ಗೂಗಿಹಾಳ ಗ್ರಾಮದ ಜನರ ಬಹುದಿನಗಳ ಬೇಡಿಕೆಯಾದ ಕಂದಾಯ ಗ್ರಾಮವನ್ನಾಗಿ ಸರಕಾರಿ ಘೋಷಿಸಿದೆ.
ಸಿಂದಗಿ : ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರು ಅಲ್ಲಿನ ಗ್ರಾಮಸ್ಥರಿಗೆ ಗೂಗಿಹಾಳ ಗ್ರಾಮವನ್ನು ನಾನು ಕಂದಾಯ ಗ್ರಾಮವನ್ನಾಗಿ ಮಾಡುತ್ತೇನೆ ಎಂಬ ಭರವಸೆ ನೀಡಿದ್ದರು. ನೀಡಿದ ಮಾತಿನಂತೆ ಇಂದು ಸರಕಾರ ಗುಗ್ಗಿಹಾಳ ಗ್ರಾಮವನ್ನು ಕಂದಾಯ ಗ್ರಾಮವಾಗಿ ಘೋಷಿಸಿದೆ. ಇದರ ಹಿಂದೆ ಹಗಲಿರುಳು ಶ್ರಮಿಸಿದ ಶಾಸಕ ಅಶೋಕ ಮನಗೂಳಿ ಕಾರ್ಯಕ್ಷಮತೆಗೆ ಗ್ರಾಮಸ್ಥರು ಮೇಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಹಿರಿಯರಾದ ಮಾಬುಬು ಚೌದರಿ ಶಾಸಕರಿಗೆ ಸಿಹಿ ತಿನಿಸಿ ಸನ್ಮಾನಿಸಿ ಗೌರವಿಸಿದ್ದಾರೆ ಇದೆ ಸಂದರ್ಭದಲ್ಲಿ ಪ್ರಮುಖರಾದ ಕಾಂತನಗೌಡ ಪಾಟೀಲ, ಹಮಿದ ಚೌದ್ರಿ, ಲಕ್ಷ್ಮಣ ಗುಗಿಹಾಳ, ಚಾಂದ ಕಸಾಬ, ಮಾಶ್ಯಕ ಕಸಬ್, ಸೈಪಾಂ ಕಸಬ್, ಸೈಪನ ಚೌದ್ರಿ, ಗುಲಾಮ ಕೊರಬು, ಮಾಬುಬಿ ಚೌದರಿ, ವಜೀರ ಗುಗಿಹಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
