Home News ಮೂರು ತಿಂಗಳ ನಂತರ RCB ಕೇರ್ಸ್ ಇಂದ ಅಭಿಮಾನಿಗಳಿಗೆ ಪೋಸ್ಟ್

ಮೂರು ತಿಂಗಳ ನಂತರ RCB ಕೇರ್ಸ್ ಇಂದ ಅಭಿಮಾನಿಗಳಿಗೆ ಪೋಸ್ಟ್

ಅಭಿಮಾನಿಗಳನ್ನು ತಂಡದ 12ನೇ ಸೈನಿಕರೆಂದ ಆರ್.ಸಿ.ಬಿ

by vegadhut@gmail.com.
0 comments

RCB ಕೇರ್ಸ್ ಮೂರುತಿಂಗಳ ನಂತರ ತನ್ನ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬೇಸರ ದೊಂದಿಗೆ ಅಭಿಮಾನಿಗಳಿಗೆ ಭರವಸೆಯ ನುಡಿಗಳನ್ನಾಡಿದೆ. 

ನಾವು ಪೋಸ್ಟ್ ಮಾಡಿ ಸುಮಾರು ಮೂರು ತಿಂಗಳಕಾಲ ಕಳೆದಿದೆ. ನಮ್ಮಮೌನ, ಖಾಲಿತನದಿಂದಷ್ಟೇ ಅಲ್ಲ, ದುಃಖದಿಂದ ತುಂಬಿದ ತೀವ್ರವಾದ ಮೌನ. ಈ ಮಾಧ್ಯಮದ ಮುಖಾಂತರ ನೀವೆಲ್ಲಾ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಮತ್ತು ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ಜೂನ್ 4ರ ಘಟನೆ

ಎಲ್ಲವನ್ನೂ ಬದಲಾಯಿಸಿತು. ಆ ದಿನ ನಮ್ಮ ಹೃದಯವನ್ನು ಮುರಿಯಿತು. ನಂತರದ ಮೌನವು ಕೇವಲ ನಿಶ್ಯಬ್ಧವಲ್ಲ, ಅದು ಶ್ರದ್ಧೆಯಿ೦ದ ತು೦ಬಿದ ಶಾಂತ ಶ್ರದ್ಧಾಂಜಲಿ.

ಈ ಮೌನದೊಳಗೆ ನೋವನ್ನು ಅನುಭವಿಸುತ್ತಾ ನಾವು ಆಳವಾಗಿ ಯೋಚಿಸಿದ್ದೆವು ಮತ್ತು ಅನೇಕ ವಿಷಯಗಳನ್ನು ಕಲಿತೆವು. ನೋವನ್ನೇ ಶ್ರದ್ಧೆಯಾಗಿ, ನಂಬಿಕೆಯಾಗಿ ರೂಪಿಸಬೇಕೆಂದು ತೀರ್ಮಾನಿಸಿದ್ದೆವು.

banner

ಅದರ ಫಲವೇ ಆರ್‌ಸಿಬಿ ಕೇರ್ಸ್. ನಮ್ಮ ಅಭಿಮಾನಿಗಳು ಮತ್ತು ಸಮುದಾಯಕ್ಕಾಗಿ ನಿಷ್ಠೆಯಿಂದ ರೂಪಿಸಿದ ಒಂದು ಯೋಜನೆ. ಇಂದು ನಾವು ಮರಳಿದ್ದೇವೆ; ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತ, ಕರ್ನಾಟಕದ ಹೆಮ್ಮೆಯಾಗಿ ಮು೦ದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ.

ಆರ್‌ಸಿಬಿ ಕೇರ್ಸ್: ನಾವು ಸದಾ ನಿಮ್ಮೊಂದಿಗಿದ್ದೇವೆ. ಹೆಚ್ಚಿನ ಮಾಹಿತಿ… ಶೀಘ್ರದಲ್ಲೇ ನೀಡಲಾಗುವುದೆಂದು ತಿಳಿಸಿದೆ. 

@RCBTweets

https://x.com/RCBTweets/status/1960923232170819738?t=Dcv9o2Gc8wmvWXiyjgPh2w&s=19

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news