
ದೆಹಲಿ : ರಾಜ್ಯ ಚುನಾವಣೆ ಕುರಿತು ಚುನಾವಣಾ ಆಯುಕ್ತ ರಾಜೀವ ಕುಮಾರ್ ಹಾಗೂ ಆಯುಕ್ತರು ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ಕುರಿತು ಮಾತನಾಡಿದರು.
ಕರ್ನಾಟಕದಲ್ಲಿ ಮೊದಲ ಬಾರಿಗೆ ಮನೆಯಿಂದ ಮತದಾನ ಮಾಡುವ ಅವಕಾಶ ನೀಡಲಾಗಿದೆ. ಮನೆಯ ಬಾಗಿಲಿಗೇ ಚುನಾವಣಾಧಿಕಾರಿಗಳು ಬಂದು ಮತದಾನ ಮಾಡಿಕೊಂಡು ಹೋಗುವರು. ಹೆಚ್ಚು ಮಹಿಳಾ ಮತದಾರರು ನೊಂದಣಿಯಾಗಿದ್ದಾರೆ. 9,17,241 ಮೊದಲ ಬಾರಿ ಮತದಾನ ಮಾಡುತ್ತಿದ್ದಾರೆ. ಎಪ್ರೀಲ್ 1 ಕ್ಕೆ 18 ವರ್ಷ ತುಂಬಿದವರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. 121500 ವಯಸ್ಕರ ಮತದಾರರಿದ್ದಾರೆ, ಗುಡ್ಡುಗಾಡು ಪ್ರದೇಶದಲ್ಲಿ 40ಕ್ಕೂ ಹೇಚ್ಚು ಮತದಾನ ಕೇಂದ್ರಗಳು 24063 ನಗರ ಪ್ರದೇಶದ ಮತಗಟ್ಟೆಗಳು, ಸೂಕ್ಷ್ಮ ಮತಗಟ್ಟೆಗಳು , 400ಕ್ಕೂ ಹೇಚ್ಚು ಇಕೋ ಪ್ರೇಂಡಿ ಮತಕೇಂದ್ರಗಳು, ಸ್ಥಾಪಿಸಲಾಗುತ್ತದೆ.
ಅದೇ ರೀತಿ ಶತಾಯುಷಿ ಮತದಾರರು 16000 ಇದ್ದಾರೆ. ಮಹಿಳಾ ಮತದಾರರು 2,59,26,319, ಪುರುಷ 2,62,42,561 ಹಾಗೂ 4699 ತೃತಿಯ ಲಿಂಗಿ, 5,55,073 ವಿಕಲ ಚೇತನ ಮತದಾರರು
ಬೆಂಗಳೂರಿನಲ್ಲಿ ಕಡಿಮೆ ಮತದಾನ ಆಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಆಯೋಗ. ಬೆಂಗಳೂರು ಆಯ್ ಆಯ‍್ ಸಿ ಯು ಸಹಯೋಗದಲ್ಲಿ ಮತದಾನದ ಜಾಗೃತಿ ಹಾಗೂ ಕಾಲೇಜು ಹಾಗೂ ಸ್ಟಾರ್ಟ್ ಆಪ್
ಅಕ್ರಮ ತಡೆಗೆ 2400 ತಂಡಗಳ ನಿಯೋಜನೆ , ರಾತ್ರಿ ಎ.ಟಿಎಂ ನಲ್ಲಿ ಹಣ ಹಾಕದಂತೆ ಬ್ಯಾಂಕಗಳಿಗೆ ಸೂಚಿಸಲಾಗಿದೆ. 171 ಅಂತರಾಜ್ಯ ಚೆಕಪೋಸ್ಟ್ ಮಾಡಲಾಗಿದೆ.
13 ಎಪ್ರೀಲ್ ಅಧಿಸೂಚನೆ ದಿನಾಂಕ, 20 ಏಪ್ರೀಲ್ ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ ,ಮೇ 10 ಮತದಾನ ದಿನಾಂಕ , ಮೇ 13 ರಂದು ಮತ ಏಣಿಕೆ.
