
ಸಿಂದಗಿ: ಮಕ್ಕಳಿಗೆ ಕೇವಲ ಶಿಕ್ಷಣ ನಿಡುವುದರ ಜತೆಗೆ ಸಂಸ್ಕಾರವನ್ನು ನೀಡಬೇಕು ಆವಾಗ ಮಕ್ಕಳನ್ನು ಉತ್ತಮ ನಾಗರಿಕನ್ನಾಗಿ ಸಮಾಜದಲ್ಲಿ ಬದುಕು ಕಟ್ಟುಕೊಳ್ಳಲು ಸಹಾಯವಾಗುವುದು. ಮಕ್ಕಳು ಪಠ್ಯ ಮತ್ತು ಪಠ್ಯತೇರ ಚಟುವಟಿಕೆಯಲ್ಲಿ ತೋಡಗಿಕೊಳ್ಳಬೇಕು ಎಂದು ಆರ್. ಡಿ. ಪಾಟೀಲ್ ಕಾಲೇಜಿನ ಉಪನ್ಯಾಸಕ ಶಿವರಾಜ ಕುಂದಗೋಳ ಹೇಳಿದರು.
ಇದೇ ಸಂದರ್ಭದಲ್ಲಿ ಶಾಲೆಯ ನಿರ್ದೇಶಕ ಭೀಮಾಶಂಕರ ತಾರಾಪುರ ಮಾತನಾಡಿ, ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗಬೇಕು ಇದು ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ ಮತ್ತು ಮಕ್ಕಳು ಸರ್ವತ್ತೋಮಖ ಬೇಳವಣಿಗೆಯಾಗುತ್ತೆ ಎಂದರು.ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಗಳಾದ ನೃತ್ಯ, ಮಿಮಿಕ್ರಿ, ಫಡ್ ಕಾರ್ನಿವಾಲ್, ಮಹಾನ್ ನಾಯಕರ ವೇಷಧಾರಿ, ಮಡಿಕೆ ಮೇಲೆ ಕರಕುಶಲ ಚಿತ್ರಗಳು, ಬಳಕೆ ಮಾಡಿದ ಬರದ ವಸ್ತುಗಳನ್ನು ಇನ್ನೊಂದು ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುವುದು. ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಸಹ ನಿರ್ದೇಶಕ ಜಿ.ಕೆ.ಪಡಗಾನೂರ, ಶ್ರೀಮಂತ ಮಲ್ಲೇದ, ಪ್ರಶಾಂತ ಕಮತಗಿ, ದತ್ತು ಮಾವೂರ, ಶರಣು ಮಾವೂರ, ಶಾಂತು ಕುಂಬಾರ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೆತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ತೀತರಿದ್ದರು. ಶಾಲೆಯ ಪ್ರಾಂಶುಪಾಲೆ ಶಾಂತಾ ದಸರಿ ಸ್ವಾಗತಿಸಿದರು. ದೈಹಿಕ ಉಪನ್ಯಾಸಕ ಚನ್ನು ಪಡಶೆಟ್ಟಿ ನಿರೂಪಿಸಿ ವಂದಿಸಿದರು.

