
ಸಿಂದಗಿ: ತಾಲೂಕು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ(ರಿ) ನೇತೃತ್ವದಲ್ಲಿ ವಿಶ್ವಕರ್ಮರ ಜಯಂತಿ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶನಿವಾರ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆ ನಡೆಯತು.
ತಾಲೂಕು ಆಡಳಿತ ಸೌಧದಿಂದ ಆರಂಭಗೊಂಡ ಮೆರವಣಿಗೆಗೆ ಶಾಸಕ ರಮೇಶ ಭೂಸನೂರ ಚಾಲನೆ ನೀಡಿದರು.
ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಹಾಗೂ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅವರು ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಸ್ವಾಮಿ ವಿವೇಕಾನಂದ ವೃತ್ತ, ಗೋಲಗೇರಿ ರಸ್ತೆ, ನೀಲಗಂಗಾ ದೇವಸ್ಥಾನ, ಶಾಂತೇಶ್ವರ ಮಠದ ವೃತ್ತ ಮಾರ್ಗವಾಗಿ ಕಾಳಿಕಾ ನಗರದ ಕಾಳಮ್ಮದೇವಿ ದೇವಸ್ಥಾನದ ವರೆಗೆ ಮೆರವಣಿಗೆ ಸಾಗಿ ಬಂದಿತು. ಮೆರವಣಿಗೆ ನಂತರ ಪ್ರಸಾದ ಕಾರ್ಯ ನೆರವೇರಿತು.
ಮೆರವಣಿಗೆಯಲ್ಲಿ ಮೂರುಝಾವದ ಮಠದ ರಾಮಚಂದ್ರ ಮಹಾಸ್ವಾಮಿಗಳು, ಚಿದಾನಂದ ಕಂಬಾರ, ಸಮಾಜದ ಅಧ್ಯಕ್ಷ ದಯಾನಂದ ಪತ್ತಾರ, ಉಪಾಧ್ಯಕ್ಷ ಮನೋಹರ ಪತ್ತಾರ, ವಿನೋದ ಹಂಚಿನಾಳ, ಸೋಮನಾಥ ಹಂಚಿನಾಳ, ಶ್ಯಾಮ್ ಪತ್ತಾರ, ಈರಸಂಗಪ್ಪ ಪತ್ತಾರ(ಕನ್ನೊಳ್ಳಿ), ಶಿವು ಬಡಿಗೇರ, ಪ್ರಮೋದ ಹಂಚಿನಾಳ, ಪತ್ರಕರ್ತ ವಿಜಯಕುಮಾರ ಪತ್ತಾರ, ಕಾಳು ಪತ್ತಾರ, ಸಿದ್ಧಲಿಂಗ ಪತ್ತಾರ, ನ್ಯಾಯವಾದಿ ವಿನಾಯಕ ಬಡಿಗೇರ, ಲಕ್ಷ್ಮಣ ಪತ್ತಾರ, ಗಾಯತ್ರಿ ಮಹಿಳಾ ಮಂಡಳದ ಸುಹಾಸಿನಿ ಹಂಚಿನಾಳ, ಶಿಲ್ಪಾ ಪತ್ತಾರ, ಲಕ್ಷ್ಮೀ ಪತ್ತಾರ, ಸಂಧ್ಯಾ ಪತ್ತಾರ, ಜಯಶ್ರೀ ಬಡಿಗೇರ, ಜಯಶ್ರೀ ಬಡಿಗೇರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ ನಂದಾ ಮನೋಹರ ಹಂಚಿನಾಳ ಪೌಂಡೇಶನ್

ಸಿಂದಗಿಯ ಸರಕಾರಿ ಪಿ.ಯು. ಕಾಲೇಜಿನ ವಿಧ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಕೋಡುವ ಮೂಲಕ ವಿಧ್ಯಾರ್ಥಿಗಳ ಸಹಾಯ ಮಾಡಿದ್ದಾರೆ. ಕಾಲೇಜಿನ ವಿಧ್ಯಾರ್ಥಿಯೊಬ್ಬ ಸಮಾಜದ ಹಿತದೃಷ್ಠಿಯಿಂದ ಯಾವುದೇ ಲಾಭಕ್ಕಾಗಿ ಅವರು ಕೆಲಸ ಮಾಡದೆ ನಿಷ್ಕಲ್ಮಷ ಮನಸ್ಸಿನಿಂದ ಸಮಾಜಮುಖಿ ಕೆಲಸ ಮಾಡುತ್ತಿರುವ ವಿನೋದ ಹಂಚಿನಾಳ ಬಡ ಜನತೆಗೆ ಸಾಮೂಹಿಕ ವಿವಾಹ ಮಾಡುವ ಮುಖಾಂತರ ಕಾರ್ಯ ಪ್ರಾರಂಭಿಸಿದ್ದು ಇಂದು ಯುವ ವಿಧ್ಯಾರ್ಥಿಗಳಿಗೆ ಶುದ್ಧ ನೀರು ಪೂರೈಸುವ ಕೆಲಸ ಮಾಡಿದ್ದು ಇವರ ಕಾರ್ಯ ಹೀಗೆ ಮುಂದುವರೆಯಲ್ಲಿ ಎಂದರು. ಶಾಸಕ ರಮೇಶ ಭೂಸನೂರ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿದರು ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ, ಮುಖಂಡ ಸಂತೋಷ ಪಾಟೀಲ ಡಂಬಳ ಕಾಲೇಜಿನ ಪ್ರೀನ್ಸಿಪಲ್ , ಸಿಬ್ಬಂದಿವರ್ಗ ವಿದ್ಯಾರ್ಥಿಗಳು ಇದ್ದರು.
