1936 ರಲ್ಲಿ ದಿವಂಗತ ಲಿಂಗೈಕೆ ಪೂಜ್ಯ ಚನ್ನವೀರ ಮಹಾಸ್ವಾಮಿಜಿಗಳು ಸಾರಿಗೆ ಇಲಾಖೆಗೆ ಜಮೀನು ಹಸ್ತಾಂತರಿಸಿದರು. ಇಂದು ಅವರ ನಾಮಾಂಕಿತ ಸರಕಾರದಲ್ಲಿ ಅಂತಿಮಗೊಂಡು ಆದೇಶವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸ್ಥಳಿಯ ಶಾಸಕರ ಕಛೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ನಾನು ಶಾಸಕನಾದ ನಂತರ ಸಾರಂಗಮಠದ ಪೂಜ್ಯ ಡಾ.ಪ್ರಭುಸಾರಂಗದೇವ ಶಿವಾಚಾರ್ಯಾರು ಮತ್ತು ಹಿರಿಯ ವರದಿಗಾರರಾದ ಶಾಂತು ಹಿರೇಮಠ ಅವರು ಹಲವಾರು ದಿನಗಳಿಂದ ಸಿಂದಗಿ ಬಸ್ಸ್ ನಿಲ್ದಾಣಕ್ಕೆ ಪರಮ ಪೂಜ್ಯ ಶ್ರೀ ಚನ್ನವೀರ ಮಹಾಸ್ವಾಮಿಜಿಗಳ ತಂಗುದಾಣ ಎಂಬ ಹೆಸರು ನಾಮಾಂಕಿತಗೋಳ್ಳಬೇಕಾಗಿತ್ತು ಆದರೆ ಇದುವರೆಗಾ ಆಗಿಲ್ಲ ಅದನ್ನು ಮನವರಿಕೆ ಮಾಡಿದರು. ಅದರಂತೆ ಸಾರಿಗೆ ಸಚಿವರಾದ ರಾಮಲಿಂಗಾರಡ್ಡಿ ಅವರು ವಿಶೇಷ ಸಭೆ ಕರೆದು ಪೂಜ್ಯರ ಹೆಸರು ನಾಮಕರಣ ಅಂತಿಮಗೋಳಿಸಿದರು ಅದರಂತೆ ಸರಕಾರದಲ್ಲಿಯು ಆದೇಶವಾಗಿದೆ. ಹೆಸರು ಅಂತಿಮಗೋಳಿಸಿದ ಸಚಿವರಿಗೂ ಹಾಗೂ ಅಧಿಕಾರಿಗಳಿಗೂ ಧನ್ಯವಾದಗಳು ಹೇಳುವೆ. ನಾಳೆ ನಡೆಯುವ ಕಾರ್ಯಕ್ರಮಕ್ಕೆ ಹೇಚ್ಚಿನ ಸಂಖ್ಯೆಯಲ್ಲಿ ಜನರು ಬಾಗವಹಿಸಲು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ರಾಜಶೇಖರ ಕೂಚಬಾಳ, ಮಹಾಂತಗೌಡ ಪಾಟೀಲ, ಸುರೇಶ ಮಳಲಿ, ನೂರಅಹ್ಮದ ಅತ್ತಾರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಶ ಪೂಜಾರಿ ಉಪಸ್ಥಿತರಿದ್ದರು.
ಸಿಂದಗಿಯ ತಾಲೂಕಾ ಕ್ರೀಡಾಂಗಣಕ್ಕೆ ಡಾ.ಬಿ.ಆರ್. ಅಂಬೇಡ್ಕರ ಹೆಸರಿನ ಬಗ್ಗೆ ಇದೆ ಮೋದಲ ಬಾರಿಗೆ ಗಮನಕ್ಕೆ ಬಂದಿದೆ. ನನ್ನ ಮುಂದೆ ಯಾವುದೇ ಪ್ರಸ್ತಾವನೆ ಬಂದಿಲ್ಲ. – ಶಾಸಕ ಅಶೋಕ ಮನಗೂಳಿ.