Home News ರಾಜ್ಯಕ್ಕೆ ಖರ್ಗೆ ಆಗಮಿಸುವ ಹಿನ್ನಲ್ಲೆ ಅದ್ದೂರಿ ಸ್ವಾಗತಕ್ಕೆ ಕಾಂಗ್ರೇಸ್ ಸಭೆ

ರಾಜ್ಯಕ್ಕೆ ಖರ್ಗೆ ಆಗಮಿಸುವ ಹಿನ್ನಲ್ಲೆ ಅದ್ದೂರಿ ಸ್ವಾಗತಕ್ಕೆ ಕಾಂಗ್ರೇಸ್ ಸಭೆ

by vegadhut@gmail.com.
0 comments

ಸಿಂದಗಿ: ನ.6ಕ್ಕೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪ್ರಪ್ರಥಮ ಬಾರಿಗೆ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಕಾರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರರ ಆದೇಶದ ಮೇರೆಗೆ ಮತಕ್ಷೇತ್ರದ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ಕೋಳುರ ಕರೆ ಕೊಟ್ಟರು.

ನಗರದ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಬುದವಾರದಂದು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಿಂದ ಮೊದಲ ಬಾರಿಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ಬಹಳ ಅದ್ದೂರಿಯಿಂದ ಸ್ವಾಗತಿಸಲೂ ಕೆಪಿಸಿಸಿ ನಿರ್ಧರಿಸಿದೆ. ಕಾರಣ ಸಿಂದಗಿ ಮತಕ್ಷೇತ್ರದ ಎಲ್ಲ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕ ಸಂದೀಪ ಬೆಳಗಲಿ, ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ, ಮಲ್ಲಣ ಸಾಲಿ, ಪುರಸಭೆ ಉಪಾಧ್ಯಕ್ಷ ಹಾಸಿಂ ಆಳಂದ, ಶಿವನಗೌಡ ಬಿರಾದಾರ, ಸಂಗನಗೌಡ ಖಾನಾಪೂರ, ಸಂತೋಷ ಹರನಾಳ, ರಾಜು ಕೂಚಬಾಳ, ರಮೇಶ ಗುಬ್ಬೇವಾಡ, ನಿಂಗಣ್ಣ ಚಟ್ಟಿ, ಭೀಮು ವಾಲಿಕಾರ, ಅಮಿತ ಚವ್ಹಾಣ, ಶಾರದಾ ಬೇಟಗೇರಿ, ಮಾಹಾದೇವ ಕೊಂಡಗೂಳಿ, ಶಿವು ಕೋಟಾರಗಸ್ತಿ, ಬಾಗಪ್ಪಗೌಡ ಪಾಟೀಲ, ಭೀಮರಾಯ ಅಮರಗೋಳ, ಇರ್ಫಾನ ಆಳಂದ, ಸುರೇಶ ಪೂಜಾರಿ, ಸದ್ದಾಮ್ ಆಲಗೂರ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪದಾಧಿಕಾರಿಗಳು ಇದ್ದರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news