Home News ವಿದ್ಯುತ್ ಪರಿವರ್ತಕ ಘಟಕದ ನೂತನ ಕಟ್ಟಡ ಲೋಕಾರ್ಪಣೆ | ರೈತರಿಗೆ 24 ಗಂಟೆಯಲ್ಲಿ ಟಿ.ಸಿ.ರಿಪೇರಿ

ವಿದ್ಯುತ್ ಪರಿವರ್ತಕ ಘಟಕದ ನೂತನ ಕಟ್ಟಡ ಲೋಕಾರ್ಪಣೆ | ರೈತರಿಗೆ 24 ಗಂಟೆಯಲ್ಲಿ ಟಿ.ಸಿ.ರಿಪೇರಿ

by vegadhut@gmail.com.
0 comments

ಸಿಂದಗಿ: ಈ ನೂತನ ಉಪ ವಿಭಾಗೀಯ ಕಛೇರಿಯ ಕಟ್ಟಡಗಳಿಗಾಗಿ 80ಲಕ್ಷ ರೂ. ಮೋರಟಗಿ ಶಾಖಾ ಕಛೇರಿಗೆ 40ಲಕ್ಷ ರೂ, ದೇವಣಗಾವ ಶಾಖಾ ಕಛೇರಿಗೆ 40ಲಕ್ಷ ರೂ. ಗೋಲಗೇರಿ ಶಾಖಾ ಕಛೇರಿಗೆ 30ಲಕ್ಷ ರೂ. ಮತ್ತು ವಿದ್ಯುತ್ ಪರಿವರ್ತಕ ಪರೀಕ್ಷಾ ಕೇಂದ್ರ 27ಲಕ್ಷ ರೂ. ಮೊತ್ತವನ್ನು ಖರ್ಚು ಮಾಡಿ ಬಹು ಸುಂದರವಾದ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ನಗರದ ಕೆಇಬಿ ನೂತನ ಕಟ್ಟಡದ ಒಳಾಂಗಣದಲ್ಲಿ ಹಮ್ಮಿಕೊಂಡ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಬಹುದಿನಗಳ ಬೇಡಿಕೆಯಾಗಿದ್ದ ವಿದ್ಯುತ್ ಪರಿರ್ವರ್ತಕ ಪರೀಕ್ಷಾ ಕೇಂದ್ರದ ಧ್ವನಿಗೆ ಇದೀಗ ಕಾಲ ಒದಗಿ ಬಂದಿದೆ. ರೈತರಿಗೆ ಅನಾನುಕೂಲವಾಗಬಾರದು ಎಂಬ ಕಾರಣಕ್ಕೆ ಸಿಂದಗಿಯಲ್ಲಿ ರಿಪೇರಿ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ. ಇನ್ನೂ ಮುಂದೆ ರೈತರು 24ಗಂಟೆಯೊಳಗೆ ಸ್ಥಳಕ್ಕೆ ಬಂದು ಟಿಸಿ ರಿಪೇರಿ ಮಾಡಿಕೊಳ್ಳಬಹುದು. ನನ್ನ ಅವಧಿಯಲ್ಲಿ ಭೂಮಿ ಪೂಜೆಯಾಗಿದ್ದ, ಉಪ ವಿಭಾಗೀಯ ಕಛೇರಿಯ ಕಟ್ಟಡ ಹಾಗೂ ವಿದ್ಯುತ್ ಪರಿವರ್ತಕ ಪರೀಕ್ಷಾ ಕೇಂದ್ರ ಕಟ್ಟಡಗಳ ಮತ್ತೆ ನನ್ನ ಅವಧಿಯಲ್ಲಿಯೇ ಉದ್ಘಾಟನೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.

ಈ ವೇಳೆ ಎಇಇ ವಿಶಾಲ ಧರೆಪ್ಪಗೋಳ ಮಾತನಾಡಿ, ವಿದ್ಯುತ್ ಪರಿವರ್ತಕಗಳನ್ನು ಪರಿಕ್ಷೀಸಲು ಇಂಡಿ ಕಚೇರಿಗೆ ತೆಗೆದುಕೊಮಡ ಹೋಗುವ ಪರಿಸ್ಥಿತಿ ಇತ್ತು. ಇದರಿಂದ ನಮಗೆ ಒಂದು ದಿನದ ಸಮಯ ವ್ಯರ್ಥವಾಗುತ್ತಿತ್ತು. ಮತ್ತು ರೈತರಿಗೆ ಪರಿವರ್ತಗಳನ್ನು ನೀಡಲು ವಿಳಂಬವಾಗುತ್ತಿತ್ತು. ಸದರಿ ಶಾಸಕರು ತಾಲೂಕಿನ ರೈತರಿಗೆ ಬಹುಬೇಗನೆ ಪರಿವರ್ತಕಗಳನ್ನು ಸೀಗುವ ಹಾಗೆ ಮಾಡಬೇಕು ಎನ್ನುವ ದಿಸೆಯಲ್ಲಿ ಈ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

banner

ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ ಮಾತನಾಡಿದರು. ಎಇ ಗೋಪಾಲ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಪುರಸಭೆ ಉಪಾದ್ಯಕ್ಷ ಹಾಸೀಂಪೀರ ಆಳಂದ, ಸದಸ್ಯ ಮಹಾಂತಗೌಡ ಪಾಟೀಲ, ಹೆಸ್ಕಾಂ ನಾವನಿರ್ದೇಶಕ ಪುಟ್ಟು ಸಾವಳಗಿ, ಕಲ್ಲಪ್ಪ ಇಂಗಳೆ, ಸಂಜು ರಾಠೋಡ, ಆರ್.ಎಸ್.ಚೋರಗಿ, ಗುರು ಗಡಗಿ, ಶಾಂತೂ ಬಿರಾದಾರ, ಗಿರೀಶ ನಾಗೂರ, ರೈತ ಭಾಗಪ್ಪಗೌಡ ಪಾಟೀಲ, ವಠಾರ, ನಿಂಗಣ್ಣ ಭಾವಿಕಟ್ಟಿ, ನಾಗಪ್ಪ ನೂಲಾನವರ, ಸಿದ್ದಲಿಂಗ, ಪ್ರವೀಣ ಹೀರೆಕುರುಬರ, ಗೌರಿಶಂಕರ ಸೇರಿದಂತೆ ತಾಲೂಕಿನ ರೈತ ಬಾಂಧವರು, ವಿದ್ಯುತ್ ಗುತ್ತಿಗೆದಾರರು, ಕವಿಪ್ರನಿನಿ, ಹುವಿಸಕಂನಿ ಅಧಿಕಾರಿಗಳು, ಲೈನಮ್ಯಾನಗಳು ಹಾಗೂ ಸಿಬ್ಬಂದಿಗಳು ಇದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news