190
ರಾಜ್ಯ ಸರಕಾರ ಮತ್ತೊಂದು ನಿಯಮ ಜಾರಿಗೆ ತಂದಿದ್ದು ಇನ್ನು ಮುಂದೆ ಕೆಲವರ ಜೇಬಿಗೆ ಕತ್ತರಿ ಬೀಳಲಿದೆ.
ಬೆಂಗಳೂರಿನ : ಕಬ್ಬನ್ ಉದ್ಯಾನದಲ್ಲಿ ಶಿಸ್ತು ಪಾಲನೆ ಕಡ್ಡಾಯಗೊಳಿಸಲಾಗಿದೆ. ಶಾಸ್ತ್ರ/ಭವಿಷ್ಯ ಹೇಳುವುದು, ಸ್ಕೇಟಿಂಗ್, ಫೋಟೋಶೂಟ್ ಸೇರಿದಂತೆ 20ಕ್ಕಿಂತ ಹೆಚ್ಚು ಜನ ಸೇರುವ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವುದು ನಿಷೇಧಿಸಲಾಗಿದೆ.
ಕಬ್ಬನ್ ಪಾರ್ಕ್ ನಲ್ಲಿ ಪ್ರಮುಖವಾಗಿ ಯಾವುದೆಲ್ಲ ನಿಷಿದ್ಧಿಸಲಾಗಿದೆ ಎಂದರೇ, ಉದ್ಯಾನದ ಒಳ ರಸ್ತೆಗಳಲ್ಲಿ ಬಸ್ಸು, ಲಾರಿ, ಗೂಡ್ಸ್ ವಾಹನ ಹಾಗೂ ಆಟೋಗಳಿಗೆ ಪ್ರವೇಶವಿಲ್ಲ. ಉದ್ಯಾನದ ಆವರಣದಲ್ಲಿ ಮಾರಾಟ ನಿಷಿದ್ಧ ಹಾಗೂ ಧೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆ ಮಾಡುವಂತಿಲ್ಲ. ಪ್ಲಾಸ್ಟಿಕ್ ವಸ್ತುಗಳು, ಯಾವುದೇ ತ್ಯಾಜ್ಯಗಳನ್ನು ಉದ್ಯಾನಕ್ಕೆ ತರವುದು, ಎಲ್ಲೆಂದರಲ್ಲಿ ಎಸೆಯುವುದಕ್ಕೂ ಅವಕಾಶವಿಲ್ಲ. ಪಾರ್ಸೆಲ್ ಊಟ/ತಿಂಡಿ ತರುವುದು ನಿಷಿದ್ಧ. ಮರಗಳನ್ನು ಹತ್ತುವುದು ಅಥವಾ ಅವುಗಳಿಗೆ ಹಾನಿ ಮಾಡುವಂತಿಲ್ಲ. ಬ್ಯಾನರ್ ಹಾಕುವುದು, ಸಭೆ – ಸಮಾರಂಭ ನಡೆಸುವುದು ಸಂಪೂರ್ಣ ನಿಷೇಧ. ಉದ್ಯಾನದಲ್ಲಿ ಪಟಾಕಿ ಹಚ್ಚುವುದು, ಶಬ್ಧ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯಕ್ಕೆ ಕಾರಣವಾಗುವ ಚಟುವಟಿಕೆ ನಡೆಸುವುದು ನಿಷೇಧಿಸಲಾಗಿದೆ.
ಈ ನಿಯಮಗಳು ಕಬ್ಬನ್ ಪಾರ್ಕ್ ಗೆ ಅನ್ವಯಿಸಿದ್ದು ಜನ ಸಾಮಾನ್ಯರು ಯಾವ ರೀತಿ ತೆಗೆದುಕೋಳ್ಳುತ್ತಾರೆ ಎಂದು ನೋಡಬೇಕಿದೆ. ರಾಜ್ಯ ಸರಕಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಎಷ್ಟರ ಮಟ್ಟಿಗೆ ಕ್ರಮ ಜರುಗಿಸುತ್ತಾರೆ ಇಲ್ಲವೇ ಕೇವಲ ನೇಪ ಮಾತ್ರಕ್ಕೆ ನಿಯಮ ಎಂಬಂತಾಗುತ್ತದೆಯಾ ಎಂದು ಮುಂದಿನ ದಿನಮಾನಗಳಲ್ಲಿ ಕಾದು ನೋಡಬೇಕಿದೆ.