
ಸಿಂದಗಿ : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಸಿಂದಗಿಯಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯ ನಿಮಿತ್ಯ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಭಕ್ತ, ಕವಿತ್ವ ಮತ್ತು ಸಂಗೀತದಲ್ಲಿಯ ಸಾಧನೆಗೆ ಜಾತಿ ಎಂದೂ ತೊಡಕಾಗುವುದಿಲ್ಲ ಎನ್ನುವುದಕ್ಕೆ ಕನಕದಾಸರ ಜೀವನ ಒಂದು ಉದಾಹರಣೆ ಎನ್ನಬಹುದು.
ಕನಕದಾಸರು ತಮ್ಮ ಲೌಕಿಕ ಜೀವನದಿಂದ ಆದ್ಯಾತ್ಮ ಜೀವನಕ್ಕೆ ಸಾಗುವ ಮಾರ್ಗ ತೋರಿಸಿ ಕುಲಗಳ ಹೆಸರಿನಲ್ಲಿ ಬಡಿದಾಡುವುದನ್ನು ಬಿಟ್ಟು ಮನು ಕುಲಕ್ಕೆ ಸಮಾನತೆ ಸಾರಿದ ಮಹಾನ್ ದಾರ್ಶನಿಕರು, ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮುಖಂಡ ವೈ.ಸಿ.ಮಯೂರ ಹೇಳಿದರು.
ಈ ಸಂಧರ್ಬದಲ್ಲಿ ದ.ಸಂ.ಸ ತಾಲೂಕ ಸಂಚಾಲಕ ಶರಣು ಚಲವಾದಿ, ವಿದ್ಯಾರ್ಥಿ ಒಕ್ಕೂಟದ ತಾಲೂಕು ಸಂಚಾಲಕ ಸುನೀಲ ಸುಂಗಠಾಣ ಪದಾಧಿಕಾರಗಳಾದ ಜೈ ಭೀಮ ತಳಕೇರಿ,ಮುತ್ತು ಮಲಘಾಣ,ಪ್ರಕಾಶ ಹಜೇನವರ,ಪ್ರಮೋದ ಬರಗಲ,ರವಿ ಹಿಪ್ಪರಗಿ ಮತ್ತಿತ್ತರು ಉಪಸ್ಥಿತರಿದ್ದರು.

