ಇಂಡಿಯ ಲಿಪ್ಟ್ ಇರಗೇಶನ್ ನಲ್ಲಿ ಮತ್ತೊಂದು ಟ್ರಾನ್ಸ್ಪಾರಂ ಅಳವಡಿಸಿ ರೈತರಿಗೆ ಅನೂಕೂಲ ಮಾಡಿ ಕೊಡುವ ಕಾರ್ಯಕ್ರಮ ನೇರವೇರಿಸಲಾಗುವುದೆಂದು ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಮೋಹನ್ ರಾಜ್ ಹೇಳಿದರು.
ಸಿಂದಗಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ರೈತರಿಗೆ ಇನ್ನೂ ಪರಿಣಾಮಕಾರಿಯಾಗಿ ನೀರು ವಿತರಣೆ ಮಾಡಬೇಕು ಎನ್ನುವ ದೃಷ್ಠಿಯಿಂದ ಸ್ಕಾಡಾ ನಿರ್ಮಾಣ ಮಾಡಿಕೋಟ್ಟರೆ ಸಿಂದಗಿ ಇಂಡಿ ಮತ್ತು ನಾಗಠಾಣ ಮತಕ್ಷೇತ್ರದ ರೈತರಿಗೆ ಅನೂಕೂಲ ವಾಗುತ್ತದೆ ಎಂದು ಜನ ಪ್ರತಿನಿಧಿಗಳು ಮನವಿ ಮಾಡಿಕೊಂಡಿದ್ದು ಇಗಾಗಲೇ ಡಿ.ಪಿ.ಆರ್ ಮಾಡಲು ಅನೂಮೋದನೆ ಸರಕಾರ ನೀಡಿದೆ. ಇಗಾಗಲೇ ಡಿ.ಪಿ.ಆರ್ ಕೈಗೇತ್ತಿಕೊಂಡಿರುವ ಸಂಸ್ಥೆ ಕೆಲಸ ಪ್ರಾರಂಭಿಸಿದ್ದಾರೆ ಒಂದೂ ವರೆ ತಿಂಗಳಲ್ಲಿ ಮುಗಿಸಿ ವರದಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇಗಾಗಲೇ 64 ಕಿ.ಮಿ ವರೆಗೆ ಕ್ಯಾನಲ್ ರಿಪೇರಿ ಕಾಮಗಾರಿ ಮಾಡಿರುವದನ್ನು ಮುಂದೆ 174 ಕಿ.ಮೀ ವರೆಗೆ ರಿಪೇರಿ ಮಾಡಲು ಡಿಪಿಆರ್ ಮಾಡಲಾಗಿದೆ. ಅದರ ಅಂತಿಮ ವರದಿಗಾಗಿ ಇಂದು ವೀಕ್ಷಣೆ ಮಾಡಾಲಾಗುತ್ತಿದೆ. ಪ್ರಮುಖಖವಾಗಿ ಬಳಗಾನೂರ ಟ್ಯಾಂಕ ಕೆರೆ ನಂತರ ಮತ್ತೆ ಕ್ಯಾನಲ್ ಇರುವುದರಿಂದ ಮುಂದಿನ ಭಾಗದ ರೈತರಿಗೆ ನೀರು ಪೂರೈಕೆ ಮಾಡುವುದು ಕಷ್ಟ ವಾಗುತ್ತಿದೆ. ಅದನ್ನು ಮನಗಂಡ ಇ ಭಾಗದ ಶಾಸಕರುಗಳ ಕೋರಿಕೆ ಮೇರೆಗೆ ಸರಕಾರ ನಮ್ಮಗೆ ಆದೇಶ ಮಾಡಿದೆ. ಬಳಗಾನೂರ ಕೆರೆ ತುಂಬಿಸಿ ಮುಂದಿನ ರೈತರಿಗೆ ನೀರಿನ ಅದೇ ಒತ್ತಡದೊಂದಿಗೆ ವದಗಿಸುವುದು ಹೇಗೆ ಎಂಬ ವರದಿ ನೀಡಿದ್ದಾರೆ ಅದನ್ನು ಸ್ಥಳ ಪರಿಶಿಲನೆ ಮಾಡಿ ವರದಿಯನ್ನು ಸರಕಾರದ ಮುಂದೆ ಇಡಲಾಗುತ್ತದೆ ಎಂದರು.
ಸರಕಾರಿ ಸಂಸ್ಥೆಗಳಿಗೆ ಹಲವು ಕೆಬಿಜೆಎನ್ಎಲ್ ಗೆ ಸೇರಿದ ಸ್ಥಳ ನೀಡಲಾಗಿದೆ. ಆಲಮೇಲ ಅಗ್ನಿ ಶಾಮಕ ಕಛೇರಿಗೆ ಒಂದು ಎಕರೆ, ನ್ಯಾಯಾಲಯ ನಿರ್ಮಾಣಕ್ಕೆ 3 ಎಕರೆ, ಕ್ರಿಡಾಂಗಣ ನಿರ್ಮಾಣಕ್ಕೆ 6 ಎಕರೆ 3 ಗುಂಟೆ, ಪ್ರಜಾ ಸೌಧಕ್ಕೆ 3 ಎಕರೆ 3 ಗುಂಟೆ, ಓಒರ್ ಟ್ಯಾಂಕ್ ನಿರ್ಮಾಣಕ್ಕೆ 1 ಎಕರೆ ಹಾಗೂ ಸುಂಗಠಾಣ ಗ್ರಾಮದಲ್ಲಿ ವಸತಿ ನಿಲಯಕ್ಕಾಗಿ ಅರ್ಧ ಎಕರೆ ಹಾಗೂ ಹೋನ್ನಳ್ಳಿ ಯಲ್ಲಿ ಸ್ಮಶಾನಕ್ಕಾಗಿ ಎರಡು ಎಕರೆ ಭೂಮಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಕೇವಲ ಆಯ್.ಡಿ.ಸಿ ಕ್ಯಾನಲ್ ಮರು ನಿರ್ಮಾಣಕ್ಕೆ ಇಂದು ಡಿ.ಪಿ.ಆರ್ ಮಾಡಲಾಗುತ್ತಿದೆ ಸುಮಾರು 25 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಎಪ್.ಆಯ್.ಸಿ ಕ್ಯಾನಲ್ ಗಳು ಸಂಪೂರ್ಣವಾಗಿ ಹಾಳಾಗಿವೆ ನಂತರ ವೇಗದೂತ ಜನದನಿ ಪ್ರಶ್ನೇಗೆ ಉತ್ತರಿಸಿದ ವ್ಯವಸ್ಥಾಪಕ ನಿರ್ದೇಶಕರು ಆಯ್.ಡಿ.ಸಿ ಕ್ಯಾನಲ್ ನೊಂದಿಗೆ ಎಪ್ .ಆಯ್.ಸಿ ಕ್ಯಾನಲ್ ಕಾಮಗಾರಿ ಕೂಡಾ ಮಾಡಲಾಗುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಅಶೋಕ ಮನಗೂಳಿ, ರಾಂಪೂರ ಮುಖ್ಯ ಕಾರ್ಯ ನಿರ್ವಾಹಕ ಅಭಿಯಂತರ ಮನೋಜಕುಮಾರ , ಆರ್.ರವಿಶಂಕರ ಮುಖ್ಯ ಅಭಿಯಂತರರು ಕೃಷ್ಣಾ ಭಾಗ್ಯ ಜಲ ನಿಗಮ ರಾಂಪೂರ ಪತ್ರಿಕಾಗೋಷ್ಠಿಯಲ್ಲಿ ಉಪಸ್ತಿತರಿದ್ದರು.
VIDEO LINK :
https://youtu.be/rV_HMPiT2x8?si=gkKfrqCtLJX3lHI9
