ಇಂದು ಸಿಂದಗಿ ನಗರಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗಮನ 2795 ದಿನಗಳ ಪೂರೈಸಿ ರಾಜ್ಯದಲ್ಲಿ ಇತಿಹಾಸ ರಚಿಸಿದ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರ ದಾಖಲೆಯ ದೀರ್ಘಾವಧಿ ಮುಖ್ಯಮಂತ್ರಿ ಎಂಬ ಹೇಗ್ಗಳಿಕೆಗೆ ಭಾಜನರಾಗುತ್ತಿದ್ದಾರೆ. ಈ ದಿನವನ್ನು ಸಿಂದಗಿ ಮತಕ್ಷೇತ್ರದಲ್ಲಿ ಅವಿಸ್ಮರಣಿಯ ವಾಗಿಸಲು ಹಲವು ಕಾರ್ಯಕ್ರಮಗಳು ರೂಪಿಸಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ : ಪಟ್ಟಣದ ಸ್ವ ಕಛೇರಿಯಲ್ಲಿ ಸೋಮುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಿಂದಗಿ ಶಿಕ್ಷಕರ ಬಹುದಿನಗಳ ಕನಸಾದ ಶಿಕ್ಷಕರ ಭವನದ ಭೂಮಿಪೂಜೆ ಸಮಾರಂಭ ಹಾಗೂ ಸಿಂದಗಿ ಮತಕ್ಷೇತ್ರಕ್ಕೆ ನೂತನವಾಗಿ ಎಂಟು ಪ್ರೌಡಶಾಲೆಗಳು ಮಂಜೂರಾಗಿದ್ದು ಉದ್ಘಾಟನೆಗೋಳಿಸಲು ಕರ್ನಾಟಕ ಸರಕಾರದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಆಗಮಿಸಲಿದ್ದಾರೆ.
ಮಾಜಿ ಸಚಿವ ದಿವಂಗತ ಎಂ.ಸಿ.ಮನಗೂಳಿ ಪ್ರತಿಷ್ಠಾನದಿಂದ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ
ಈಗಾಗಲೇ ಒಟ್ಟು 314 ಶಾಲೆಗಳು ಸರ್ವೆ ಮಾಡಲಾಗಿದೆ. ನೀರು ಮತ್ತು ವಿದ್ಯುತ್ತ ಪೂರೈಕೆ ಇರುವ ಶಾಲೆಗಳಿಗೆ ಪ್ರಥಮ ಹಂತದಲ್ಲಿ ಸಾವಿರ ಲೀಟರ್ ಸಾಮರ್ಥ್ಯವುಳ್ಳ ಶುದ್ಧ ಕುಡಿಯುವ ನೀರಿನ ಘಟಕ ಆಲಮೇಲ, ರಾಂಪುರ ಹಾಗೂ ಸಿಂದಗಿ ನಗರದಲ್ಲಿ ಒಟ್ಟು ಮೂರು ಘಟಕಗಳು ಹಾಗೂ 49 ಶಾಲೆಗಳಿಗೆ ಐದುನೂರು ಲೀಟರ್ ಸಾಮರ್ಥ್ಯವುಳ್ಳ ಶುದ್ಧ ಕುಡಿಯುವ ನೀರಿನ ಘಟಕ ವಿತರಣೆ ಮಾಡಲಾಗುವುದು. ಪ್ರಥಮ ಹಂತದಲ್ಲಿ 52 ಘಟಕಗಳಿಗೆ ಸಚಿವರು ಚಾಲನೆ ನೀಡುವರು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆಲಮೇಲ ಪಟ್ಟಣ ಪಂಚಾಯತ ಅಧ್ಯಕ್ಷ ಸಾದೀಕ ಸುಂಬಡ, ಶರಣಪ್ಪ ವಾರದ, ರಾಜಶೇಖರ ಕೂಚಬಾಳ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಶ ಪೂಜಾರಿ, ಸಂದೀಪ ಚೌರ, ಪ್ರವೀಣ ಕಂಟಿಗೊಂಡ ಇದ್ದರು.
