ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಒಟ್ಟಾರೆಯಾಗಿ ಒಂಬತ್ತು ಸ್ಥಳಗಳನ್ನು ಗುರಿಯಾಗಿಸಿ ಏರ್ ಸ್ಟ್ರೈಕ್ ಮುಖಾಂತರ ದಾಳಿ ನಡೆಸಲಾಗಿದ್ದು ಮುರಿದ್ಕೆ, ಮುಜಾಫ, ರಾಬಾದ್, ಬಹಾವಲ್ ಪುರ, ಕೋಟ್ಲಿ, ಚಾಕ್ಅಮ್ರು, ಗುಲ್ ಪುರ್ , ಮತ್ತು ಭಿಂಬರ್ ಪ್ರದೇಶದಗಳಲ್ಲಿ ದಾಳಿ ಮಾಡಲಾಗಿದೆ. ಪರಿಣಾಮ ಲಾಹೋರ್ ಮತ್ತು ಸಿಯಾಲಕೋಟ್ ವಿಮಾನ ನಿಲ್ದಾಣಗಳು ಮುಚ್ಚಲಾಗಿದೆ. ಭಯೋತ್ಪದಕರ ವಿರುದ್ಧದ ದಾಳಿಗೆ ” ಆಪರೇಷನ್ ಸಿಂಧೂರ ” #OperationSindoor ಎಂದು ಕರೆಯಲಾಗುತ್ತಿದೆ.
https://x.com/VishalMalvi_/status/1919862986061049919
ದಾಳಿ ಯಶಸ್ವಿ ಆಗುತ್ತಿದಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಭಾರತ್ ಮಾತಾಕೀ ಜೈ ಎಂದು ಬರೆದುಕೊಂಡಿದ್ದಾರೆ. ಪಹಲ್ಗಾಮ್ ಬಯೋತ್ಪಾದಕರ ದಾಳಿಯಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ನಾಗರಿಕನ ಬರ್ಬರ ಹತ್ಯೆಯ ಪ್ರತಿಕಾರವಾಗಿ ದಾಳಿ ನಡೆಸಲಾಗಿದೆ. ನಂತರ ವಿವರವಾದ ಮಾಹಿತಿ ನೀಡಲಾಗುವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
https://x.com/rajnathsingh/status/1919863929162862747
