
ವರದಿ: ಮಲ್ಲಿಕಾಜು೯ನ ಎನ್.ಕೆಂಭಾವಿ ಬ್ರಹ್ಮದೇವನಮಡು
ಸಿಂದಗಿ : ಪ್ರತಿಯೊಬ್ಬರೂ ಧಮ೯ದ ಹಾದಿಯಲ್ಲಿ ನಡೆದಾಗ ಮಾತ್ರ ಸನ್ಮಾಗ೯ ಸಿಗಲಿದೆ ಎಂದು ದೇವಸ್ಥಾನದ ಅಚ೯ಕ ನಿಂಗಣ್ಣಚಾಯ೯ ಜೋಶಿ ಹೇಳಿದರು.
ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ ಶನಿವಾರ ಆರಾಧ್ಶದೈವ ಶ್ರೀ ಬಲಭೀಮೇಶ್ವರ ದೇವರಿಗೆ ಬೆಳ್ಳಿ ಮೂತಿ೯ ಪ್ರತಿಷ್ಠಾಪನೆ ಕಾಯ೯ಕ್ರಮದಲ್ಲಿ ಮಾತನಾಡಿದ ಅವರು, ಭಾರತ ಧಮ೯ ಪ್ರಧಾನವಾದ ದೇಶ.ಹತ್ತಾರು ಧಮ೯,ಪರಂಪರೆ,ಸಂಪ್ರದಾಯಗಳು ಅಸ್ತಿತ್ವದಲ್ಲಿವೆ.ಧಮ೯ ಪರಂಪರೆ, ಆಚರಣೆ ವಿಭಿನ್ನವಾಗಿದ್ದರೂ ದೇವರಲ್ಲಿ ಲೀನವಾಗುವುದೇ ಎಲ್ಲದರ ತಿರಳು ಆಗಿದೆ ಎಂದರು.
ಶ್ರೀ ಕಲ್ಶಾಣದ್ದೇಶ್ವರ ಮಠದ ಬಳಿ ಗಂಗಾಪೂಜೆಯೊಂದಿಗೆ ಪ್ರಾರಂಭವಾದ ಮೆರವಣಿಗೆ ಮಹಿಳೆಯರು ಕುಂಭ ಕಳಸದೊಂದಿಗೆ,ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಡೊಳ್ಳು ಬಾರಿಸುವ ಮೂಲಕ ಭವ್ಶ ಮೆರವಣಿಗೆಯೊಂದಿಗೆ ತೆರಳಿ ದೇವಸ್ಥಾನದಲ್ಲಿ ಬೆಳ್ಳಿ ಮೂತಿ೯ಯನ್ನು ಪ್ರತಿಷ್ಠಾಪಿಸಲಾಯಿತು.ನಂತರ ವಿಶೇಷ ಪೂಜೆ,ಹೋಮ ಹವನ,ದೀಪಾಲಂಕಾರ ಮಾಡಲಾಗಿತ್ತು. ಬಳಿಕ ಮುತೈದೆಯರಿಗೆ ಉಡಿ ತುಂಬಲಾಯಿತು.
ಭಕ್ತರಿಗೆ ಪ್ರಸಾದ ವ್ಶವಸ್ಥೆ ಮಾಡಲಾಗಿತ್ತು. ಈ ವೇಳೆ ಪ್ರಮುಖರಾದ ರುದ್ರಣ್ಣಸಾಹು ಮಾನಶೆಟ್ಟಿ,ರೇವಣಸಿದ್ದ ಕೋರವಾರ,ಹಣಮಂತ್ರಾಯಗೌಡ ಚೌಧರಿ,ಎಸ್.ವೈ.ಅಮರಗೋಳ,ಬಸವರಾಜ ಮಾನಶೆಟ್ಟಿ,ಕೆ.ಡಿ.ಸೀತನೂರ,ಮಲ್ಲಿಕಾಜು೯ನ ಮನಗೂಳಿ,ಭೀಮಣ್ಣಸಾಹು ಮನಗೂಳಿ,ದೇವಿಂದ್ರ ತೊನಶ್ಶಾಳ,ಮಡಿವಾಳಪ್ಪ ಕರಿಕಲ್ಲ್,ನಡಗೇರಪ್ಪ ತಳವಾರ,ಮಲ್ಲಪ್ಪ ಮನಗೂಳಿ,ಮಲ್ಲೇಶಪ್ಪ ಅಮರಗೋಳ,ಮಲ್ಲು ಕೆಂಭಾವಿ,ಡಿ.ಕೆ.ಸೀತನೂರ,ಬಂದೇನಮಾಜ ಸೀತನೂರ,ಚಂದ್ರು ಕೆಂಭಾವಿ,ಮಲ್ಲಿಕಾಜು೯ನ ಯಲಗೋಡ ಸೇರಿದಂತೆ ಗ್ರಾಮದ ಸಕಲ ಭಕ್ತರು ಪಾಲೊಂಡಿದ್ದರು.

