ಸರ್ವರ್ ಸಮಸ್ಯೆ ಹಾಗೂ ವಿವರವಾದ ಸಮೀಕ್ಷೆ ಆಗಿದ್ದರಿಂದ ಸರಕಾರ ದಿಂದ ನಿಗದಿಪಡಿಸಿದ ಸಮಯದಲ್ಲಿ ಸಂಪೂರ್ಣವಾಗಿ ಸರ್ವೆ ಕಾರ್ಯ ಮುಗಿಯಲಾರದು ಆದ್ದರಿಂದ ಹೇಚ್ಚಿನ ಸಮಯಾವಕಾಶ ನೀಡಬೇಕು ಎಂದು ರಾಜಶೇಖರ ಕೂಚಬಾಳ ಹೇಳಿದರು.
ಸಿಂದಗಿ : ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ನಡೆದ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ರಾಜ್ಯದ ಮುಖ್ಯಮೋತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹಾದೇವಪ್ಪ ಅವರ ಆದೇಶದ ಮೇರೆಗೆ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗವು ಒಳಮೀಸಲಾತಿ ಯ ಸಮಗ್ರ ಸಮೀಕ್ಷೆ ನಡೆಸುತ್ತಿದೆ. ಅದಕ್ಕೆ ಆಯಾ ಸಮಾಜದ ಮುಖಂಡರು, ಯುವಕರು ಸಮೀಕ್ಷಾದಾರರಿಗೆ ಉತ್ತಮವಾದ ಸಹಕಾರವು ನೀಡುತ್ತಿದ್ದಾರೆ. ಆದರೆ ಸಮಸ್ಯೆ ಎದುರಾಗಿರುವುದೆನೆಂದರೆ ನಮ್ಮ ನಮ್ಮ ಕಾಲೋನಿಗಳಲ್ಲಿ ಸಮೀಕ್ಷೆಗೆ ಸುಗಮವಾದರು ಸಹಿತ ಒಂದೊಂದು ಮನೆಗೆ ಅಂದಾಜು 1 ಗಂಟೆ ವರೆಗೆ ಸಮಯ ತೆಗೆದುಕೋಳ್ಳಲಾಗುತ್ತಿದೆ. ಅದರಲ್ಲಿ ಸರ್ವರ ಸಮಸ್ಯೆಯಾದರೆ 2 ರಿಂದ 3 ಗಂಟೆ ಒಮದು ಮನೆಗೆ ಸಮಯ ತೆಗೆದುಕೋಳ್ಳಲಾಗುತ್ತಿದೆ.
ಪರಿಶಿಷ್ಟ ಜಾತಿಗಳ ಕಾಲೋನಿ ಹೋರತು ಪಡಿಸಿ ಬೇರೆ -ಬೇರೆ ಲೇಔಟ್ ಗಳಲ್ಲಿರುವ ಸಮಾಜದವರನ್ನು ಗುರುತಿಸುವುದು ಸರಕಾರ ನಿಗದಿ ಪಡಿಸಿರುವ ಸಮಯದಲ್ಲಿ ಕಷ್ಟಕರವಾಗಿದೆ. ಪ್ರತಿ ಮನೆ-ಮನೆಯ ಸರ್ವೆ ಕಾರ್ಯ ಸಂಪೂರ್ಣ ವಾದಾಗ ಮಾತ್ರ ಒಳ ಮೀಸಲಾತಿಯ ಸ್ಪಷ್ಟ ಚಿತ್ರಣ ತೋರುತ್ತದೆ. ಆದ್ದರಿಂದ ಸಮೀಕ್ಷಾದಾರರಿಗೆ ಹೇಚ್ಚಿನ ಕಾಲಾವಕಾಶ ನೀಡಬೇಕೆಂದು ಸರಕಾರಕ್ಕೆ ಮನವಿ ಮಾಡಿದರು.
ಬಲಗೈ ನಾಯಕರ ತೇಜೋವದೆಗೆ ಖಂಡನೆ.
ಕ್ರಾಂತಿಕಾರಿ ರಥಯಾತ್ರೆ ಒಳ ಮೀಸಲಾತಿಯ ಹೋರಾಟ ಎಂದುಕೊಂಡಿದೇವು ಆದರೆ ಅದು ಆರ್.ಎಸ್.ಎಸ್. ಹಾಗೂ ಬಿ.ಜೆ.ಪಿ ಯ ಏಜೆಂಟ್ ಆಗಿ ಬಿ.ಆರ್.ಭಾಸ್ಕರ ಪ್ರಸಾದ ಕೆಲಸ ಮಾಡುತ್ತಿದ್ದಾರೆ. ಬಲಗೈ ಸಮಾಜದ ಹಿರಿಯರನ್ನು ಮುಖಂಡರನ್ನು ಅಸಂವಿಧಾನ ಪದಗಳನ್ನು ಬಳಸುವುದು ಅವಚ್ಯ ಪದಗಳಿಂದ ನಿಂದಿಸುವುದು ಬಿಡದೆ ಹೋದರೆ ಮುಂದಿನ ದಿನಮಾನಗಳಲ್ಲಿ ಒಡಾಡುವುದು ಕಷ್ಟ ವಾದಿತ್ತು ಎಂದು ಎಚ್ಚರಿಕೆ ನೀಡಿದರು.
ನಂತರ ಮಾತನಾಡಿದ ದಲಿತ ಮುಖಂಡ ಚಂದ್ರಕಾಂತ ಶಿಂಗೆ ಮಾತನಾಡಿ ಸಮೀಕ್ಷೆ ಪ್ರಕ್ರೀಯೆಯಲ್ಲಿ ಕೆಲವು ಲೋಪ ದೋಷಗಳಿವೆ. ಹಿಂದೆ ರೇಷನ್ ಕಾರ್ಡ ಆದರಿತವಾಗಿ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಅಲ್ಲಿ ಎಸ್.ಸಿ ಇರುವವರಿಗೆ ಎಸ್.ಟಿ ಹಾಗೂ ಎಸ್.ಟಿ ಇರುವವರಿಗೆ ಇತರೆ ವರ್ಗದಲ್ಲಿ ಸೇರಿಸಲಾಗಿದೆ ಅದನ್ನು ಸರಿ ಪಡಿಸಬೇಕಾಗಿದೆ. ಬಿ.ಆರ್.ಭಾಸ್ಕರ್ ಪ್ರಸಾದ ಹುಟ್ಟಿಯೇ ಎರಡು ವರ್ಷ ವಾಗಿರಬಹುದು ಎಂದೆನಿಸುತ್ತಿದೆ ಕಾಂಗ್ರೇಸ್ ಸರಕಾರ ಬರುತ್ತಿದಂತೆ ಧ್ವನಿ ಎತ್ತು ಇಂತಹವರು ಬಿಜೆಪಿ ಸರಕಾರದಲ್ಲಿ ಎಲ್ಲಿ ಹೋಗಿದ್ದರು ಅವರದೆ ಸಮಾಜದ ನಾಯಕರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಈ ಪುಣ್ಯಾತ್ಮ ಎಲ್ಲಿ ಹೋಗಿದ್ದಾ ಎಂದು ಪ್ರಶ್ನೀಸಿದರು.
Video Link : https://youtu.be/XjdNujqKZzU
https://www.facebook.com/share/v/12JWs7oHqLN/
101 ಪರಿಶಿಷ್ಟ ಸಮಾಜಕ್ಕೆ ನ್ಯಾಯಾ ಯಾರಾದರು ವದಗಿದರೆ ಅದು ಬಲಗೈ ಸಮಾಜದವರು. ಇವರಿಗೆ ರ ಠ ಹಿಡಿದುಕೊಂಡು ಕಲಿಸಿರುವುದು ಬಲಗೈ ಸಮಾಜ. ನಮ್ಮಿಮದ ಹೋರಾಟ ಕಲಿತು ನಮ್ಮಿಂದ ರಾಜಕೀಯ ಕಲಿತು ಇಂದು ನಮ್ಮ ವಿರುದ್ಧ ಮಾತನಾಡಿ ದೋಡ್ಡವರು ಆಗುತ್ತಿದ್ದರೆ ನಿಮ್ಮಂತ ಮುಟ್ಟಾಳರು ಯಾರಿಲ್ಲ ಎಂದರು. ಒಂದೊಂದು ಸಮಾಜ ಒಡೆದು ಎನ್ನಾದರು ಆಗುತ್ತಿರಿ ಎಂಬುದಿದ್ದರೆ ನೀವು ಎನ್ನು ಆಗುವುದಿಲ್ಲ ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಕೆಲಸಮಾಡಿ ಎಂದು ಸಲಹೆ ನೀಡಿದರು.
ಇದೆ ಸಮಯದಲ್ಲಿ ಒಳ ಮೀಸಲಾತಿ ಯ ಸಮಗ್ರ ಸಮೀಕ್ಷೆ ಕುರಿತು ಜಾಗೃತ್ತಿ ಮುಡಿಸುವ ದೃಷ್ಠಿಯಿಂದ ಪೋಸ್ಟರ್ ಬಿಡುಗಡೆ ಗೋಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀಕಾಂತ ಸೋಮಜಾಳ, ಪರಶುರಾಮ ಕಾಂಬಳೆ, ರವಿ ಹೋಳಿ, ಸಂತೋಷ ಕಾಂಬಳೆ, ಧರ್ಮಣ್ಣ ಯಂಟಮನ, ಶ್ರೀಶೈಲ ಬೂದಿಹಾಳ, ಮಂಜು ಕೊಕಟನುರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಲಸೆ ಹೋದ ಪರಿಶೀಷ್ಟ ಜಾತಿಯವರ ಸರ್ವೆಯಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಕಲಾವಕಾಶ ನೀಡಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆಗಬೇಕು. -ಚಂದ್ರಕಾಂತ ಶಿಂಗೆ ದಲಿತ ಮುಖಂಡ ಸಿಂದಗಿ
