ಸಿಂದಗಿ : ಸೈಕಲ್ ಡ್ರಿಮ್ಸ್ ಮನೆ-ಮನ ಅಂಗಳದಲ್ಲಿ ಜಾನಪದ, ಕವಿ-ಕಾವ್ಯ ಗಾಯನ, ರಂಗ ನಮನ, ಕಾವ್ಯ ಓದು ಇಂತಹ ಹಲವು ಕಾರ್ಯಕ್ರಮಗಳು ಮೂಡಿಬಂದಿವೆ ಎಂದು ನಾಗೇಶ ತಳವಾರ ಹೇಳಿದರು.
ನಗರದ ಬಸವ ಮಂಟಪದಲ್ಲಿ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ನಾಗೇಶ ತಳವಾರ 2016ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾದ ಮಾಧ್ಯಮರಂಗ ಪೌಂಡೇಶನ್ (ನೋಂ), ಸಿಂದಗಿ 15 ಜನ ಸ್ನೇಹಿತರೊಂದಿಗೆ ಪ್ರಾರಂಭಿಸಲಾಗಿತ್ತು. ಈ ಪೌಂಡೇಶನ್ ನಲ್ಲಿರುವ ಎಲ್ಲರು ಹೆಸರಾಂತ ಸುದ್ದಿ ವಾಹಿನಿ, ಪತ್ರಿಕೆ, ಹಾಗೂ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಕಾರ್ಯನಿರ್ವಹಿಸಿದವರಾಗಿದ್ದು ಹಲವು ಕಾರಣಗಳಿಂದ ಕೆಲವು ವರ್ಷಗಳ ಕಾಲ ಯಾವುದೇ ಕಾರ್ಯಕ್ರಮಗಳು ಹಮ್ಮಿಕೊಂಡಿರಲಿಲ್ಲ. ಬೆಂಗಳೂರಿನಲ್ಲಿ ಪ್ರಾರಂಭವಾದ ಪೌಂಡೇಶನ್ ಇಗ ಮೂರು ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಸಿದ್ದತೆ ಮಾಡಿಕೊಂಡಿದೆ ಒಂದು ಬೆಂಗಳೂರು, ಎರಡು ದಾರವಾಡ ಮತ್ತು ನಮ್ಮ ಸಿಂದಗಿಯಲ್ಲಿ ದಿನಾಂಕ 28 ಜನೇವರಿಯಂದು ಶ್ರೀ ಶಾಂತಗಂಗಾಧರ ಮಹಾಸ್ವಾಮಿಜಿಗಳು ಗುರುದೇವ ಆಶ್ರಮ, ಸಿಂದಗಿ ಇವರ ದಿವ್ಯ ಸಾನಿದ್ಯದಲ್ಲಿ ಸಿಂದಗಿ ಶಾಸಕರಾದ ರಮೇಶ ಭೂಸನೂರ ಉದ್ಘಾಟಿಸಲಿದ್ದಾರೆ ನಗರದ ಪ್ರಮುಖರು ಬಾಗಿಯಾಗಲಿದ್ದಾರೆ.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಳಕಳಿ ಹೊಂದಿದ ಪಕ್ಕದ ದೇ.ಹೀಪ್ಪರಗಿ ತಾಲೂಕಿನವರಾದ ಅವರ ಸಮಾಜ ಸೇವೆಯನ್ನು ಗುರುತಿಸಿ ಶ್ರೀ ಮಡಿವಾಳಪ್ಪ ಕರದಾಳಿ ಇವರಿಗೆ ವಿಶೇಷ ಸನ್ಮಾನ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಸಿಂದಗಿ ಜನತೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಪೌಂಡೇಶನ್ ಅಧ್ಯಕ್ಷರಾದ ನಾಗೇಶ ತಳವಾರ ವಿನಂತಿಸಿದ್ದಾರೆ. ಮಲ್ಲು ಹಿರೋಳ್ಳಿ, ಸಂಜೀವಕುಮಾರ ಡಾಂಗಿ, ರಮೇಶ ಯಳಮೇಲಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.