ಸಿಂದಗಿ: ಚಾಂದಕವಠೆ ಗ್ರಾಮದಲ್ಲಿ ಕನಕದಾಸರ ಪುತ್ಥಳಿ ಅನಾವರಣದ ನಿಮಿತ್ತ ರಾಷ್ಟ್ರೀಯ ಮಟ್ಟದ ಪುರುಷ ಮತ್ತು ಮಹಿಳಾ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು ಸಮಾಜದ ಮುಖಂಡ ಮಲ್ಲಿಕಾರ್ಜುನ ಸಾವಳಸಂಗ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ಮಾ. 16 ಗುರುವಾರದಂದು ಚಾಂದಕವಠೆ ಗ್ರಾಮದಲ್ಲಿ ಕನಕದಾಸರ ಕಂಚಿನ ಪುತ್ಥಳಿ ಭವ್ಯ ಮೆರವಣಿಗೆಯೊದಿಗೆ ಅನಾವರಣಗೊಳ್ಳಿದೆ. ಪುತ್ಥಳಿ ಅನಾವರಣವನ್ನು ಸಚಿವ ಎಂ ಟಿ ಬಿ ನಾಗರಾಜ, ಪುತ್ಥಳಿ ಪುಷ್ಪಾರ್ಚನೆಯನ್ನು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಗೆ ಚಾಲನೆಯನ್ನು ರಮೇಶ ಜಿಗಜಿಣಗಿ, ಧ್ವಜಾರೋಹಣವನ್ನು ಸಚಿವ ಬೈರತಿ ಬಸವರಾಜ, ಕನಕ ಭವನದ ಅಡಿಗಲ್ಲಿನ ಉದ್ಘಾಟನೆಯನ್ನು ಶಾಸಕ ರಮೇಶ ಭೂಸನೂರ ಮಾಡಲಿದ್ದಾರೆ. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಪ.ಪೂ.ಶ್ರೀ ಸದ್ಗುರು ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಗೋಳಸಾರ, ಶ್ರೀ ಸಿದ್ದರಾಮಾನಂದ ಪುರಿ ಸ್ವಾಮಿಜಿ ತಿಂಥಣಿ ಇವರು ವಹಿಸಲಿದ್ದಾರೆ ಎಂದು ಹೇಳಿದರು.
ಸಮಾಜದ ಮುಖಂಡ ನಿಂಗಣ್ಣ ಬಿರಾದಾರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಶರಣಪ್ಪ ಕಣಮೇಶ್ವರ, ಜಿ.ಪಂ ಸದಸ್ಯ ಗುರುರಾಜಗೌಡ ಪಾಟೀಲ ಹಾಗೂ ಹಲವು ಗಣ್ಯ ಮಾನ್ಯರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ಮಾತನಾಡಿದ ಸಮಾಜದ ಮುಖಂಡ ರವಿಕಾಂತ ನಾಯ್ಕೋಡಿ ಕನಕದಾಸರ ಕಂಚಿನ ಪುತ್ಥಳಿಗೆ ಹೆಲಿಪ್ಯಾಡ್ ಮೂಲಕ ಪುಷ್ಪಾರ್ಚನೆ ಮಾಡಲಾಗುವುದು. ಸಮಾಜದ ಬೃಹತ್ ಕಾರ್ಯಕ್ರಮಕ್ಕೆ ಎಲ್ಲಾ ನನ್ನ ಸಮಾಜ ಭಾಂದವರು ಮತ್ತು ತಾಲೂಕಿನ ಜನತೆ ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತರಬೇಕು ಎಂದು ಹೇಳಿದರು. ಈ ವೇಳೆ ಕುರುಬ ಸಮಾಜದ ತಾಲೂಕ ಅದ್ಯಕ್ಷ ನಿಂಗಣ್ಣ ಬಿರಾದಾರ, ವಿಠ್ಠಲ ನಾಯ್ಕೋಡಿ, ಎಸ್.ಪಿ ಪೂಜಾರಿ, ಪ್ರಕಾಶ ಅಡವಿ, ಸಿದ್ದು ಕೆರಗೊಂಡ ಯೊಗೇಶ ನಾಯ್ಕೋಡಿ ಇದ್ದರು.