ಸರಕಾರದ ಎರಡು ವರ್ಷದ ಸಾಧನಾ ಸಮಾವೇಶದ ಅಂಗವಾಗಿ ಹೊಸಪೇಟೆ ಜಿಲ್ಲೆಯಲ್ಲಿ ಒಂದು ಲಕ್ಷ ಪಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚವ ಬೈರತಿ ಸುರೇಶ ಹೇಳಿದರು.
ಸಿಂದಗಿ : ಪಟ್ಟಣದ ಕಾಂಗ್ರಸ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕದ ಇತಿಹಾಸ ಪುಟಗಳಲ್ಲಿ ಸುರ್ವಣ ಅಕ್ಷರದಿಂದ ಬರೆದಿಡುವ ಕಾರ್ಯಕ್ರಮ ಇದೆ 20 ರಂದು ಜರುಗುವುದು. ಬಡವರಿಗೆ ನಾವು ನೀಡಿದ ಮಹತ್ವಕಾಂಕ್ಷೆ ಯೋಜನೆಗಳು, ನೀರಾವರಿ ಸೌಲಬ್ಯಗಳು, ಎಲ್ಲ ಮಹಾನಗರ ಪಾಲಿಕೆ, ನಗರ ಪಾಲಿಕೆ, ಪುರಸಭೆ ಪಟ್ಟಣ ಪಂಚಾಯತ ಗಳಿಗೆ ನೀಡಿದ ಸಾವಿರಾರು ಕೋಟಿ ರೂಪಾಯಿಯ ಅನುದಾನವನ್ನು ನೆನಪಿಸುವ ಸಮಯ ಇದ್ದಾಗಿದೆ. ಒಟ್ಟು ವಿಜಯಪುರ ಜಿಲ್ಲೆಯ 16000 ಪಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು ಆದ್ದರಿಂದ ಹೇಚ್ಚನ ಸಂಖ್ಯೆಯಲ್ಲಿ ಸಿಂದಗಿ ಮತಕ್ಷೇತ್ರದಿಂದ ಕಾರ್ಯಕರ್ತರು, ಮುಖಂಡರು ಆಗಮಿಸ ಬೇಕೆಂದು ಮನವಿ ಮಾಡಿದರು.
ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಪುರಸಭೆ ನಗರಸಭೆಯನ್ನಾಗಿ ಮೇಲ್ದರ್ಜೆಗೆ ಎರಿಸಲು ಮನವಿ ಮಾಡಿದ್ದಾರೆ ಸರಕಾರದ ಮುಂದೆ ಪ್ರಸ್ತಾವನೆ ಬಂದರೆ ಸಿಂದಗಿ ನಗರಸಭೆ ಯಾಗಲು ಪ್ರಥಮ ಸ್ಥಾನದಲ್ಲಿರುತ್ತದೆ ಎಂದು ಭರವಸೆ ನೀಡಿದರು.
ಸಿಂದಗಿ ಅಭಿವೃದ್ಧಿ ಕುಂಠಿತಗೊಂಡಿದೆ ಅಭಿವೃದ್ಧಿಗೆ ಸರಕಾರದಿಂದ ಹಣ ಬಿಡುಗಡೆ ಆಗುತ್ತಿಲ್ಲ ಎಂಬ ಮಾತುಗಳಿವೆ ಎಂಬ ವರದಿಗಾರರ ಪ್ರಶ್ನೇಗೆ ಉತ್ತರಿಸಿದ ಅವರು ಸಿಂದಗಿ ಮತ್ತು ಆಲಮೇಲ ತಾಲೂಕಿಗೆ ನೂರು ಕೋಟಿಗು ಅಧೀಕ ಅನುದಾನ ನೀಡಲಾಗಿದೆ. ಸಿಂದಗಿ ಅಭಿವೃದ್ಧಿಗೆ ಹೇಚಿನ ಅನುದಾನ ನೀಡುವೆ . ವಿಜಯಪುರ ಜಿಲ್ಲೆಯಲ್ಲಿಯೆ ಸುಂದರ ನಗರಿಯಾಗಿ ಸಿಂದಗಿ ಮುಂದಿನ ದಿನಗಳಲ್ಲಿ ಮಾರ್ಪಾಡಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಶೋಕ ಮನಗೂಳಿ, ಸಿಂದಗಿ ಬ್ಲಾಕ್ ಅಧ್ಯಕ್ಷ ಸುರೇಶ ಪೂಜಾರಿ, ಆಲಮೇಲ ಪಟ್ಟಣ ಪಂಚಾಯತ ಅಧ್ಯಕ್ಷ ಸಾಧಿಕ ಸುಂಬಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
video : https://www.facebook.com/share/v/1EeKkz6jeU/
