ಜೇವರ್ಗಿ: ಜೇವರ್ಗಿಯಿಂದ ವಿಜಯಪುರ ಹೋಗುವ ಜನರ ಸ್ಥಿತಿ ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 7:00ವರೆಗೆ ಒಂದೇ ಬಸ್ಸು ಬಂದಿದೆ ಕಳೆದ ಒಂದು ವಾರಗಳಿಂದ ಜೇವರ್ಗಿ ಇಂದ ವಿಜಯಪುರಕ್ಕೆ ಹೋಗುವ ಬಸ್ಸುಗಳು ತುಂಬಾ ಕಡಿಮೆಯಾಗಿದೆ, ಸರಿಯಾದ ಟೈಮಿಗೆ ಬಸ್ಸು ಬರ್ತಾ ಇಲ್ಲ ಎಂದು ಸ್ಥಳೀಯರು ತುಂಬಾ ಪರದಾಡುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಬಸ್ಸಿನ ಸೌಲಭ್ಯ ಒದಗಿಸಿಕೊಡಬೇಕೆಂದು ಸ್ಥಳೀಯ ಜನರು ಒತ್ತಾಯಿಸುತ್ತಿದ್ದಾರೆ. ಮಾನ್ಯ ಶಾಸಕರು, ಹಾಗೂ ಸಾರಿಗೆ ಸಚಿವರು ಮತ್ತು ಕಲಬುರ್ಗಿ ಉಸ್ತುವಾರಿ ಸಚಿವರು ಈ ಕೂಡಲೇ ಇತ್ತ ಗಮನ ಹರಿಸಿ ಸ್ಥಳೀಯರಿಗೆ ಸ್ಪಂದಿಸುವ ಅನೂಕುಲವಾಗುವ ಕೆಲಸ ಮಾಡದೆ ಇರುವುದರಿಂದ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.