ಸಿಂದಗಿ : ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶ ಮಂಟಪ ನೀನೆ ಸಾಯಂಕಾಲ ಭಕ್ತರ ಜಂಗುಳಿಯಿಂದ ಮಂಟಪ ಕುಸಿದು ಬಿದಿರುವ ಘಟನೆ ನಡೆದಿತ್ತು. ರಾತ್ರಿ ಪೂರ್ಣ ಕೆಲಸ ಮಾಡಿ ಗೋಲ್ಡನ್ ಟೆಂಪಲ್ ಮರುಸೃಷ್ಠಿಯಾಗಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದಿನಂತೆ ಗಣೇಶ ಪೂಜಾ ಕಾರ್ಯಕ್ರಮಗಳು ಜರುಗುವುದು ಮತ್ತು ಪ್ರತಿವರ್ಷದಂತೆ ಈ ವರ್ಷವು ಸಂಪೂರ್ಣ ಏಳು ದಿನಗಳ ಕಾಲ ಪ್ರತಿಷ್ಠಾಪನೆ ಮಾಡಲಾಗುವುದೆಂದು ವಿವೇಕಾನಂದ ಗಜಾನನ ಮಂಡಳಿಯ ಅಧ್ಯಕ್ಷರಾದ ಗಂಗಾಧರ ರುಕುಂಪುರ ಸ್ಪಷ್ಟನೆ ನೀಡಿದ್ದಾರೆ.
ರಾತ್ರಿಪೂರ್ಣ ಕೆಲಸ ಮಾಡಿದ್ದ ಗಜಾನನ ಯುವಕ ಮಂಡಳಿಯ ಎಲ್ಲ ಕಾರ್ಯಕರ್ತರಿಗು, ಸಹಕರಿಸಿದ ಊರಿನ ಹಿರಿಯರಿಗು, ಗಣೇಶ ಅಭಿಮಾನಿಗಳಿಗು ಮತ್ತು ಎಲ್ಲ ಇಲಾಖೆ ಅಧಿಕಾರಿಗಳಿಗು ವಿವೇಕಾನಂದ ಗಜಾನನ ಮಂಡಳಿಯ ಉಪಾಧ್ಯಕ್ಷ ಶಿವಾನಂದ ನಿಗಡಿ ಧನ್ಯವಾದಗಳು ತಿಳಿಸಿದ್ದಾರೆ.