ಸಿಂದಗಿ: ತಾಲ್ಲೂಕಿನ ಚಾಂದಕವಠೆ ಗ್ರಾಮದ ಹಾಲಮರಡಿ ಜಾತ್ರಾ ಮಹೋತ್ಸವದ ನಿಮಿತ್ಯ ರೈತರ ಎತ್ತಿನ ಗಾಡಿ ಓಡಿಸುವ ಹಾಗೂ ಭಾರ ಎತ್ತುವ ಸ್ಪರ್ಧೆಗಳ ಉದ್ಘಾಟನೆ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಜರುಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರದ ಶಾಸಕರಾದ ರಮೇಶ ಭೂಸನೂರ ರವರು ಶ್ರೀ ಸಿದ್ದೇಶ್ವರ ಜಾತ್ರಾ ನಿಮಿತ್ಯ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದ್ದು ರೈತರ ಬಾಳಿಗೆ ತುಂಬಾ ಖುಷಿಯ ವಿಷಯ, ಮುಂದಿನ ಪೀಳಿಗೆಗೆ ಇಂತಹ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಗಪ್ಪ ಶಿವೂರ, ನಾನಾಗೌಡ ಪಾಟೀಲ, ರವಿ ನಾಯ್ಕೋಡಿ, ಪಂಡಿತ ಚೌಧರಿ, ಧರೇಪ್ಪ ಕಂಟಿಗೊಂಡ, ಮಡ್ಯಪ್ಪ ಸೊನ್ನದ, ಧರ್ಮಣ್ಷ ಹಿರೇಕುರುಬರ, ಮಡ್ಯಪ್ಪ ಸೊನ್ನದ ಹಾಗೂ ಹಾಲು ಮತದ ಬಾಂಧವರು, ಗ್ರಾಮಸ್ಥರು ಉಪಸ್ಥಿತರಿದ್ದರು.
