಮುನ್ನಡೆಯಿಟ್ಟಿದೆ ಎಂದು ಯುವಾ ಬ್ರಿಗೇಡ್‌ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪಟ್ಟಣದ ಪಿಇಎಸ್ ಕಾಲೇಜಿನಲ್ಲಿ ಶುಕ್ರವಾರ ಯುವಾ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ನಾನೇ ಭಾರತ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಭಾರತಕ್ಕೆ ಭಾತೃತ್ವ ರಾಷ್ಟçವೆಂದೂ ಕರೆಯಲಾಗುತ್ತದೆ. ವಿಶ್ವದ ಬಹುತೇಕ ರಾಷ್ಟçಗಳೊಂದಿಗೆ ಕೋವಿಡ್ ಕಾಲದ ಸಂಕಟದಲ್ಲಿ ವ್ಯಾಕ್ಸಿನ್ ಪೂರೈಸಿ ಸಹಾಯ ಹಸ್ತ ಚಾಚಿ, ಯುರೋಪ ಮತ್ತು ಅಮೆರಿಕಾದಂತಹ ರಾಷ್ಟçಗಳು ಭಾರತದ ಬಗ್ಗೆ ಚಕಾರವೆತ್ತಲೂ ಆಲೋಚಿಸುವ ಸ್ಥಿತಿ ಬಂದಿದೆ. ಒಂದು ಕಾಲದಲ್ಲಿ ಬಡ ರಾಷ್ಟçವಾಗಿ ಮೂದಲಿಕೆಯನ್ನು ಅನುಭವಿಸುತ್ತಿದ್ದ ಭಾರತವು ಇಂದು ವಿಶ್ವಕ್ಕೆ ಹೊಸ ಭಾರತವಾಗಿ ಕಂಗೊಳಿಸುತ್ತಿದೆ ಎಂದರು.

ನಮ್ಮ ದೇಶದ ಒಂದು ಅಂತರ್ಗತ ಶಕ್ತಿ ಗಟ್ಟಿ ಮನಸ್ಸು. ಈ ಮನಸ್ಸನ್ನು ನಿಗ್ರಹಿಸಿ ಜಗತ್ತನ್ನೇ ಗೆಲ್ಲಬಲ್ಲೆವು ಎಂಬ ಸತ್ಯಕ್ಕೆ ಸಾಕ್ಷಿಯಾಗುವ ಸ್ವಾಮಿ ವಿವೇಕಾನಂದರು ಹಾಗೂ ಡಾ.ಅಬ್ದುಲ್ ಕಲಾಂರ ಬದುಕು ನಮೆಗಲ್ಲ ಪ್ರೇರಣೆ. ಅವರಂತೆ ನೀವು ಮನಸ್ಸನ್ನು ಕಠಿಣ ಪರಿಶ್ರಮದಿಂದ ಸಿದ್ಧಿಯಾಗಿಸಿ, ಹಿರಿದಾದ ವ್ಯಕ್ತಿತ್ವ ರೂಪಿಸಿಕೊಂಡು ಭಾರತದ ವಿಶ್ವದರ್ಜೆಯ ಪ್ರಜೆಗಳಾಗೋಣ ಎಂದರು.
ಸಣ್ಣ ಕನಸ್ಸುಗಳಿಂದ ಏನೂ ಸಾಕಾರವಾಗೋದಿಲ್ಲ. ಕಟ್ಟಿದರೆ ಕಲಾಂರ ವಾಣಿಯಂತೆ ನಿದ್ರೆಯ ಪರಿವಿಲ್ಲದಂತೆ ಕಣ್ಣು ತೆಗೆದು ಕನಸ್ಸು ಕಾಣೋಣ. ನಿಶ್ಚಿತ ಗುರಿಯತ್ತ ನಮ್ಮ ಬದುಕನ್ನು ಹೊರಳಿಸೋಣ. ನವ ಭಾರತದ ಶಿಲ್ಪಿಗಳಾಗಿ ನಾನೇ ಭಾರತವೆಂದುಕೊಂಡು ಬಲಿಷ್ಠ ಮತ್ತು ವಿಶ್ವದ ಭವಿಷ್ಯ ಬರೆವ ಭಾವಿ ಪ್ರಜೆಗಳಾಗೋಣ ಎಂದರು.

ಉತ್ತರ ಕರ್ನಾಟಕ ರಾಜ್ಯ ಸಂಚಾಲಕ ವರ್ಧಮಾನ ತ್ಯಾಗಿ ಇದ್ದರು. ಅಧ್ಯಕ್ಷತೆ ವಹಿಸಿದ್ದ ಪಿಇಎಸ್ ಸಂಸ್ಥೆಯ ಕಾರ್ಯದರ್ಶಿ ಬಿ.ಪಿ.ಕರ್ಜಗಿ ಮಾತನಾಡಿದರು.
ಅಶೋಕ ಅಲ್ಲಾಪೂರ, ಕೆ.ಎಚ್.ಸೋಮಾಪೂರ, ಪಿ.ಎಂ.ಮಡಿವಾಳರ, ಆಯ್.ಬಿ.ಬಿರಾದಾರ, ಪ್ರಾಚಾರ್ಯ ಗುರು ಕಡಣಿ, ಪ್ರಾಚಾರ್ಯ ರವಿ ಗೋಡ್ಕರ, ಶಿವು ಕಾಟಕರ, ಮಡಿವಾಳ ವಾಲಿಕಾರ, ಡಾ.ಅನೀಲ ನಾಯ್ಕ, ಮಲ್ಲು ಪೂಜಾರಿ, ತಾಲ್ಲೂಕು ಯುವಾ ಬ್ರಿಗೇಡ್ ಸಂಚಾಲಕ ರಾಜು ಪಾಟೀಲ, ನಿಂಗು ಆಜಾದ್, ಆಕಾಶ ಕುಂಬಾರ, ಲಿಂಗು ಪಾಟೀಲ, ರಾಜು ಬಿರಾದಾರ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news