Home Uncategorized ಪುಡಿ ರೌಡಿಗಳ ಹೇಡೆಮುರಿ ಕಟ್ಟುವರಾರು?

ಪುಡಿ ರೌಡಿಗಳ ಹೇಡೆಮುರಿ ಕಟ್ಟುವರಾರು?

by vegadhut@gmail.com.
0 comments


ಸಿಂದಗಿ: ನಗರದಲ್ಲಿ ಹಲವಾರು ದಿನಗಳಿಂದ ನಡೆಯುತ್ತಿರುವ ಅತಿಯಾದ ಸಣ್ಣ-ಪುಟ್ಟ ಜಗಳಗಳು ಭಯಾನಕ ಕೃತ್ಯಗಳಿಗೆ ಕಾರಣವಾಗಬಹುದು. ಸಿಂದಗಿ ನಗರದಲ್ಲಿ ಸ್ಟಿಲ್ ಬಟ್ಟನ್ ಸ್ಟಿಕ್, ಲಾಂಗ್, ಹಾಗೂ ಇನ್ನೀತರ ಮಾರಣಾಂತಿಕ ಹಲ್ಲೆಗೆ ಬೇಕಾದ ವಸ್ತುಗಳ ಜೊತೆಗಿಟ್ಟು ಕೊಂಡು ತಿರುಗಾಡುವುದು ಸಹಜವಾಗಿದೆ.
ಪೊಲೀಸರು ಒಂದು ಕೇಸ್ ಮಾಡುತ್ತಾರೆ ಅದುಬಿಟ್ಟು ಎನ್ನು ಮಾಡುತ್ತಾರೆ ಎಂಬ ಉಡಾಪೆಗೆ ಬಂದಿರುವ ಪುಡಿ ರೌಡಿಗಳು ಅವರನ್ನು ರಕ್ಷಿಸುವ ಸಲುವಾಗಿಯೆ ಇರುವ ಹಲವು ಪಟ್ಟಭದ್ರ ಶಕ್ತಿಗಳ ಬಳಿ ತೆರಳಿ ಆಶ್ರಯ ಪಡೆಯುತ್ತಿರುವುದರಿಂದ ಪುಡಿ ರೌಡಿಗಳನ್ನು ಎನು ಮಾಡಲಾಗುತ್ತಿಲ್ಲ ವೆಂದು ಜನ ಸಾಮಾನ್ಯರು ಮಾತನಾಡುತ್ತಿದ್ದಾರೆ.
ಶಾಲಾ ಕಾಲೇಜು ಕಲಿಯಬೇಕಿದ ಮಕ್ಕಳು ಈ ರೀತಿಯಾಗಿ ಹಾದಿ-ಬೀದಿ ಯಲ್ಲಿ ಮಚ್ಚು ಲಾಂಗುಗಳನ್ನು ಹಿಡಿದು ಹೊಡೆದಾಡಿ ಬಡೆದಾಡುತ್ತಿರುವುದರಿಂದ ಮುಂದಿನ ದಿನಮಾನಗಳಲ್ಲಿ ಯಾವ ಹಂತಕ್ಕೆ ಹೋಗುತ್ತದೆ ಎಂಬುದು ಊಹಿಸಿಕೋಳಲಾಗುತ್ತಿಲ್ಲ.


ಮಕ್ಕಳ ತೀಳಿ ಹೇಳಲಾಗದ ಸ್ಥಿತಿಯಲ್ಲಿ ಪಾಲಕರು
ಮಕ್ಕಳು ಶಾಲಾ ಕಾಲೇಜುಗೆ ಹೋಗುತ್ತಾರೆಂದು ಹರ್ಷದಿಂದ ಅವರಿಗೆ ಬೇಕಾದ ಸಾಲ ಸುಲಗಳನ್ನು ಮಾಡಿ ಒಂದು ಹೋಟ್ಟೆಗೆ ತಣ್ಣಿರು ಬಟ್ಟೆಹಾಕಿ ಅವರ ಪೂರೈಕೆಗಳನ್ನು ಪೂರ್ಣ ಗೋಳಿಸುವ ಪಾಲಕರು ಅವರ ನಡುವಳಿಕೆ ಸುಧಾರಿಸಲು ವಿಫಲರಾಗುತ್ತಿದ್ದಾರೆ.
ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಮಕ್ಕಳಿಗೆ ಪ್ರಶ್ನೀಸಿದರೆ ಅವರ ವಿರುದ್ದವಾಗಿ ನಿಲುವ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದ ಹಾಗೆ ನಡೆದುಕೊಂಡು ಇಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿರುವವರ ವಿರುದ್ದ ಸ್ವ ಪ್ರೇರಿತವಾಗಿ ಪೊಲೀಸ್ ಇಲಾಖೆ ಮುನ್ನೇಚ್ಚರಿಕಾ ಕ್ರಮ ತೆಗೆದುಕೋಳ್ಳದಿದ್ದರೆ ಮುಂದೆ ಸಿಂದಗಿ ನಗರಕ್ಕೆ ಅಷ್ಟೇ ಅಲ್ಲದೆ ರಾಜ್ಯಕ್ಕೆ ಆಘಾತಕಾರಿಯಾಗುವ ನಟೋರಿಯಸ್ ರೌಡಿಗಳಾಗಿ ಬೆಳೆಯಬಹುದು.

ಸಮಾಜದ ಪ್ರಮುಖರು ದೃಡ ನಿರ್ಧಾರ ತೆಗೆದುಕೋಳದ ಸ್ಥಿತಿಗೆ
ಪುಡಿ-ರೌಡಿಗಳ ಅಟ್ಟಹಾಸದಿಂದ ಅವರ ವಿರುದ್ದ ಕಾನೂನು ಕ್ರಮ ತೆಗೆದುಕೊಳಲು ಪೊಲೀಸ ಇಲಾಖೆ ಮುಂದಾದರೆ ಸಮಾಜದ ಪ್ರಮುಖರು ದುಷ್ಕೃತ್ಯದಲ್ಲಿ ಭಾಗಿಯಾದವರ ವಿಧ್ಯಾಭ್ಯಾಸದ, ಅವರ ವಯಸ್ಸಿನ, ಹಾಗೂ ಅವರ ಕುಟುಂಬದ ಪರಿಸ್ಥಿತಿ ನೋಡಲಾಗದ ಅವರು ಪೊಲೀಸ್ ಇಲಾಖೆಯವರ ಮುಂದೆ ಕೈ-ಕಟ್ಟಿ ನಿಂತು ಪಿರ್ಯಾಧಿ ಕೊಡಲು ಬಂದವರ ಕೈ-ಕಾಲುಗಳನ್ನು ಹಿಡಿದು ತಿಳಿಹೇಳಿ ಕರೆದುಕೊಂಡು ಹೋಗುತ್ತಾರೆ. ಕರೆದೊಯ್ಯದ ಸಾಯಂಕಾಲದ ವರೆಗೆ ಮನೆ ಸೇರುವ ಅವರು ರಾತ್ರಿಯಾಗುತ್ತಿದ್ದಂತೆ ಮತ್ತದೆ ಚಾಳಿಗೆ ಮರಳುತ್ತಾರೆ ಕೆಲವರ ಜಗಳ ಬಗೆಹರಿಸಿ ಕರೆದೊಯ್ಯದ ಪ್ರಮುಖರು ಅವರ ಸುಧಾರಣೆ ಆಗದೆ ಇರುವುದರಿಂದ ಹಲವು ಪ್ರಮುಖರು ಪೊಲೀಸ ಠಾಣೆಗೆ ಬರುವ ಮುಖವಿಲ್ಲದಂತಾಗಿ ಠಾಣೆಗೆ ಬರುವುದು ನಿಲ್ಲಿಸಿದ್ದ ಉದಾಹರಣೆಯು ಹಲವಾರಿವೆ.


ಪೊಲೀಸರು ಸ್ವಯಂ ಪ್ರೇರಿತರಾಗಿ ಕ್ರಮಕ್ಕೆ ಮುಂದಾಗಬೇಕು
ಗುಪ್ತ ಮಾಹಿತಿಗಳು ಆದರಿಸಿ ಕಾನೂನು ಉಲ್ಲಂಘಿಸುವ ಸಮಾಜ ಘಾತುಕರನ್ನು ಗುರುತಿಸಿ ಲಾಟಿಗೆ ಕೆಲಸ ಕೊಡಬೇಕು, ದುಳ ತುಂಬಿರುವ ಬುಟಿನ ರುಚಿ ರೌಡಿಗಳಾಗಿ ಬೆಳೆಯುತ್ತಿರುವವರಿಗೆ ಉಣಿಸಬೇಕಾಗಿದೆ. ಪೊಲೀಸ ಎಂದರೆ ಎನೆಂಬುದು ತಿಳಿಸಿದಾಗ ಮಾತ್ರ ಅರ್ಥಮಾಡಿಕೊಳ್ಳುವ ಅನಿವಾರ್ಯತೆ ಇರುವವರ ಮೇಲೆ ಸುಕ್ತ ಕಾನೂನು ಕ್ರಮ ತೆಗೆದುಕೋಳ್ಳದೆ ಇದ್ದರೆ ಪೊಲೀಸ ಇಲಾಖೆ ಮೇಲಿರುವ ಅಪಾರವಾದ ನಂಬಿಕೆ ಜನಸಾಮಾನ್ಯರು ಕಳೆದುಕೋಳ್ಳುತ್ತಾರೆ.
ಜನ ಸಾಮಾನ್ಯರ ಅತ್ಯಂತ ಸೌಹಾರ್ದತೆಯ ಜೀವನ ನಡೆಸುವಂತಾಗಲಿ ಪುಡಿ ರೌಡಿಗಳಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬ ಆಶಯ ಜನರಲ್ಲಿ ಇದುವರೆಗೆ ಜೀವಂತವಾಗಿದೆ ಅದನ್ನು ಉಳಿಸಿಕೋಳ್ಳುತ್ತಾರಾ ಎಂಬುದು ನೋಡ ಬೇಕಾಗಿದೆ.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news