Home News ವಾಲಿಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ವಿಜಯಪುರ ವಿಶ್ವವಿದ್ಯಾನಿಲಯ ತಂಡ

ವಾಲಿಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ವಿಜಯಪುರ ವಿಶ್ವವಿದ್ಯಾನಿಲಯ ತಂಡ

by vegadhut@gmail.com.
0 comments

ಸಿಂದಗಿ: ಕ್ರೀಡೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಬಾಲ್ಯದಿಂದಲೇ ವಿದ್ಯಾರ್ಥಿಗಳು ದೈಹಿಕವಾಗಿ ಸದೃಢರಾಗಲು ಕ್ರೀಡೆಗಳು ಅತ್ಯವಶ್ಯಕವಾಗಿವೆ ಎಂದು ಟಿಎಸ್‌ಪಿ ಮಂಡಳಿ ಅಧ್ಯಕ್ಷ ಅಶೋಕ ಮನಗೂಳಿ ಹೇಳಿದರು.
ನಗರದಲ್ಲಿ ಗುರುವಾರದಂದು ನಡೆದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ವಾಲಿಬಾಲ್ ಪಂದ್ಯಾವಳಿ ಜರುಗಿತು.
ನಗರದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಉಪನ್ಯಾಸಕರು ಮತ್ತು ದೈಹಿಕ ನಿರ್ದೇಶಕರು ಮಕ್ಕಳಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಉತ್ತಮ ವೇದಿಕೆ ಕಲ್ಪಿಸಿಕೊಡಬೇಕು. ಮಾಹಿತಿ ತಂತ್ರಜ್ಞಾನ ಬಳಕೆಯಿಂದ ಮಕ್ಕಳು ದೈಹಿಕವಾಗಿ ಕುಂಠಿತರಾಗುತ್ತಿದ್ದಾರೆ. ಅವರ ಆರೋಗ್ಯ ಚನ್ನಾಗಿರುವ ನಿಟ್ಟಿನಲ್ಲಿ ಅವರಿಗೆ ಕ್ರೀಡಯೆಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಸಾನಿಧ್ಯ ವಹಿಸಿದ್ದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಕ್ರೀಡೆಗಳಿಂದ ಮಕ್ಕಳಲ್ಲಿ ಶಿಸ್ತು ಮತ್ತು ಸ್ಪರ್ಧಾ ಮನೋಭಾವ ಬೆಳೆಯುತ್ತದೆ. ಕ್ರೀಡಾಕೂಟವು ಮಕ್ಕಳಲ್ಲಿ ಸೃಜನಶೀಲತೆ ಮತ್ತು ಪ್ರತಿಭೆ ಅನಾವರಣ ಮಾಡುವ ವೇದಿಕೆಯಾಗಿದೆ ಎಂದು ಹೇಳಿದರು.

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ಬೈಲಹೊಂಗಲ್‌ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ವಿಜಯಪುರ ತಂಡದ ಕಾವೇರಿ ಅರ್ಜುನ್ ಅತ್ಯುತ್ತಮ ಆಕ್ರಮಣಕಾರಿ ಆಟಗಾರ್ತಿಯಾದರೆ, ಬೈಲಹೊಂಗಲ್ ತಂಡದ ಆಟಗಾರ್ತಿ ರಾಜಶ್ರೀ ಕಪೋಲಿ ಅತ್ಯುತ್ತಮ ಆಲ್ ರೌಂಡರ್ ಪಟ್ಟ ತಮ್ಮದಾಗಿಸಿಕೊಂಡರೆ, ಸಿಂದಗಿ ಶ್ರೀ ಪದ್ಮರಾಜ ಮಹಿಳಾ ಕಾಲೇಜಿನ ತಂಡದ ಸದಸ್ಯೆ ಕನ್ಯಾಕುಮಾರಿ ಅತನೂರ ಅತ್ಯುತ್ತಮ ಆಟಗಾರ್ತಿಯಾಗಿ ಹೊರಹೊಮ್ಮಿದರು.
ಆಯ್ಕೆಯ ಸಮಿತಿ ಸದಸ್ಯರಾಗಿ ಸುನೀಲ ನಡಕಟ್ಟಿ, ವಿ ಟಿ ಬಿಕ್ಕಣ್ಣವರ, ರಾಜಶೇಖರ್ ಬೆನಕನಳ್ಳಿ ಕಾರ್ಯನಿರ್ವಹಿಸಿದರು. ನಿರ್ಣಾಯಕರಾಗಿ ಎಸ್ ಎ ಜಾಹಗೀರದಾರ್, ಸವಿತಾ, ರಾಜು ಕಾಖಂಡಕಿ, ಗವಿಸಿದ್ದಪ್ಪ ಆನೆಗುಂದಿ, ಮಂಜುನಾಥ್ ತಳವಾರ್, ರವಿ ಗೋಲಾ, ಮಕಬೂಲ್ ಸೌದಾಗರ್, ಬಿ ಜಿ ಅವಟಿ ಪ್ರವೀಣ ಹಿರೇಕುರುಬರ, ರಮೇಶ ಅಲಾಳಮಠ ಇದ್ದರು. ಉಪನ್ಯಾಸಕ ಮಹಾಂತೇಶ ನೂಲಾನವರ ಸ್ವಾಗತಿಸಿದರು. ಉಪನ್ಯಾಸಕ ಜಿ.ಎ. ನಂದಿಮಠ ನಿರೂಪಿಸಿದರು. ಪ್ರಾಚಾರ್ಯ ಎಸ್ ಎಂ ಪ್ರಜಾರಿ ವಂದಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ನೆಹರು ಪೋರವಾಲ್, ಅಶೋಕ ಮಸಳಿ, ಆಡಳಿತಾಧಿಕಾರಿ ಎಂ.ಎಸ್. ಹೈಯ್ಯಾಳಕರ, ಪ್ರಭಾವತಿ ಮಾಲಿಪಾಟೀಲ್, ಶೃತಿ ಹುಗಾರ, ಉಮೇಶ ಪ್ರಜಾರಿ, ಸರಸ್ವತಿ ಜಿ, ಅನಿಲಕುಮಾರ ರಜಪೂತ, ಲಕ್ಷ್ಮೀ ಕೆಸರಗೊಪ್ಪ, ಮಂಗಳಾ ಈಳಗೇರ, ಹೇಮಾ ಹಿರೇವ್ಮಠ, ವರ್ಷಾ ಪಾಟೀಲ, ಡಾ.ಬಾಹುಬಲಿ ಒನಕುದರಿ, ಎಮ ಕೆ ಬಿರಾದಾರ, ದೊಡ್ಡಪ್ಪಗೌಡ ಪಾಟೀಲ್ ಸತೀಶ ಕಕ್ಕಸಗೇರಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಕ್ರೀಡಾಸಕ್ತರು ಇದ್ದರು.
ಬಾಕ್ಸ್: ಮಹಿಳಾ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಕ್ಕೆ 10 ಸಾವಿರ ರೂ. ಹಾಗೂ ರನ್ನರ್ ಆದ ತಂಡಕ್ಕೆ 5 ಸಾವಿರ ರೂ. ನಗದು ಬಹುಮಾನವನ್ನು ಟಿಎಸ್‌ಪಿ ಮಂಡಳಿ ಅಧ್ಯಕ್ಷ ಅಶೋಕ ಮನಗೂಳಿ ಘೋಷಿಸಿದರು.

 

 

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news