ಸಿಂದಗಿ: ನಗರದ ರಕ್ಷಕಳೆಂದೆ ಜನರ ಮನದಲ್ಲಿ ನೆಲೆಸಿರುವ ಮಾತೆ ನೀಲಗಂಗಾ ದೇವಿಯ ಪಲ್ಲಕ್ಕಿ ಉತ್ಸವ ಪ್ರತಿ ವರ್ಷದಂತೆ ವಿಜೃಂಬಣೆಯಿಂದ ಜರುಗಿತು.

ಮೂಲ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ತಾಯಿ ನೀಲಗಂಗಾದೇವಿಯ ಉತ್ಸವವು ಪ್ರತಿ ವರ್ಷದಂತೆ ತಮ್ಮ ಸೇವೆ ಸಲ್ಲಿಸುವ ಸಿಂದಗಿ ಹಾಲುಮತ ಸಮಾಜದ ಡೋಳ್ಳಿನ ಸಂಘದಿಂದ ಡೋಳ್ಳುಗಳು, ಬಜಂತ್ರಿ ಸಮಾಜದವರಿಂದ ವಾದ್ಯ ಮೇಳ ಹಾಗೂ ಭಕ್ತಿಯ ಹಾಡಿಗಾಗಿ ಡಿ.ಜೆ ಸೇವೆ ಸಲ್ಲಿಸಿದರು.
ಅದ್ದೂರಿ ಮೆರವಣಿಗೆಯಿಂದ ಹಳೆಯ ಬಜಾರನ ಬಸವಣ್ಣ ದೇವಸ್ಥಾನಕ್ಕೆ ಆಗಮಿಸಿದಾಗ ತಾಯಿ ಪಲ್ಲಕ್ಕಿಯ ಮುಂಬಾಗದಲ್ಲಿ ಬಸವಣ್ಣ ದೇವಸ್ಥಾನದ ಸುತ್ತಲ್ಲು ನೆರೆದ ಭಕ್ತಾದಿಗಳು ಊರುಳು ಸೇವೆ ಮಾಡಿ ಆಶೀರ್ವಾದ ಪಡೆದರು.
ಪಲ್ಲಕ್ಕಿ ಮಹೋತ್ಸವದಲ್ಲಿ ದೇವರಮನಿಯ ಶಿರುಗೌಡ ದೇವರಮನಿ, ಅಶೋಕ ದೇವರಮನಿ, ಸುನೀಲ ದೇವರಮನಿ, ಅನೀಲ ಪಟ್ಟಣಶೇಟ್ಟಿ, ಪುರಾಣಿಕ ಹಿರೇಮಠ, ಗಂಗಯ್ಯ ನಂದೀಕೋಲ, ಬಸವರಾಜ ಅಂಬಲಗಿ, ಸುನೀಲ ಹಳ್ಳುರ, ಭಿಮಾಶಂಕರ ತಾರಾಪೂರ, ಸಿದ್ದಲಿಂಗ ಪಟ್ಟಣಶೇಟ್ಟಿ, ಮುತ್ತು ಪಟ್ಟಣಶೇಟ್ಟಿ, ಪ್ರಶಾಂತ ಪಟ್ಟಣಶೇಟ್ಟಿ, ಈರಣ್ಣ ದಸ್ಮಾ, ಪ್ರಾಚಾರ್ಯ ಡಾ.ಶರಣಬಸವ ಜೋಗುರ ಇದ್ದರು.
