Home News ಆತ್ಮ ವಂಚನೆ ಮಾಡಿಕೊಂಡ ಜಿಗಜಿಣಗಿ ಮತ ಕೇಳುತ್ತಿದ್ದಾರೆ ; ಕೂಚಬಾಳ ಆರೋಪ

ಆತ್ಮ ವಂಚನೆ ಮಾಡಿಕೊಂಡ ಜಿಗಜಿಣಗಿ ಮತ ಕೇಳುತ್ತಿದ್ದಾರೆ ; ಕೂಚಬಾಳ ಆರೋಪ

by vegadhut@gmail.com.
0 comments

ಸಿಂದಗಿ : ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿ ಮತ ಕೇಳುತ್ತಿರುವ ವಿಜಯಪೂರ ಸಂಸದ ರಮೇಶ ಜಿಗಜಿಣಗಿ ಅವರ ವಿರುದ್ದ ಕಾಂಗ್ರೇಸ್ ವಕ್ತಾರ ರಾಜಶೇಖರ ಎಂ ಕೂಚಬಾಳ ಆಕ್ರೋಶ ವ್ಯಕ್ತ ಪಡಿಸಿದರು.

ಪಟ್ಟಣದ ಖಾಸಗಿ ಹೊಟೇಲನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ದಲಿತರು ಮಲ್ಲಿಕಾರ್ಜುನ ಖರ್ಗೆ ಹಾಗೂ ರಮೇಶ ಜಿಗಜಿಣಗಿ ಇವರಿಬ್ಬರನ್ನು ಸಮಾಜದ ಎರಡು ಕಣ್ಣುಗಳಾಗಿ ಬಾವಿಸಲಾಗುತ್ತದೆ.
ರಮೇಶ ಜಿಗಜಿಣಗಿ ಅವರು 33 ವರ್ಷಗಳ ಇತಿಹಾಸವುಳ್ಳ ರಾಜಕೀಯ ಅನುಭವವಿದ್ದರು ಸಹಿತ ಇಂದಿನ ಸ್ಥಿತಿಯಲಿ ಜಿಗಜಿಣಗಿ ಅವರು ಮೋದಿ ಅವರಿಗಿಂತಲೂ 15 ವರ್ಷಗಳ ಕಾಲ ಮುಂಚಿತವಾಗಿ ಸಂಸತ್ತನಲ್ಲಿ ಇದ್ದು ಇಂದು ಪ್ರಧಾನಿ ಹುದ್ದೆಗೆ ಅರ್ಹರು. ಅವರು ಇಂದು ನಮ್ಮಗ್ಯಾರು ಓಟ ಹಾಕತ್ತಾರೀ ಮೋದಿಗೆ ಓಟ ಹಾಕತ್ತಾರೀ ಅನೋದು ಅತ್ಯಂತ ಬಾಲೀಶವಾಗಿದೆ.

ರಮೇಶ ಜಿಗಜಿಣಗಿ ಅವರು ತಮ್ಮ ಆತ್ಮ ವಂಚನೆ ಮಾಡಿಕೊಂಡು ಇಂತಹ ಮಾತುಗಳನ್ನು ಆಡುತ್ತಿದ್ದಾರೆ. ಸಂಸದರು ತಮ್ಮ ಅಧಿಕಾರದ ಆಸೆಗಾಗಿ ತಮ್ಮ ಸ್ವಾಭಿಮಾನ ಬಿಟ್ಟು ಮಾತನಾಡುವುದಷ್ಟೇ ಅಲ್ಲದೆ ದಲಿತರ ಆಶೋತ್ತರಗಳನ್ನು ಕೆಣಕಿದ್ದಾರೆ. ಸುಮಾರು ಸುಮಾರು 30 ವರ್ಷಗಳ ಕಾಲ ಸಂಸತ್ತಿನಲ್ಲಿದ್ದು ಒಂದೇ ಒಂದು ಪ್ರಶ್ನೇ ಕೇಳಲಾಗದೇ ಇರುವ ಹಿರಿಯ ಸಂಸದರು ಒಂದಡೆ ಇದ್ದರೇ ಇಗ ಸಂಸತ್ತಿಗೆ ಹೋಗಬೆಕೇಂಬ ಆಸೆಯೊಂದಿಗೆ ಕಾಂಗ್ರೇಸ್ ಪಕ್ಷದಿಂದ ಪ್ರೋಪೆಸರ್ ರಾಜು ಆಲಗೂರ ಒಂದಡೆ ಇದ್ದಾರೆ.

ಬಿಜೆಪಿಯ ಮಾಜಿ ಎಂ.ಎಲ್.ಸಿ ಅರುಣ ಶಹಾಪೂರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿಜಯಪೂರಕ್ಕೆ ರಾಜು ಆಲಗೂರರ ಕೊಡುಗೆ ಏನು ಎಂದು ಕೇಳಿದ್ದಾರೆ. ದಲಿತ ಸಂಘಟನೆಗಳ ಹೋರಾಟದೊಂದಿಗೆ ಜಿಲ್ಲಾ ಸಂಚಾಲಕರಾಗಿ ಶಿಕ್ಷಣ ಸಂಘಟನೆ ಹೋರಾಟ ಎಂಬ ಸದ್ದುದೇಶಗಳಿಂದ ಕಾರ್ಯನಿರ್ವಹಿಸಿದ್ದಾರೆ. ದಲಿತರಿಗಾಗಿ ಜಿಲ್ಲೆಯಲ್ಲಿ ನಿರ್ಮಿಸಿರುವ ಬದ್ಧವಿಹಾರ ಅರುಣ ಶಹಾಪೂರ ಅವರಿಗೆ ಕಾಣುವುದಿಲ್ಲ ಎಂದೆನಿಸುತ್ತದೆ. ಅರುಣ ಶಹಾಪೂರ ಇಂತಹ ಹೇಳಿಕೆ ನೀಡುವುದು ಬಿಟ್ಟು ಈ ಜಿಲ್ಲೆಯಲ್ಲಿ ಆಗಿರುವ ಸಮಗ್ರ ಅಭಿವೃದ್ಧಿಗಳ ಮುಂದಿಟ್ಟು ಮತ ಕೇಳಿ. ಎಸ್.ಸಿ/ ಎಸ್.ಟಿ ಉಪಸಮಿತಿಯ ಸದಸ್ಯರಾದ ಅರುಣ ಶಹಾಪೂರ ಇವರು ದಲಿತರಿಗಾಗಿ ಏನು ಕೊಡುಗೆ ನೀಡಿದ್ದಾರೆ ಎಂದು ಮೊದಲು ಆತ್ಮಾವಲೋಕನ ಮಾಡಿಕೋಳಲ್ಲಿ ಎಂದು ಹೇಳಿದರು.ರಾಜು ಆಲಗೂರ ಅವರಿಗೆ ಎಡ/ಬಲ ಎಂಬ ಬೇದ-ಭಾವವಿಲ್ಲದೆ ಎಲ್ಲ ಸಮಾಜದ ಮುಖಂಡರು ಒಂದಾಗಿ ಅವರ ಗೆಲವು ಸಂಭ್ರಮಿಸುತ್ತೇವೆ ಎಂಬ ಆತ್ಮ ವಿಶ್ವಾಸವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಡಿಪಿ ಸದಸ್ಯ ಅಯ್ಯಪ್ಪ ಕಟ್ಟಿಮನಿ, ಸಾಯಬಣ್ಣ ಪುರದಾಳ, ಅಂಬ್ರೀಷ ಚೌಗಲೆ ಸಂತೋಷ ಜಾದವ, ತಿರುಪತಿ ಬಂಡಿವಡ್ಡರ, ಧರ್ಮಣ್ಣ ಯಂಟಮಾನ, ಶ್ರೀಶೈಲ ಜಾಲವಾದಿ, ದಿಲೀಪ ಚೌವ್ಹಾಣ ಇದ್ದರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news