ಸಿಂದಗಿ: ಉಪನೊಂದಣಾಧಿಕಾರಿಗಳ ಕಛೇರಿಗೆ ಬೇಟಿ ನೀಡಿದ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ಹಲವು ಕಡತಗಳ ಪರಿಶೀಲನೆ ನಡೆಸಿದರು.
ಲೋಕಾಯುಕ್ತಕ್ಕೆ ದೂರು ಬಂದಿರುವ ಕಾರಣ ಬೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ್ದೆವೆ ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಕಳುಹಿಸುವೆವು. ಜನರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿಲಾಗಿದೆ ಎಂದು ಡಿ.ಎಸ್.ಪಿ. ವಿಜಯಪುರ ಲೋಕಾಯುಕ್ತ ಅರುಣಕುಮಾರ ನಾಯಕ ತಿಳಿಸಿದರು.
ಸಿ.ಪಿ.ಆಯ್. ಅಧಿಕಾರಿಗಳಾದ ಆನಂದ ಟಕ್ಕೆನವರ, ಆನಂದ ಡೋಣಿ, ಸಿ.ಪಿ.ಸಿ. ಅಧಿಕಾರಿ ಎಂ.ಎಚ್.ಇಂಚುರ, ಎಸ್.ಆಯ್.ಅಮರಖೇಡ, ಎಮ್. ಎಸ್.ತಗ್ಗೇಳ್ಳಿ, ಗುರು ಹಡಪದ, ಅನಿತಾ ಮಂಡಿಗೇರಿ ಪರಿಶೀಲಿಸಿದರು.
