Home News ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಮಾರ್ಗ ಒನ್ ವೇ

ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಮಾರ್ಗ ಒನ್ ವೇ

by vegadhut@gmail.com.
0 comments

ಟಿಪ್ಪು ಸುಲ್ತಾನ್ ವೃತ್ತದಿಂದ ವಿವೇಕಾನಂದರ ವೃತ್ತಕ್ಕೆ ಸೇರುವ  ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಮಾರ್ಗ ಇನ್ನು ಒನ್ ವೇ ಯಾಗಿ ಮಾರ್ಪಾಡು ಮಾಡಲಾಗುತ್ತಿದೆ. 

ಸಿಂದಗಿ : ಪುರಸಭೆ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಕುರಿತು ಮಾತನಾಡಿದ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಸಾಮಾನ್ಯ ಸಭೆಯಲ್ಲಿ ಅನುಮೋದನೆ ತೆಗೆದುಕೊಂಡ ನಿರ್ಣಯಗಳನ್ನು  ಜಾರಿಗೆ ತರುತ್ತಿದ್ದೆವೆ. ಪ್ರಮುಖ ರಸ್ತೆಯಾದ ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಮಾರ್ಗ ಒನ್ ವೇ ಮಾಡಲು ಶಿಸ್ತಿನ ಕ್ರಮ ಜರುಗಿಸಲು ಸೂಚಿಸಲಾಗಿದೆ. ಟಿಪ್ಪು ವೃತ್ತದಿಂದ ವಿವೇಕಾನಂದರ ವೃತ್ತದ ಕಡೆ ಹೋಗಲು ಅವಕಾಶ ನೀಡಲಾಗಿದೆ. ವಿವೇಕಾನಂದರ ವೃತ್ತದಿಂದ ಟಿಪ್ಪು ವೃತ್ತದಕಡೆ ಬಂದರೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಂದ ದಂಡ ಗ್ಯಾರಂಟಿ ಆದರಿಂದ ಜನರು ಒನ್ ವೇ ರಸ್ತೆ ಕುರಿತು ಜನರು ಸಹಕರಿಸಬೇಕಾಗಿದೆ. ಮತ್ತು ಅಂಗಡಿಕಾರರ ನಾಮಫಲಕ ಗಳಲ್ಲಿ ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಮಾರ್ಗ  ಕಡ್ಡಾಯವಾಗಿ ಬರೆಯಲು ತಿಳಿಸಲಾಗುವುದು. 

ಇನ್ನು ಅಕ್ರಮ ಸಕ್ರಮ ನಳಗಳ ಕುರಿತು ಒಂದು ತಿಂಗಳ ಅವಕಾಶ ನೀಡಲಾಗಿದೆ ಅಕ್ರಮ ನಳಗಳನ್ನು  ಐದು ಸಾವಿರ ಇರುವ ನಳದ ಪರವಾನಗಿಯನ್ನು ಮೂರು ಸಾವಿರಕ್ಕೆ ರಿಯಾಯಿತಿ ನೀಡಲಾಗಿದೆ ನೂತನ ನಳವು ನೀಡಲಾಗುವುದು ನಳಕ್ಕೆ ಸಂಬಂಧಿಸಿದ ಸಲಕರಣೆ ಒದಗಿಸಿದರೆ ನಮ್ಮ ಸಿಬ್ಬಂದಿ ಉಚಿತವಾಗಿ ಅಳವಡಿಸಿಕೋಡುತ್ತಾರೆ. 

473-474 ಸರ್ವೆ ನಂಬರ್ ನಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತು ಇದುವರೆಗೆ ಹಸ್ತಾಂತರಿಸಲು ಆಗಿರಲಿಲ್ಲ ಆದರಿಂದ ಈಗ ನಿವೇಶನ ಗುರುತಿಸಲು ಕಲ್ಲುಗಳು ಹಾಕಲು ಟೆಂಡರ್ ಮಾಡಿ ವರ್ಕ್ ಆರ್ಡರ್ ಗುತ್ತಿಗೆದಾರನಿಗೆ ನೀಡಲಾಗಿದೆ. 

banner

ಇದುವರೆಗೆ ಖಾತಾ ಬದಲಾವಣೆಗೆ ಅಂದಾಜು ಐವತ್ತು ಅರ್ಜಿಗಳು ಬಂದಿದ್ದು ಪುರಸಭೆಗೆ ನಲವತ್ತು ದಿನಗಳ ಅವಕಾಶ ವಿರುತ್ತದೆ ಅದರೊಳಗೆ ಸಾಮಾನ್ಯ ಸಭೆ ಕರೆದು ಖಾತಾ ಬದಲಾವಣೆ ಮಾಡಲಾಗುವುದು. ಅಭಿವೃದ್ಧಿ ಪಡಿಸದೆ ಲೇಔಟ್ ಮಾಡಿರುವವರಿಗೆ ಲೇಔಟ್ ಗೆ ಕಾಂಪೌಂಡ್ ಹಾಕಿಸುವಂತೆ ನೊಟೀಸ್ ನೀಡಲಾಗುತ್ತಿದೆ.  ಲೇಔಟ್ ಅಭಿವೃದ್ಧಿಗೆ ದಾನಿಗಳು ಮುಂದೆ ಬಂದರೆ ಅವರು ಸೂಚಿಸಿದ ಹೆಸರು ಪುರಸಭೆಯ ಲೇಔಟ್ ಪಲಕದಲ್ಲಿ ಹಾಕಲಾಗುವುದು.

ಹತ್ತು ಸಾವಿರಕ್ಕಿಂತ ಮೇಲ್ಪಟ್ಟ ಬಿಲ್ಲ್ಗಳು ಉಪ ಸಮಿತಿಯಲ್ಲಿ  ಪಾಸ್, ವಿದ್ಯುತ್ ನಿರ್ವಹಣೆಗೆ ನೂತನ ಟೆಂಡರ್, ಅಂಗಡಿಕಾರರಿಗೆ ಆನ್ಲೈನ್ ಪರವಾನಗಿ ಕಡ್ಡಾಯ ಮಾಡಲಾಗಿದೆ.

ಟ್ಯಾಕ್ಸ್ ಗೋಲ್ಮಾಲ್ ಪ್ರಕರಣ ಕುರಿತು  ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ನೋಟಿಸ್ ಜಾರಿ ಮಾಡಲಾಗಿದೆ ಸಮಂಜಸ ಉತ್ತರ ನೀಡದಿದ್ದರೆ ಅವರು ಮೇಲೆ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಮುಖ್ಯಾಧಿಕಾರಿ ಸುರೇಶ ನಾಯಕ ಜೆ.ಇ ಅಜರ್ ನಾಟೀಕಾರ ಸದಸ್ಯ ಸಾಯಬಣ್ಣ ಪುರದಾಳ ಸಂದೀಪ ಚೌರ ಇದ್ದರು. 

ದಿವಂಗತ ರವಿಗೌಡ ಸಿದ್ದಪ್ಪಗೌಡ ಬಿರಾದಾರ ಇವರ ದ್ವೀತಿಯ ಪುಣ್ಯಸ್ಮರಣೆ ಅಂಗವಾಗಿ ಅವರ ಹೆಸರಿನಲ್ಲಿ 23 ಪೇಬ್ರವರಿ 2025 ರಂದು ಮುಕ್ತಿ ವಾಹನ ಪುರಸಭೆಗೆ ವೈಯಕ್ತಿಕವಾಗಿ ಹಸ್ತಾಂತರಿಸಲು ನಿರ್ಧರಿಸಿದ್ದೇನೆ.

-ಶಾಂತವೀರ ಬಿರಾದಾರ ಅಧ್ಯಕ್ಷರು ಪುರಸಭೆ ಸಿಂದಗಿ 

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news