Home News ಮೋದಿಜಿ ಅವರ ಆಡಳಿತದಲ್ಲಿ ಕ್ರೀಡೆಗೆ ನೂತನ ಶಕ್ತಿ ; ಭೂಸನೂರ.

ಮೋದಿಜಿ ಅವರ ಆಡಳಿತದಲ್ಲಿ ಕ್ರೀಡೆಗೆ ನೂತನ ಶಕ್ತಿ ; ಭೂಸನೂರ.

by vegadhut@gmail.com.
0 comments

ಸಿಂದಗಿ :  2022-23ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಡ ಶಾಲೆಗಳ ಖೋ ಖೋ ಕ್ರೀಡಾಕೂಟ ಸಮಾರಂಭಕ್ಕೆ ಶಾಸಕ ರಮೇಶ ಭೂಸನೂರ ಚಾಲನೆ ನೀಡಿದರು.
ಕ್ರೀಡೆ ಅನ್ನುವದು ಮನುಷ್ಯನಿಗೆ ಆರೋಗ್ಯದ ಸಂಜೀವಿನಿ ಎಂದು ಭಾವಿಸಿದ್ದೆನೆ. ಮಕ್ಕಳಿಗೆ ಪಾಠ ಎಷ್ಟು ಮುಖ್ಯವೊ ಅಷ್ಟೇ ಮುಖ್ಯವಾದದು ಕ್ರೀಡೆಯು ಆಗಿದೆ, ಕ್ರೀಡೆ ಮಕ್ಕಳಿಗೆ ಮಹತ್ವದ ಮೈಲಿಗಲ್ಲು. ರಾಜ್ಯ ಮಟ್ಟದ ಕ್ರೀಡೆಗಳು ಯಾವ ರೀತಿ ಆಯೋಜನೆ ಮಾಡುತ್ತಾರೊ ಅದೆ ರೀತಿಯಾಗಿ ಇಂದು ಚಿಕ್ಕಸಿಂದಗಿ ಗ್ರಾಮಸ್ಥರು ಆಯೋಜನೆ ಮಾಡಿರುವುದು ಸಂತಸದ ವಿಷಯ. ಸಮಯ ಬದಲಾಗಿದೆ ಇಂದು ಹೇಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಕ್ರೀಡೆಗೆ ಹಾಗೂ ಕ್ರೀಡಾ ಪಟುಗಳಿಗೆ ವಿಶೇಷವಾದ ಗೌರವವನ್ನು ನೀಡಿದರ ಪರಿಣಾಮವಾಗಿ  ಇಂದು ಕ್ರೀಡೆಗೆ ನೂತನ ಶಕ್ತಿ ಬಂದಂತಾಗಿದೆ. ಜಗತ್ತಿನ ಹಲವಾರು ರಾಷ್ಟ್ರಗಳು  ಪಾಲ್ಗೋಳುವ ಓಲಂಪಿಕ್ಸ್ ನಂತಹ ಕ್ರೀಡಾಕೂಟದಲ್ಲಿಯು ಭಾರತದ ಕ್ರೀಡಾಪಟುಗಳು ಪದಕಗಳು ತಮ್ಮ ಮುಡಿಗೇರಿಸಿ ಭಾರತ ತನ್ನದೆ ಆದ ಛಾಪು ಮೂಡಿಸುವಂತೆ ಮಾಡಿದ್ದಾರೆ. ಮಕ್ಕಳು ಕ್ರಿಡೆಯನ್ನು ಬೆಳೆಸುವುದರ ಜೊತೆಗೆ ಅವರಿಗೆ ಇಲ್ಲಿ ಆಗಮಿಸಿರುವ ಶಿಕ್ಷಕರು ಗ್ರಾಮಿಣ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಲಿ ಎಂದು ಅಧ್ಯಕ್ಷತೆ ವಹಿಸಿದ ರಮೇಶ ಭೂಸನೂರ ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೇ.ಮೂ.ಶ್ರೀ ಶಿವಯ್ಯ ಹಿರೇಮಠ ಹಾಗೂ ವೇ.ಮೂ.ಶ್ರೀ ಶಾಂತಯ್ಯ ಮಠಪತಿ ವಹಿಸದರು, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಎಂ.ಪಾಟೀಲ, ಜಿ.ಎಸ್.ಬೇನೂರ, ಆರ್.ಎಚ್.ಬಿರಾದಾರ, ಎ.ಎಚ್.ವಾಲೀಕಾರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ದೈಹಿಕ ಶೀಕ್ಷಕರಾದ ಎಸ್.ಬಿ ಚೌದರಿ ಗುರುಗಳು ಹಾಗೂ ಸಂಗಡಿಗರು ಕಾರ್ಯಕ್ರಮ ನಿರೂಪಿಸಿದರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news