ಸಿಂದಗಿ : ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲವಾರು ದಿನಗಳ ಬೇಡಿಕೆಯಾದ ಹೇಣ್ಣು ಮಕ್ಕಳಿಗೆ ಸಿಜೇರಿಯನ್ ಹೇರಿಗೆ ಆಗದೆ ಇರುವ ಕಳವಳವಿತ್ತು. ಇಂದು ಬೂದಿಹಾಳ ಗ್ರಾಮದ ಹೆರಿಗೆಗಾಗಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ತೋರಿಸಿದ ಗರ್ಭಿಣಿ ರೇಖಾ ಪರಶುರಾಮ ಮಾಂಗ ಸಾ|| ಬೂದಿಹಾಳ ಇವರು ಹೆರಿಗೆ ನೋವು ಕಾಣಿಸಿಕೊಂಡ ಕಾರಣ ತಾಲೂಕಾ ಆಸ್ಪತ್ರೆಗೆ ಆಶಾ ಕಾರ್ಯಕರ್ತೆಯೊಂದಿಗೆ ಆಗಮಿಸಿದಾಗ ನಾರ್ಮಲ್ ಹೆರಿಗೆ ಆಗದೆ ಇರುವಾಗ ಸಿಜೇರಿಯನ್ ಮಾಡುವ ನಿರ್ಧಾರ ಮಾಡಿದ ವೈದ್ಯ ಡಾ.ಶಕುಂತಲಾ ಹಳ್ಳಿ ಸ್ತ್ರೀ ರೊಗ ತಜ್ಞರು ಸಿಂದಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೊದಲ ಸಿಜೇರಿಯನ್ ಮಾಡಿಕೊಂಡಿದ್ದಾರೆ. ಗಂಡು ಮಗುವಿನ ಜನನವಾಗಿದ್ದು 2.9 ಕೆ.ಜಿ ತೂಕವಿದೆ ಮಧ್ಯಾಹ್ನ 1 ಗಂಟೆ 12 ನಿಮಿಷಕ್ಕೆ ಮೊದಲ ಹೆರಿಗೆ ಯಾಗಿದೆ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಡಾ.ಶಕುಂತಲಾ ತಿಳಿಸಿದ್ದಾರೆ.

ಸಿಂದಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಜೇರಿಯನ್ ಚಿಕೀತ್ಸೆ ಮೂಲಕ ಜನಿಸಿದ ಮೊದಲ ಮಗು.
ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ. ರಾಮಕೃಷ್ಣ ಇಂಗಳೆ ಯಶಸ್ವಿಯಾಗಿ ಶಸ್ತ್ರ ಚಿಕೀತ್ಸೆ ನಡೆಸಿದ ವೈದ್ಯರ ತಂಡಕ್ಕೆ ಶುಭಕೋರಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಮೊದಲ ಸಿಜೇರಿಯನ್ ಮಾಡಿ ಗಂಡು ಮಗುವಿಗೆ ಜನನ ವಾಗಿದೆ. ನಮ್ಮಲ್ಲಿ ಆಯ್ದ ರೋಗಿಗಳು ಅಂದರೆ ಮುಂಚಿತವಾಗಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಸಲಹೆಯಂತೆ ತೋರಿಸಿಕೊಂಡ ಗರ್ಭಿಣಿಯರಿಗೆ ಮತ್ತು ವೈದ್ಯರು ನೀಡಿದ ಸಮಯದಲ್ಲಿ ಮಾತ್ರ ಸಿಜೇರಿಯನ್ ಹೆರಿಗೆ ಮಾಡಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಹೆರಿಗೆಗೆ ಬಂದಿರುವ ಗರ್ಭಿಣಿಯರನ್ನು ವಿಜಯಪುರದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗುವುದು. ನಮ್ಮಲ್ಲಿ ತುರ್ತು ಪರಿಸ್ಥಿತಿಯ ಹೆರಿಗೆಗಳು ಮಾಡಲು ಇನ್ನು ಸ್ವಲ್ಪ ಕೊರತೆಗಳಿವೆ ಅದನ್ನು ಕೆಲವು ದಿನಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಡಾ. ಶಂಕರರಾವ ದೇಶಮುಖ ಶಸ್ತ್ರ ಚಿಕೀತ್ಸೆ ವಿಭಾಗ, ಅರವಳಿಕೆ ತಜ್ಞರಾದ ಡಾ. ಸಾಯಬಣ್ಣ ಗುಣಕಿ, ಡಾ. ಪ್ರವೀಣ ಎಚ್.ಎಸ್. ಮತ್ತು ಆಸ್ಪತ್ರೆ ಸಿಬ್ಬಂದಿ ಆರ್.ಆರ್. ಸೋನಳ್ಳಿ, ಎಸ್.ಕೆ. ಹಂಗರಗಿ, ಅಶ್ವೀನಿ ಸಾವಳಗೇರಿ, ಪಾತಿಮಾ ಮತ್ತು ವೈದ್ಯರ ಮತ್ತು ಸಿಬ್ಬಂದಿ ತಂಡ ಚಿಕೀತ್ಸೆ ಯಶಸ್ವಿಮಾಡಿಕೊಂಡರು. ಆಸ್ಪತ್ರೆಯ ಸಿಬ್ಬಂದಿ ವರ್ಗ ಸಂತಸ ವ್ಯಕ್ತಪಡಿಸಿದರು.
