
ಸಿಂದಗಿ: ನಗರದ ವಾರ್ಡ ನಂ 18ನೇ ವಾರ್ಡಿನಲ್ಲಿ ಬರುವ ಮುಖ್ಯ ರಸ್ತೆಯ ಕುರಿತು ಜನರು ಹಿಡಿಶಾಪ ಹಾಕುತ್ತಿದ್ದಾರೆ. ನಗರದ ಶಾಲಾ ವಾಹನಗಳು ಹಾಗೂ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಂಪರ್ಕ ಕೊಂಡಿಯಾಗಿದ್ದ ನಗರದ ರಸ್ತೆ ಸಂಪೂರ್ಣ ಹದಗೇಟ್ಟಿದು ಜನರೇ ತಿರುಗಾಡಲು ತೊಂದರೆಯಾಗುತ್ತಿದೆ.
ಸೋಂಪುರ ರಸ್ತೆಯಿಂದ ಹಳೆ ಚಾಂದಕವಠೆ ರಸ್ತೆಗೆ ಹೊಂದುವ ವಾರ್ಡ ನಂ 18ರ ರಸ್ತೆ ಮಳೆಯಲ್ಲಿ ಹಾಗೂ ಬೇಸಿಗೆಯಲ್ಲಿಯು ಚರಂಡಿ ನೀರು, ಹಾಗೂ ವಾರಕೋಮ್ಮೆ ಬರುವ ಕೆರೆ ನೀರಿನಿಂದ ರಸ್ತೆ ಕೆರೆಯಾಗಿ ಮಾರ್ಪಾಡಾದಂತೆ ಕಾಣುತ್ತದೆ.
ಪೂರ್ಣ ವೀಡಿಯೊಗಾಗಿ : https://fb.watch/g12_aLK4-b/
ಶಿಕ್ಷನ ಸಂಸ್ಥೆಗಳಾದ ವಿಧ್ಯಾನಿಕೇತನ ಶಾಲೆ, ಪಂಚತಂತ್ರ, ಅಬು ಶಿಕ್ಷಣ ಸಂಸ್ಥೆ, ಕಾವ್ಯಾ ಕೋಚಿಂಗ್ ಶಾಲೆಗಳಿಗೆ ಸಂಪರ್ಕಕೊಂಡಿಯಾಗಿದೆ. ಅಷ್ಟೆ ಅಲ್ಲದೆ ಬೆಳಗಿನ ಶಾಲಾ ಸಮಯದಲ್ಲಿ ಬರುವ ಶಾಲಾ ವಾಹನಗಳು ಬೆಳ್ಳಿಗೆ ಸುಮಾರು ಅರ್ಧ ಗಂಟೆಗಳ ಕಾಲ ಆ ರಸ್ತೆ ದಾಟಲು ಬೇಕಾಗುತ್ತದೆ .
ಇದರ ಕುರಿತು ವಾರ್ಡ ಸದಸ್ಯ ರಾಜಣ್ಣ ನಾರಾಯಣಕರ ಅವರು ಪುರಸಭೆಯ ವಾಟರ್ ಮ್ಯಾನ್ ಪರಸು ಇವರಿಗೆ ಸಾಕಷ್ಟು ಬಾರಿ ಹೇಳಿದರು ಸ್ಪಂದಿಸುತ್ತಿಲ್ಲಾ. ಅಲ್ಲಿರುವ ಹಾಸ್ಟೇಲ್ ಗೆ ನೀರಿನ ಸೌಲಭ್ಯಕ್ಕಾಗಿ ಖಾಸಗಿ ವ್ಯಕ್ತಿಯಿಂದ ನೀರು ನೀಡಲಾಗುತ್ತಿದೆ ಆ ಪೈಂಪ್ ಒಡೆದು ಸಮಸ್ಯೆಯಾಗಿದೆ ಎಂದು ಪರಸಭೆ ಸಿಬಂಧಿ ವಿರುದ್ದ ಅಸಮಾಧಾನ ಹೊರಹಾಕಿದರು.
ಅಧಿಕಾರಿಗಳಿಗೆ ಸಮಸ್ಯೆ ಕುರಿತು ನೋಡಲು ಹೇಳುವೆ, ಜನರಿಗೆ ತೊಂದರೆ ಆಗದ ರೀತಿಯಲ್ಲಿ ಕೆಲಸ ಮಾಡಲಾಗುವುದು. ರಾಜಶ್ರೀ ತುಂಗಳ ಪುರಸಭೆ ಮುಖ್ಯಾಧಿಕಾರಿ ಸಿಂದಗಿ

