ಪರಿಶೀಷ್ಟ ಜಾತಿಗಳಿಗೆ ಮೀಸಲಾತಿ ಇದ್ದರು ಸಹಿತ ಸಂಪೂರ್ಣ ಲಾಭವನ್ನು ಕೇಲವೆ ಕೆಲವು ಜಾತಿಗಳು ಸದುಪಯೋಗ ಪಡೆದುಕೋಳ್ಳುತ್ತಿರುವುದನ್ನು ನೋಡಿದ ಹೋರಾಟಗಾರರು ಕಳೆದ ಮೂವತ್ತು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ ಎಂದು ದಲಿತ ಮುಖಂಡ ರಾಜಶೇಖರ ಕೂಚಬಾಳ ಹೇಳಿದರು.
ಸಿಂದಗಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿರಂತರ ಮೂವತ್ತು ವರ್ಷದ ಹೋರಾಟದ ಪ್ರತಿಫಲವಾಗಿ ಇಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನೆಲ,ಜಲ, ಮೀಸಲಾತಿಯನ್ನು ಪ್ರತಿಯೊಂದು ದಲಿತರಿಗೆ ನ್ಯಾಯ ಬದ್ದವಾಗಿ ಮೀಸಲಾತಿ ಸಿಗಬೇಕು ಎಂಬ ಸದ್ದುದೇಶದಿಂದ ಪರಿಶೀಷ್ಠ ಜಾತಿಯ ಸಮಗ್ರ ಸಮೀಕ್ಷೆ ಪ್ರಾರಂಭಿಸಲಾಗಿದೆ.
ಆದ್ದರಿಂದ ಎಲ್ಲ ಪರಿಶೀಷ್ಟ ಸಮುಧಾಯಗಳು ಮನೆ ಬಾಗಿಲಿಗೆ ಬರುವ ಸಮೀಕ್ಷಾದಾರರಿಗೆ ಸಹಕಾರ ನೀಡಿ ಸಂಪೂರ್ಣವಾದ ಮಾಹಿತಿ ವದಗಿಸಬೇಕು. ಹಾಗೂ ಮುಖ್ಯವಾಗಿ ನಮೂದಿಸ ಬೇಕಾಗಿರುವುದು ಜಾತಿ ಖಾಲಂ. ನನ್ನ ಕುಲ ಬಾಂದವರು ಅವರು ನೀಡುವ ಖಾಲಂ ನಂಬರ 44.1, 44.2 , 44.3. ( ಹೋಲೆಯ, ಹೋಲೆರ, ಹೊಲೇಯ) ಮೂರು ಸಮನಾರ್ಥಕ ಪದಗಳು ಸೂಚಿಸುತ್ತದೆ. ನಿಮ್ಮ ಜಾತಿ ಪ್ರಮಾಣ ಪತ್ರದಂತೆ ನಮೂದು ಮಾಡಿಸಬೇಕಾಗಿದೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಎಂದು ಜಾತಿ ಪ್ರಮಾಣ ಪತ್ರ ಇರುವವರು ಅವರ ಮೂಲಜಾತಿ ನಮೂದಿಸಬೇಕು. ಇಗಿನ ನಮ್ಮ ವಿವರಗಳು ಮುಂಬರುವ ದಿನಮಾನಗಳಲ್ಲಿ ನಮ್ಮ ಮಕ್ಕಳಿಗೆ ನೀಡುವ ಮೀಸಲಾತಿ ಎಂದರು.
101 ಜಾತಗಳಿಗೂ ಸಂಪೂರ್ಣವಾಗಿ ಮೀಸಲಾತಿ ನೀಡುವ ಉದ್ದೇಶ ಈ ಸಮೀಕ್ಷೆಯದ್ದಾಗಿದೆ. ಸಣ್ಣ ಜಾತಿಯೇ ಇರಲಿ ಇಷ್ಟೇ ಜನರು ಇದ್ದೇವೆ ಎಂದರೇ ಅವರ ಜನಸಂಖ್ಯೆಗೆ ಅನಗುಣವಾಗಿ ಮೀಸಲಾತಿ ದೊರಕುವುದು. ಅದನ್ನು ಬಿಟ್ಟು ಸಮಗಾರು, ಚರ್ಮಗಾರಿಕೆ ಮಾಡುವವರೆಲ್ಲರು ಮಾದಿಗ ವೆಂದು ನಮೂದಿಸಬಾರದು ಅವರವರ ಮೂಲ ಜಾತಿ ನಮೂದಿಸಿದ್ದರೆ ಅವರಿಗೆ ಅವರ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ದೋರಕುವುದು. ದಲಿತರಲ್ಲಿಯೇ ಸ್ಪರ್ಶರು ಹಾಗೂ ಅಸ್ಪರ್ಶರು ಇರುವುದರಿಂದ ಇತ್ತೀಚಿನ ದಿನಮಾನಗಳಲ್ಲಿ ಮೀಸಲಾತಿಯನ್ನು ಪ್ರಭಾವದ ಮೇಲೆ ಪಡೆದುಕೋಳ್ಳುವಂತ್ತಾಗಿದೆ. ಹೀಗಾಗಬಾರದೆಂಬ ಉದ್ದೇಶದಿಂದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹಾದೇವಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಒಳ ಮೀಸಲಾತಿಯ ಸಮಗ್ರ ಸಮೀಕ್ಷೆ ನಡೆಸುತ್ತಿದ್ದಾರೆ ಆದ್ದರಿಂದ ಮನೆ ಬಾಗಿಲಿಗೆ ಬರುವ ಸಮೀಕ್ಷಾದಾರರಿಗೆ ಸಹಕರಿಸಿ ಹಾಗೂ ಬಲಗೈ ಸಮುಧಾಯದವರು ಅವರು ನೀಡುವ 44ನೇ ಖಾಲಂನಲ್ಲಿ ಕಡ್ಡಾಯವಾಗಿ ಜಾತಿ ನಮೂದಿಸಿ ಎಂದು ಮನವಿ ಮಾಡಿದರು.
ಸುದ್ದಿಯ ಸಂಪೂರ್ಣ ವೀಡಿಯೋ ಸುದ್ದಿಗಾಗಿ
https://www.facebook.com/share/v/1CGqGVpUVT/
ನಂತರ ಮಾತನ್ನಾಡಿದ ಡಿ.ಎಸ್.ಎಸ್. ಮುಖಂಡ ಚಂದ್ರಕಾಂತ ಶಿಂಗೆ ಸದಾಶೀವ ಆಯೋಗದಲ್ಲಿ ಹಲವು ಲೋಪ-ದೋಷಗಳಾದವು. ಸಮೀಕ್ಷೆ ಸಂಧರ್ಭದಲ್ಲಿ ಹಲಾವುರು ಜನರು ತಮ್ಮ ಜಾತಿಯೇ ಹೇಳಿಕೋಳ್ಳಲಿಲ್ಲ ಹಾಗೂ ಲಕ್ಷಾಂತರ ಜನರು ಸಮೀಕ್ಷೆಯಲ್ಲಿಯೇ ಇರಲಿಲ್ಲ ಎಂಬುದು ಮನಗಂಡ ಸರಕಾರ ಇಂದು ಮೂರು ಹಂತದಲ್ಲಿ ಸಮೀಕ್ಷೆ ಪ್ರಾರಂಬಿಸಿದೆ. ಪ್ರತಿಯೋಬ್ಬರು ಅವರವರ ಮೂಲಜಾತಿ ನಮೂದಿಸಬೇಕು. ಇಂದು ಹೇಚ್ಚಿನ ಮೀಸಲಾತಿ ವದಗಿಸಿಕೋಳ್ಳುವ ದೃಷ್ಠಿಯಿಂದ ಮಾಂಗ, ಸಮಾಗರ, ಮಾದರ ಎಲ್ಲರು ಒಂದೇ ಎಂದು ಬರೆಸುವ ಹನ್ನಾರ ನಡೆದಿದೆ ಅದು ಆಗಬಾರದು. ಯಾರದ್ದೋ ಮಾತು ಕೇಳಿ ನೀವು ನಿಮ್ಮ ಮೂಲಜಾತಿ ನಮೂದಿಸದಿದ್ದರೆ ನಿಮ್ಮ ಮಕ್ಕಳಿಗೆ ಮುಂದಿನ ಪೀಳಿಗೆಗೆ ಮಾಡುವ ಅನ್ಯಾಯವಾಗಿದೆ ಆದ್ದರಿಂದ ನಿಮ್ಮ ಮೂಲಜಾತಿ ನಮೂದಿಸಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ಎಸ್.ಸಿ ಎಸ್.ಟಿ ನೌಕರರ ಸಂಘದ ಅಧ್ಯಕ್ಷರಾದ ಡಿ.ಎಮ್.ಮಾವೂರ, ದಲಿತ ಮುಖಂಡ ಪರಸುರಾಮ ಕಾಂಬಳೆ, ಶ್ರೀನಿವಾಸ ಓಲೇಕಾರ, ಪರಸುರಾಮ ಕೂಚಬಾಳ ಉಪಸ್ಥಿತರಿದ್ದರು.
