ಆಲಮೇಲ : ಸೀನಾ ನದಿ ಹಾಗೂ ಉಜ್ಜನಿ ಡ್ಯಾಂನಿಂದ ಬಿಟ್ಟಿರುವ ನೀರು ಭೀಮಾ ನದಿಗೆ ಸೇರ್ಪಡೆಯಾಗಿ, 3 ಲಕ್ಷ ಕ್ಯೂಸೆಕ್‌ಗಿಂತಲೂ ಹೆಚ್ಚಿನ ಪ್ರವಾಹ ಹೊಳೆಯುತ್ತಿದೆ. ಈ ಆಕ್ರೋಶಿತ ಭೀಮಾ ನದಿ ತೀರದಲ್ಲಿ ಇರುವ ಆರು ಗ್ರಾಮಗಳ ಜನರ ಬದುಕು ಸಂಕಟಕ್ಕೊಳಗಾಗಿದೆ.
ಮನೆಮನೆಗೆ ನುಗ್ಗಿದ ನೀರು… ಹಸುರಿನ ಹೊಲಗಳು ನೀರಿನ ಸಮುದ್ರವಾಗಿವೆ. ಬೆಳೆ ನಾಶ, ಮನೆ ಕಳೆದುಕೊಂಡ ನೋವು – ಗ್ರಾಮಸ್ಥರ ಕಣ್ಣೀರು ನಿಲ್ಲುತ್ತಿಲ್ಲ.

ಇಂತಹ ದುಃಖದ ಹೊತ್ತಿನಲ್ಲಿ ಜಿಲ್ಲಾ ಆಡಳಿತ ನೆರವಿಗೆ ಧಾವಿಸಿದೆ. ಏಳು ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಈಗಾಗಲೇ 250 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪ್ರತಿಯೊಂದು ಕಾಳಜಿ ಕೇಂದ್ರಕ್ಕೂ ನೋಡಲ್ ಅಧಿಕಾರಿಗಳನ್ನು ನೇಮಿಸಿ, ವಿಎಓ, ಪಿಡಿಓ ಸೇರಿದಂತೆ ಸಿಬ್ಬಂದಿ ದಿನರಾತ್ರಿ ಶ್ರಮಿಸುತ್ತಿದ್ದಾರೆ. ಎಂದು ಇಂಡಿ ಉಪ ವಿಭಾಗಾಧಿಕಾರಿ ಅನುರಾಧ ವಸ್ತ್ರದ ತಿಳಿಸಿದ್ದಾರೆ.
ಅವರೊಂದಿಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಹೇಶ ಪೋಧಾರ, ಆಲಮೇಲ ಮತ್ತು ಸಿಂದಗಿ ದಂಡಾಧಿಕಾರಿಗಳು ಇನ್ನಿತರ ಸಿಬ್ಬಂದಿ ವರ್ಗ ಕಾರ್ಯಾಚರಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
